ಮನಾಸ್ಸೆ ಸೊಗಾವರೆ ಅವರ ಅನಿರೀಕ್ಷಿತ ರಾಜೀನಾಮೆಯಿಂದಾಗಿ ತೆರವಾಗಿದ್ದ ಸೊಲಮನ್ಸ್ ನಡುಗಡ್ಡೆಯ ಪ್ರಧಾನಿ ಪಟ್ಟಕ್ಕೆ ದರೆಕ್ ಸಿಕುವಾ ಅವರನ್ನು ಅಲ್ಲಿನ ಸಂಸತ್ ಆಯ್ಕೆ ಮಾಡಿದೆ.
ಸೊಲಮನ್ಸ್ ನಡುಗಡ್ಡೆಯ ರಾಜಕೀಯದಲ್ಲಿ ವಿವಾದಾತ್ಮಕ ನಾಯಕರೆಂದೆ ಬಿಂಬಿತವಾಗಿದ್ದ ಮನಾಸ್ಸೆ ಸೊಗಾವರೆ ಅವರ ನಿರ್ಗಮನದಿಂದ ತೆರವಾಗಿದ್ದ ಪ್ರಧಾನಿ ಸ್ಥಾನಕ್ಕೆ ದರೆಕ್ ಅವರಿಗೆ ಆಡಳಿತಾರೂಢ ಪಕ್ಷದ ವಿದೇಶಾಂಗ ಸಚಿವರಿಂದ ತೀವ್ರ ಪೈಪೋಟಿ ಎದುರಾಗಿತ್ತು.
ಸರಕಾರದ ಪರ ನಾಮಪತ್ರ ಸಲ್ಲಿಸಿದ್ದ ವಿದೇಶಾಂಗ ಸಚಿವ ಪ್ಯಾಟರ್ಸನ್ ಮೊಟಿ ಅವರನ್ನು ವಿರೋಧ ಪಕ್ಷದ ದರೆಕ್ ಅವರು 32-15 ಮತಗಳ ಅಂತರದಿಂದ ಸೋಲಿಸಿ ನೂತನ ಪ್ರಧಾನಿಯಾಗಿ ಆಯ್ಕೆಯಾಗುವಲ್ಲಿ ಸಫಲರಾಗಿದ್ದಾರೆ.
ತಮ್ಮ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದ ನೂತನ ಪ್ರಧಾನಿ ದರೆಕ್ ಸಿಕುವಾ, ತಮ್ಮ ಅಧಿಕಾರಾವಧಿಯಲ್ಲಿ ರಾಷ್ಟ್ರದ ಏಳ್ಗೆಗಾಗಿ ಹಗಲಿರುಳು ಶ್ರಮಿಸುವುದಾಗಿ ತಿಳಿಸಿದ್ದಾರೆ.
|