ಭ್ರಷ್ಟಾಚಾರ ಆರೋಪದಿಂದ ತೀವ್ರ ಬಳಲಿಹೋಗಿರುವುದರ ನಡುವೆಯೂ, ದ.ಕೊರಿಯಾದ ನೂತನ ಅಧ್ಯಕ್ಷರಾಗಿ ಕಾನ್ಸ್‌ರ್ವೇಟಿವ್ ಪಕ್ಷದ ಅಭ್ಯರ್ಥಿ ಲೀ ಮುಂಗು ಬಾಕ್ ಅವರು ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆ ಹುಂಡೈನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಲೀ ಮುಂಗ್ ಬಾಕ್ ಸೇವೆ ಸಲ್ಲಿಸಿದ್ದಾರೆ.
ಸಿಯೋಲ್‌ನ ಮೇಯರ್ ಆಗಿ ಕಾರ್ಯನಿರ್ವಹಿಸಿರುವ ಲೀ ಅವರು, ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ರೊ ಮೂ ಹ್ಯೂನ್ ಅವರ ವಿರುದ್ಧ ಅಮೋಘ ಜಯ ಸಾಧಿಸಿದ್ದಾರೆ. ಹ್ಯೂನ್ ಅವರು ಏಷ್ಯಾ ರಾಷ್ಟ್ರಗಳ ವಿರುದ್ಧ ದೇಶದ ಆರ್ಥಿಕತೆಯನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ವಿಫಲರಾಗಿರುವುದು ಅವರ ಸೋಲಿಗೆ ಕಾರಣವಾಗಿದೆ.
ಚುನಾವಣೆಯಲ್ಲಿ ಒಟ್ಟಾರೆ ಶೇ.98 ರಷ್ಟು ಮತ ಏಣಿಕೆ ಮುಕ್ತಾಯವಾಗಿದ್ದು, ಅದರಲ್ಲಿ ಲೀ ಅವರು ಶೇ.48.6 ರಷ್ಟು ಮತದಾನಗಳನ್ನು ಪಡೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಆಯೋಗವು ತಿಳಿಸಿದೆ.
ಎರಡನೇ ಸ್ಥಾನದಲ್ಲಿ ಲಿಬರಲ್ ಚುಂಗ್ ಡಾಂಗ್ ಯಂಗ್ ಅವರು ಪಡೆದುಕೊಂಡಿದ್ದು, ಶೇ.26.2 ರಷ್ಟು ಮತ ಗಳಿಸಿದ್ದಾರೆ.
ಇದುವರೆಗೆ ದ.ಕೊರಿಯದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿಯೇ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿರುವ ಸಾಲಿಗೆ ಲೀ ಅವರು ಸೇರ್ಪಡೆಯಾಗಿದ್ದಾರೆ.
|