ಅಮೆರಿಕ ಅಧ್ಯಕ್ಷ ಜಾರ್ಜ್‌ಬುಷ್ ಅವರ ಸುಡಾನ್ ದೇಶದ ವಿಶೇಷ ರಾಯಭಾರಿ ಆಂಡ್ರೂ ನ್ಯಾಟ್‌ಸಿಯೋಸ್ ರಾಜೀನಾಮೆ ನೀಡಿದ್ದಾರೆ ಎಂದು ಅಮೆರಿಕ ಅಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ 2006ರಲ್ಲಿ ಜಾರ್ಜ್‌ಬುಷ್ ಅವರ ಆದೇಶದ ಮೇರೆಗೆ ಡಾರ್ಫುರ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ವಿಶೇಷ ರಾಯಭಾರಿ ಆಂಡ್ರೂ ನ್ಯಾಟ್‌ಸಿಯೋಸ್ ಅವರನ್ನು ನೇಮಕ ಮಾಡಲಾಗಿತ್ತು.
ಡಾರ್ಫುರ್‌ನಲ್ಲಿ ಅರಬ್ ಸೈನಿಕರ ಬೆಂಬಲ ಪಡೆದ ಸರಕಾರಿ ಸೇನಾಪಡೆಗಳು ಹಾಗೂ ಖಾರ್ತೂಮ್ ಜನಾಂಗದ ಜನರ ಮಧ್ಯೆ ಬಿಕ್ಕಟ್ಟು ಉಲ್ಬಣಿಸಿ ಕಳೆದ ನಾಲ್ಕು ವರ್ಷಗಳಲ್ಲಿ 2 ಲಕ್ಷ ಮಂದಿ ಸಾವನ್ನಪ್ಪಿದ್ದಲ್ಲದೇ,22 ಲಕ್ಷಕ್ಕೂ ಹೆಚ್ಚಿನ ಮಂದಿ ವಲಸೆ ಹೋಗಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿದ್ದವು.
ವಿಶೇಷ ರಾಯಭಾರಿ ಆಂಡ್ರೂ ನ್ಯಾಟ್‌ಸಿಯೋಸ್ ಅವರು ರಾಜೀನಾಮೆಯಿಂದಾಗಿ ಅವರ ಸ್ಥಾನಕ್ಕೆ ಬೇರೆ ಅಭ್ಯರ್ಥಿಯ ಹೆಸರನ್ನು ಮುಂಬರುವ ದಿನಗಳಲ್ಲಿ ಸೂಚಿಸಲಾಗುವುದು ಎಂದು ಅಮೆರಿಕದ ಅಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
|