ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಇಂದಿರಾ ಸಮ್ಮತಿ?
ಅಮೆರಿಕಾಗೆ 1974ರಲ್ಲಿ ಭೇಟಿ ನೀಡಿದ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಲು ಸಿದ್ದರಾಗಿದ್ದರು ಎಂದು ಅಮೆರಿಕದ ದಾಖಲೆಗಳು ಬಹಿರಂಗಪಡಿಸಿವೆ.

ದೇಶದ ಅಗತ್ಯತೆಗಳು ಹಾಗೂ ಆರ್ಥಿಕ ಸ್ಥಿತಿಗತಿಯಿಂದಾಗಿ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಹಸ್ತಾಕ್ಷರ ಹಾಕಲು ಭಾರತ ಸಿದ್ದವಾಗಿದೆ ಎಂದು ಅಮೆರಿಕದ ರಾಯಭಾರಿ ಡ್ಯಾನಿಯಲ್ ಪ್ಯಾಟ್ರಿಕ್ ಅವರಿಗೆ ಹೇಳಿದ್ದರು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಮಾಹಿತಿಯನ್ನು ಪ್ರಕಟಿಸಿದೆ.

ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಅಭಿವೃದ್ಧಿ ಹೊಂದಿದ ಎಲ್ಲಾ ರಾಷ್ಟ್ರಗಳು ಹಸ್ತಾಕ್ಷರ ಮಾಡಿದಲ್ಲಿ ಭಾರತ ಕೂಡಾ ಅಂತಾರಾಷ್ಟ್ರೀಯ ನೀತಿಗಳಿಗೆ ಹಾಗೂ ಶಾಂತಿಗಾಗಿ ಅಣ್ವಸ್ತ್ರ ಪ್ರಯೋಗ ನೀತಿಯನ್ನು ಬೆಂಬಲಿಸಲು ಸಿದ್ದವಿದೆ ಎಂದು ಅಮೆರಿಕ ರಾಯಭಾರಿ ಮೊಯಿನಿಹಾನ್ ಅವರಿಗೆ ಇಂದಿರಾಗಾಂಧಿ ಹೇಳಿದ್ದರು ಎಂದು ದಾಖಲೆಗಳಲ್ಲಿ ಉಲ್ಲೇಖಿಸಿರುವುದನ್ನು ವರದಿ ಮಾಡಿದೆ.

ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಜಗತ್ತಿನ ಎರಡು ಸೂಪರ್‌ಪವರ್ ರಾಷ್ಟ್ರಗಳು ಮೊದಲು ಹಸ್ತಾಕ್ಷರಕ್ಕೆ ಸಮ್ಮತಿ ಸೂಚಿಸಿದಲ್ಲಿ ಮಾತ್ರ ಭಾರತ ಸೇರಿದಂತೆ ಉಳಿದ ರಾಷ್ಟ್ರಗಳು ಅಮೆರಿಕವನ್ನು ಅನುಸರಿಸಲಿವೆ ಎಂದು ಇಂದಿರಾಗಾಂಧಿ ಅವರ ಖಾಸಗಿ ಕಾರ್ಯದರ್ಶಿ ಮಧ್ಯ ಪ್ರವೇಶಿಸಿ ಹೇಳಿದ್ದರು ಎಂದು ಮೊಯಿನಿಹಾನ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಮತ್ತಷ್ಟು
ಪಾಕ್ ಮೇಲೆ ದಾಳಿಗೆ ಕೈದಾ ಸಂಚು
ಉಗ್ರರ ಸಂಚು ವಿಫಲಗೊಳಿಸಿದ ಸೌದಿ ಪೋಲೀಸರು
ಭಾರತ-ಚೀನಾ ಜಂಟಿ ಸಮರಾಭ್ಯಾಸ ಪ್ರಾರಂಭ
ಶ್ರೀಘ್ರದಲ್ಲಿ ಚೀನಾಗೆ ಜಪಾನ್ ಪ್ರಧಾನಿ ಭೇಟಿ
ಪಾಕ್‌ಗೆ ಸಹಾಯಧನ ಕಡಿತ: ಅಮೆರಿಕ
ಭ್ರಷ್ಟಾಚಾರ ಸುಳಿಯಲ್ಲಿ ಜಾಕೋಬ್ ಜುಮಾ