ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಮೇಲೆ ದಾಳಿಗೆ ಕೈದಾ ಸಂಚು
ಪಾಕ್ ನಿಯಂತ್ರಿತ ಅಪ್ಘಾನಿಸ್ತಾನ್-ಪಾಕ್ ಗಡಿಭಾಗದಲ್ಲಿ ತಮ್ಮ ತಂಡವನ್ನು ಮತ್ತೇ ಪುನಶ್ಚೇತನಗೊಳಿಸಿಕೊಳ್ಳುತ್ತಿರುವ ಜಗತ್ತಿನ ಅಪಾಯಕಾರಿ ಉಗ್ರಗಾಮಿ ಸಂಘಟನೆ ಅಲ್-ಖೈದಾ, ಪಾಕಿಸ್ತಾನದ ಸರಕಾರ ಮತ್ತು ಮಿಲಿಟರಿ ಮೇಲೆ ತೀವ್ರ ದಾಳಿ ನಡೆಸಲು ಸನ್ನದ್ಧವಾಗಿದೆ ಎಂದು ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಪಾಕಿಸ್ತಾನದಲ್ಲಿನ ಅಲ್-ಖೈದಾ ಚಟುವಟಿಕೆಗಳು ನೇರೆಯ ಅಫ್ಘಾನಿಸ್ತಾನಕ್ಕೆ ಯಾವುದೇ ರೀತಿಯ ತೊಂದರೆಯನ್ನಾಗಲಿ, ಧಕ್ಕೆಯನ್ನಾಗಲಿ ಮಾಡಿಲ್ಲವೆಂದು ತಿಳಿಸಿದ ಪೆಂಟಗಾನ್ ಪರಮೋಚ್ಛ ನಾಯಕರಾಗಿರುವ ಗೇಟ್ಸ್, ಕಳೆದ ಎರಡು ವರ್ಷಗಳಿಂದ ಅಪ್ಘನ್‌ನಲ್ಲಿ ತಾಲಿಬಾನ್ ಹಿಂಸಾಚಾರ ಕಡಿಮೆಯಾಗುತ್ತಿದೆ ಎಂಬ ಅಂಶವನ್ನು ತಿಳಿಸಿದ್ದಾರೆ.

"ಪಾಕಿಸ್ತಾನ-ಅಪ್ಘಾನಿಸ್ತಾನ ಗಡಿ ಭಾಗದ ಹಲವು ಪ್ರಂಟಿಯರ್ ವಲಯಗಳಲ್ಲಿ ಅಲ್-ಖೈದಾ ಮತ್ತೇ ಚಿಗಿತುಕೊಳ್ಳುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ, ಇದರಿಂದಾಗಿ ಇದುವರೆಗೆ ಅಫ್ಘಾನಿಸ್ತಾನಕ್ಕೆ ಯಾವುದೇ ಅಪಾಯವಾಗಿಲ್ಲ" ಎಂದು ಗೇಟ್ಸ್ ತಿಳಿಸಿದ್ದಾರೆ.

"ಅಲ್-ಖೈದಾ ಉಗ್ರಗಾಮಿ ಸಂಘಟನೆಯು ಇದೀಗ ತನ್ನ ಮುಖವನ್ನು ಪಾಕಿಸ್ತಾನದೆಡೆಗೆ ತಿರುಗಿಸಿದ್ದು, ಪಾಕ್ ಸರಕಾರ ಮತ್ತು ಪಾಕಿಸ್ತಾನ ಜನರ ಮೇಲೆ ದಾಳಿ ನಡೆಸುವ ಹುನ್ನಾರವನ್ನು ರಚಿಸಿಕೊಂಡಿದೆ" ಎಂದವರು ಸುದ್ದಿಗಾರರಿಗೆ ವಿವರ ನೀಡಿದರು.

ಇದೇವೇಳೆ, ಅಲ್-ಖೈದಾ ದಾಳಿಯನ್ನು ಸಮರ್ಥವಾಗಿ ಎದುರಿಸುವ ಬಗೆಯ ಕುರಿತು ಪೆಂಟಾಗನ್, ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳಿಗೆ ಸಮರ್ಪಕವಾದ ತರಬೇತಿ ನೀಡಿ, ಉಗ್ರರ ದಾಳಿಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಯುದ್ಧ ಕೌಶಲ್ಯಗಳನ್ನು ತಿಳಿಸಿಕೊಡಲಿದೆ ಎಂದವರು ಹೇಳಿದರು.

ಗೇಟ್ಸ್ ಅಭಿಪ್ರಾಯದಂತೆ ಅಲ್-ಖೈದಾ, ಸೋಮವಾರ ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಕೊಹಾಟ್ ಎಂಬಲ್ಲಿ ಮಿಲಿಟರಿ ಶಿಬಿರದ ಮೇಲೆ ದಾಳಿ ಮಾಡಿದ ಉಗ್ರಗಾಮಿ ಆತ್ಮಹತ್ಯಾ ಬಾಂಬರ್, 10 ಜನ ಮಿಲಿಟರಿ ಅಧಿಕಾರಿಗಳನ್ನು ಕೊಂದು ಹಾಕುವಲ್ಲಿ ಸಫಲವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಮತ್ತಷ್ಟು
ಉಗ್ರರ ಸಂಚು ವಿಫಲಗೊಳಿಸಿದ ಸೌದಿ ಪೋಲೀಸರು
ಭಾರತ-ಚೀನಾ ಜಂಟಿ ಸಮರಾಭ್ಯಾಸ ಪ್ರಾರಂಭ
ಶ್ರೀಘ್ರದಲ್ಲಿ ಚೀನಾಗೆ ಜಪಾನ್ ಪ್ರಧಾನಿ ಭೇಟಿ
ಪಾಕ್‌ಗೆ ಸಹಾಯಧನ ಕಡಿತ: ಅಮೆರಿಕ
ಭ್ರಷ್ಟಾಚಾರ ಸುಳಿಯಲ್ಲಿ ಜಾಕೋಬ್ ಜುಮಾ
ನ್ಯೂಜಿಲೆಂಡ್‌ನಲ್ಲಿ ಪ್ರಬಲ ಭೂಕಂಪ- ತುರ್ತು ಪರಿಸ್ಥಿತಿ ಹೇರಿಕೆ