ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಜಪಾನ್ ಪ್ರಧಾನಮಂತ್ರಿ ಯಾಸುವೊ ಫುಕುಡಾ ಅವರು ಮುಂದಿನ ವಾರ ಚೀನಾಗೆ ಭೇಟಿ ನೀಡಲಿದ್ದಾರೆ.
ಸ್ವಾಭಾವಿಕ ಸಂಪನ್ಮೂಲಗಳ ಹಂಚಿಕೆಯಲ್ಲಿನ ವಿವಾದವು ಕೈಬಿಟ್ಟಿದ್ದರೂ, ಅವರ ಈ ಭೇಟಿಯು ಪ್ರಮುಖ ಪಾತ್ರ ವಹಿಸಲಿದೆ.
ಡಿಸೆಂಬರ್ 27 ರಿಂದ 30 ರವರೆಗೆ ನಾಲ್ಕು ದಿನಗಳ ಕಾಲ ಚೀನಾಗೆ ಭೇಟಿ ನೀಡಲಿರುವ ಫುಕುಡಾ ಅವರು, ಮುಂದಿನ ದಿನಗಳಲ್ಲಿ ಅಧಿಕಾರದಲ್ಲಿ ಉಳಿಯುವುದು ಶೇ.30 ರಷ್ಟು ಮಾತ್ರವಾಗಿದೆ ಎಂದು ಹೇಳಲಾಗಿದೆ.
ದೇಶದಲ್ಲಿನ ಲಂಚಗುಳಿತನ ಹಾಗೂ ಪೆನ್ಷನ್ ದಾಖಲೆಯನ್ನು ಸಮರ್ಪಕವಾಗಿ ನಿರ್ವಹಿಸಲು ಫುಕುಡಾ ವಿಫಲವಾಗಿರುವುದರಿಂದ ಅವರು ಅಧಿಕಾರದಲ್ಲಿರುವುದು ಇದು ನಿರ್ಣಾಯಕವಾಗಿದೆ ಅಲ್ಲಿನ ವಿಶ್ಲೇಷಣಾ ತಜ್ಞರು ಹೇಳಿದ್ದಾರೆ.
ಫುಕುಡಾ ಅವರ ಚೀನಾ ಭೇಟಿಯು ಉಭಯ ದೇಶಗಳ ನಡುವಿನ ಪರಸ್ಪರ ಸಂಬಂಧವು ಅರ್ಥಪೂರ್ಣವಾಗಿ ಮುಂದುವರೆಯಲು ಸಹಾಯಕವಾಗಿದೆ ಎಂದು ಸಂಪುಟದ ಮುಖ್ಯ ಕಾರ್ಯದರ್ಶಿ ನೊಬುಟಕಾ ಮಷಿಮುರಾ ಹೇಳಿದ್ದಾರೆ.
ಜಪಾನ್ ಮಾಜಿ ಪ್ರಧಾನಿ ಜುನಿಚಿರೊ ಕೊಯಿಜುಮಿ ಅವರು ಚೀನಾಗೆ ಭೇಟಿ ನೀಡಿದ ಹಲವು ವರ್ಷಗಳು ಕಳೆದ ನಂತರ ಬೀಜಿಂಗ್ ಹಾಗೂ ಟೋಕಿಯೊ ನಡುವೆ ಒಪ್ಪಂದಗಳು ಏರ್ಪಟ್ಟಿದ್ದವು.
ಏಷ್ಯಾದ ಪ್ರಬಲ ನೆರೆಯ ರಾಷ್ಟ್ರದೊಂದಿಗೆ ಫುಕುಡಾ ಒಪ್ಪಂದ ಮಾಡಿಕೊಳ್ಳುವುದಕ್ಕೆ ಮುಂದಾಗಿರುವುದನ್ನು ಬೀಜಿಂಗ್ ಸ್ವಾಗತಿಸಿದೆ. ಆದರೆ, ಫುಕುಡಾ ಅವರ ಈ ಕ್ರಮಕ್ಕೆ ಅಲ್ಲಿನ ವಿರೋಧ ಪಕ್ಷಗಳು ಟೀಕಿಸಿದ್ದು, ಚೀನಾಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಸಿಂಗಪೂರ್‌ನಲ್ಲಿ ನಡೆದ ಏಷ್ಯಾ ನಾಯಕರ ಸಭೆಯಿಂದಾಚೆಗೆ, ಜಪಾನ್ ಹಾಗೂ ಚೀನಾಗಳ ನಾಯಕರು ಮಹತ್ವದ ನಾಯಕರು ಮಾತುಕತೆ ನಡೆಸಿದ ನಂತರ ಫುಕುಡಾ ಈ ಚೀನಾ ಭೇಟಿ ಕೈಗೊಳ್ಳುತ್ತಿದ್ದಾರೆ.
ಸ್ವಾಭಾವಿಕ ಅನಿಲ, ಉಭಯ ದೇಶಗಳ ನಡುವಿನ ಗಡಿರೇಖೆ ಹಾಗೂ ಪೂರ್ವ ಚೀನಾ ಸಮುದ್ರದಲ್ಲಿರುವ ವಿಶೇಷ ಆರ್ಥಿಕ ವಲಯದಲ್ಲಿನ ಹಂಚಿಕೆ ಹೀಗೆ ಹತ್ತು ಹಲವಾರು ವಿಷಯಗಳು ಉಭಯ ರಾಷ್ಟ್ರಗಳ ಇನ್ನೂ ಇತ್ಯರ್ಥವಾಗಬೇಕಿದೆ.
|