ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ಗೆ ಸಹಾಯಧನ ಕಡಿತ: ಅಮೆರಿಕ
ಅಮೆರಿಕದ ಕಾಂಗ್ರೆಸ್ ಪಾಕಿಸ್ತಾನಕ್ಕೆ ಪ್ರತಿವರ್ಷ ನೀಡುವ ಸಹಾಯಧನದಲ್ಲಿ 50 ದಶಲಕ್ಷ ಡಾಲರ್ ಹಣವನ್ನು ಕಡಿತಗೊಳಿಸುವುದಕ್ಕೆ ಅನುಮೋದನೆ ಪಡೆದುಕೊಂಡಿದೆ.

ಸೇನಾಸಿಬ್ಬಂದಿಗೆ ನೀಡುವ ಉಳಿದ 250 ದಶಲಕ್ಷ ಡಾಲರ್ ಸಹಾಯಧನವನ್ನು ಷರತ್ತಿನ ಮೇಲೆ ನೀಡುವುದಾಗಿ ವಾಷಿಂಗ್ಟನ್ ತಿಳಿಸಿದೆ.

ಅಧ್ಯಕ್ಷ ಬುಷ್ ಆಡಳಿತವು ಪಾಕಿಸ್ತಾನಕ್ಕೆ ಪ್ರತಿವರ್ಷ ಸೇನಾ ಸಹಾಯಧನವನ್ನು 300 ದಶಲಕ್ಷ ಡಾಲರ್ ನೀಡುತ್ತಿತ್ತು. ಆದರೆ, ಪಾಕಿಸ್ತಾನದಲ್ಲಿ ಸ್ವತಂತ್ರ ನ್ಯಾಯಾಂಗ ಒಳಗೊಂಡಂತೆ ಪ್ರಜಾಪ್ರಭುತ್ವ ಹಕ್ಕುಗಳು ಮರುಸ್ಥಾಪನೆಗೊಂಡಿಲ್ಲ ಎಂದು ರಾಜ್ಯ ಕಾರ್ಯದರ್ಶಿ ಕಾಂಡೋಲಿಜಾ ರೈಸ್ ಅವರು ಪ್ರಮಾಣೀಕರಿಸಿದ ಮೇಲೆ ಅಮೆರಿಕ ಕಾಂಗ್ರೆಸ್ ಸಹಾಯಧನ ಕಡಿತಕ್ಕೆ ಮುಂದಾಯಿತು.

ಉಳಿದ 250 ದಶಲಕ್ಷ ಡಾಲರ್ ಸಹಾಯಧನ ಹಣವನ್ನು ಪಾಕಿಸ್ತಾನವು ಇನ್ನು ಮುಂದೆ ಪ್ರತಿಭಯೋತ್ಪಾದನೆಗಾಗಿ ಹಾಗೂ ಅಲ್ಲಿನ ಸೇನಾ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂದು ಅಮೆರಿಕ ಹೊರಡಿಸಿರುವ ತನ್ನ ಅನುಮೋದನೆಯಲ್ಲಿ ತಿಳಿಸಿದೆ.

ಆದರೆ, ಪಾಕಿಸ್ತಾನವು ಅಮೆರಿಕ ನೀಡುವ ಸಹಾಯಧನದಿಂದ ಭಯೋತ್ಪಾದನೆ ವಿರುದ್ಧ ಹೋರಾಡದೆ, ಭಾರತವನ್ನು ಪ್ರಮುಖ ಗುರಿಯಾಗಿಸಿಕೊಂಡು ಎಫ್-16 ಹಾಗೂ ಸೈಡ್‌ವಿಂಡರ್‌ ಕ್ಷಿಪಣಿಗಳನ್ನು ಖರೀದಿಸಲು ಮುಂದಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.

ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಅಮೆರಿಕದ ಏಜೆನ್ಸಿಯಿಂದ ಮೇಲ್ವಿಚಾರಣೆಗೆ ಒಳಪಟ್ಟ ಪಾಕಿಸ್ತಾನದ ಎಲ್ಲ ಕಾರ್ಯಕ್ರಮಗಳಿಗೆ ಅಮೆರಿಕವು ನೀಡುತ್ತಿದ್ದ ವಾರ್ಷಿಕ 200 ದಶಲಕ್ಷ ಡಾಲರ್ ಸಹಾಯಧನವನ್ನು ಕೂಡ ಕಳೆದ ತಿಂಗಳಷ್ಟೇ ಸ್ಥಗಿತಗೊಳಿಸಿತ್ತು.
ಮತ್ತಷ್ಟು
ಭ್ರಷ್ಟಾಚಾರ ಸುಳಿಯಲ್ಲಿ ಜಾಕೋಬ್ ಜುಮಾ
ನ್ಯೂಜಿಲೆಂಡ್‌ನಲ್ಲಿ ಪ್ರಬಲ ಭೂಕಂಪ- ತುರ್ತು ಪರಿಸ್ಥಿತಿ ಹೇರಿಕೆ
ಪಾಕ್: ಆತ್ಮಹತ್ಯಾ ಬಾಂಬ್ ದಾಳಿಗೆ 54 ಬಲಿ
ದ.ಕೊರಿಯಾದ ನೂತನ ಅಧ್ಯಕ್ಷರಾಗಿ ಲೀ ಮುಂಗ್ ಬಾಕ್ ಆಯ್ಕೆ
ಶ್ರೀಲಂಕಾ: ಪ್ರಭಾಕರನ್‌ಗೆ ಗಾಯ ಸರಕಾರ ಸ್ಪಷ್ಟನೆ
ಅಫಘಾನಿಸ್ಥಾನ: ಅವಧಿ ವಿಸ್ತರಣೆಗೆ ಡಚ್ ಸಂಸತ್ ಬೆಂಬಲ