ಜಾಕೋಬ್ ಜುಮಾ ವಿರುದ್ಧ ಭ್ರಷ್ಟಾಚಾರ ಆರೋಪ ಪಟ್ಟಿ ಸಲ್ಲಿಸಲು ತಮ್ಮ ಹತ್ತಿರ ಸಾಕಷ್ಟು ಸಾಕ್ಷಿಗಳಿವೆ ಎಂದು ಆ ದೇಶದ ಹಿರಿಯ ವಕೀಲರೊಬ್ಬರು ಹೇಳಿದ್ದು, ಈ ಮೂಲಕ ದ.ಆಫ್ರಿಕಾದ ಭಾವಿ ಅಧ್ಯಕ್ಷರೆಂದೆ ಬಿಂಬಿತವಾಗಿರುವ ಜುಮಾ ಭ್ರಷ್ಟಾಚಾರ ಆರೋಪಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಂತಾಗಿದೆ.
ಕಳೆದ ಮಂಗಳವಾರವಷ್ಟೇ ಆಫ್ರಿಕಾ ನ್ಯಾಷನಲ್ ಕಾಂಗ್ರೆಸ್ (ಎಎನ್‌ಸಿ)ಯ ನಾಯರಾಗಿ ಆಯ್ಕೆಯಾಗಿರುವ ಜುಮಾ ವಿರುದ್ಧ ಆರೋಪದ ತನಿಖೆಯನ್ನು ಕೈಗೊಳ್ಳುವುದೆ ಮುಂದಿನ ಹಂತವಾಗಿದ್ದು, ಅವರ ವಿರುದ್ಧ ತೆಗೆದುಕೊಳ್ಳಲಿರುವ ಕಾನೂನು ಕ್ರಮದ ಬಗ್ಗೆ ಹೂಸ ವರ್ಷದಂದು ಪ್ರಕಟಿಸಲಾಗುವುದು ಎಂದು ಮೊಕೊಟೆಡಿ ಎಪ್ಸೆ ಹೇಳಿದ್ದಾರೆ.
ಬಹು ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಒಪ್ಪಂದದಲ್ಲಿ ಆಗಿರುವ ಭ್ರಷ್ಟಾಚಾರದ ತನಿಖೆಯನ್ನು ಕೈಬಿಡುವಂತೆ ಫ್ರೆಂಚ್ ಶಸ್ತ್ರಾಸ್ತ್ರ ಕಂಪೆನಿ ಥಿಂಟ್‌ನಿಂದ 4 ದಶಲಕ್ಷ ರಾಂಡ್ (100 ಸಾವಿರ ಡಾಲರ್) ಹಣವನ್ನು ಜುಮಾ ಅವರು ಸ್ವೀಕರಿಸಿದ್ದು, ಈ ಕುರಿತು ಎಂಪ್ಸೆ ಅವರು ತನಿಖೆ ನಡೆಸುತ್ತಿದ್ದಾರೆ.
ಈ ಸಂಬಂಧ ಜುಮಾ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಈ ಆರೋಪಗಳೆನೆಲ್ಲ ಅವರು ತಳ್ಳಿಹಾಕಿದ್ದು, ಇದೊಂದು ರಾಜಕೀಯ ಪ್ರೇರಿತವಾದದ್ದು ಎಂದಿದ್ದಾರೆ ಎಂದು ಜುಮಾ ಪರ ವಕ್ತಾರರೊಬ್ಬರು ಹೇಳಿದ್ದಾರೆ.
ಆಫ್ರಿಕಾ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಜಾಕೋಬ್ ಜುಮಾ ಅವರ ವಿರುದ್ಧ ತನಿಖೆಯನ್ನು ಮುಂದುವರೆಸಬೇಕೆ ಅಥವಾ ಬೇಡವೆ ಎಂಬುವುದರ ಕುರಿತು ರಾಷ್ಟ್ರೀಯ ಪ್ರಾಧಿಕಾರವು(ಎನ್‌ಪಿಎ) ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅದರ ವಕ್ತಾರ ಟ್ಲಾಲಿ ಟ್ಲಾಲಿ ಖಚಿತಪಡಿಸಿದ್ದಾರೆ.
ಜುಮಾ ವಿರುದ್ಧ ಸಲ್ಲಿಸಲಾಗಿರುವ ಆರೋಪ ಪಟ್ಟಿಗೆ ತಕ್ಕಂತೆ ಎನ್‌ಪಿಎ ವು ಸಾಕಷ್ಟು ಪ್ರಮಾಣದ ಸಾಕ್ಷ್ಯಗಳನ್ನು ಹೊಂದಿದೆ ಎಂದು ಟ್ಲಾಲಿ ಟ್ಲಾಲಿ ಹೇಳಿದ್ದಾರೆ.
|