ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ಚೀನಾ ಜಂಟಿ ಸಮರಾಭ್ಯಾಸ ಪ್ರಾರಂಭ
ಆಗ್ನೇಯ ಚೀನಾದಲ್ಲಿರುವ ಭಯೋತ್ಪಾದನೆಯನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಭಾರತ ಹಾಗೂ ಚೀನಾಗಳ ಸೇನೆಗಳು ಶುಕ್ರವಾರದಿಂದ ತಮ್ಮ ಮೊದಲ ಜಂಟಿ ಸೇನಾ ಸಮರಭ್ಯಾಸವನ್ನು ಆರಂಭಿಸಿವೆ. ಜಗತ್ತಿನ ಈ ಎರಡು ಪ್ರಬಲ ಸೇನಾ ರಾಷ್ಟ್ರಗಳು ಇದೇ ಮೊದಲ ಬಾರಿಗೆ ಈ ಸಮರಾಭ್ಯಾಸವನ್ನು ನಡೆಸುತ್ತಿವೆ.

ಯುನ್ನಾನ್ ಪ್ರಾಂತ್ಯದಲ್ಲಿರುವ ಕುನ್ಮಿಂಗ್ ಸೇನಾ ಅಕಾಡೆಮಿಯಲ್ಲಿ ಐದು ದಿನಗಳ ಸಮರಾಭ್ಯಾಸದ ಉದ್ಘಾಟನೆಯಲ್ಲಿ ಉಭಯ ರಾಷ್ಟ್ರಗಳ ರಾಷ್ಟ್ರಧ್ವಜರೋಹಣ ಮಾಡಿದ ನಂತರ ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಪ್ರಾರಂಭಗೊಳಿಸಲಾಯಿತು.

ಜಂಟಿ ಸಮರಾಭ್ಯಾಸದ 'ಹ್ಯಾಂಡ್ ಟು ಹ್ಯಾಂಡ್-2007'ರ ಆರಂಭದಲ್ಲಿ ಚೀನಾದ ಸೈನಿಕರು ಸ್ವರಕ್ಷಣೆಯ ಕ್ರಿಯಾತಂತ್ರಗಳೊಂದಿಗೆ ತಮ್ಮ ಹಾರ್ಡ್ ಕ್ಯೂಗಾಂಗ್‌ ಕಲೆಯನ್ನು ಪ್ರದರ್ಶಿಸಿದರು.

ಕಡಿಮೆ ಅವಧಿಯಲ್ಲಿಯೇ ತತ್‌ಕ್ಷಣವಾಗಿ ಎದುರಾಳಿಗಳನ್ನು ನಿರ್ವಹಿಸುವ ಬಗೆ ಹಾಗೂ ತಮ್ಮನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸುವ ಬಾಂಬ್ ಹಾಗೂ ಗ್ರೈನೇಡ್ ದಾಳಿಯನ್ನು ನಿಗ್ರಹಿಸುವ ಬಗೆಯನ್ನು ಜಂಟಿ ಸಮರಾಭ್ಯಾಸದಲ್ಲಿ ನಡೆಸಲಾಗುವುದು.

ಚೀನಾದ ಸೇನಾಪಡೆಯು ಆರಂಭಿಕ ಹಂತದಲ್ಲಿ ನಡೆಸಿದ ಕಾರ್ಯಾಚರಣೆಯ ಕಾರ್ಯತಂತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದ ಭಾರತದ ಜಮ್ಮು ಮತ್ತು ಕಾಶ್ಮೀರ್ ಲೈಟ್ ಇನ್‌ಫಂಟ್ರಿ ರಕ್ಷಣಾ ಕಾವಲು ಪಡೆಯು ನಂತರ ತನ್ನ ಸಮರಾಭ್ಯಾಸದ ಹಂತವನ್ನು ಆರಂಭಿಸಿತು.

ಉಭಯ ರಾಷ್ಟ್ರಗಳ ನಡುವಿನ ಜಂಟಿ ಸಮರಾಭ್ಯಾಸವು ಭಾರತ ಹಾಗೂ ಚೀನಾ ಸೈನ್ಯಗಳ ನಡುವಿನ ಮಹತ್ವದ ಮೈಲಿಗಲ್ಲಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಮತ್ತಷ್ಟು ಸಹಕಾರ ವೃದ್ಧಿಗೆ ಕಾರಣವಾಗಲಿದೆ ಎಂದು ಭಾರತ ಸಮರಾಭ್ಯಾಸದ ಮುಖ್ಯ ನಿರ್ದೇಶಕ ಬ್ರಿಗೇಡರ್ ಡಿ.ಎಸ್.ದದ್ವಾಲ್ ಅವರು ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.




ಮತ್ತಷ್ಟು
ಶ್ರೀಘ್ರದಲ್ಲಿ ಚೀನಾಗೆ ಜಪಾನ್ ಪ್ರಧಾನಿ ಭೇಟಿ
ಪಾಕ್‌ಗೆ ಸಹಾಯಧನ ಕಡಿತ: ಅಮೆರಿಕ
ಭ್ರಷ್ಟಾಚಾರ ಸುಳಿಯಲ್ಲಿ ಜಾಕೋಬ್ ಜುಮಾ
ನ್ಯೂಜಿಲೆಂಡ್‌ನಲ್ಲಿ ಪ್ರಬಲ ಭೂಕಂಪ- ತುರ್ತು ಪರಿಸ್ಥಿತಿ ಹೇರಿಕೆ
ಪಾಕ್: ಆತ್ಮಹತ್ಯಾ ಬಾಂಬ್ ದಾಳಿಗೆ 54 ಬಲಿ
ದ.ಕೊರಿಯಾದ ನೂತನ ಅಧ್ಯಕ್ಷರಾಗಿ ಲೀ ಮುಂಗ್ ಬಾಕ್ ಆಯ್ಕೆ