ಕ್ರಿಸ್‌ಮಸ್ ಸಂದರ್ಭದಲ್ಲಿ ದುಷ್ಕ್ರತ್ಯ ಎಸಗಲು ಸಿದ್ದತೆ ನಡೆಸುತ್ತಿರುವ ಅಲ್‌ಖೈದಾ ಉಗ್ರರ ದಾಳಿಯನ್ನು ವಿಫಲಗೊಳಿಸಿ 14 ಉಗ್ರರನ್ನು ಬಂಧಿಸಿದ್ದಾರೆ.
ಜಾಗತಿಕ ಉಗ್ರರ ಸಂಘಟನೆಯಾದ ಅಲ್‌ಖೈದಾದ ಇಸ್ಲಾಮಿಕ್ ಉಗ್ರರು ಭೀಕರ ದಾಳಿಯನ್ನು ನಡೆಸುವ ಯೋಜನೆಯನ್ನು ವಿಫಲಗೊಳಿಸಿದ ಪೊಲೀಸರು ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕ್ರಿಸ್‌ಮಸ್ ಸಂದರ್ಭದಲ್ಲಿ ದೇಶದಲ್ಲಿ ಉಗ್ರರಿಂದ ದಾಳಿ ನಡೆಯಬಹುದೆಂದು ಪ್ರಧಾನಿ ಎಚ್ಚರಿಸಿದ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ಹೇಳಲಾಗಿದೆ.
ರಾಜಧಾನಿ ಸೇರಿದಂತೆ ಜನನಿಬಿಡ ಪ್ರದೇಶಗಳಾದ ರೈಲು ನಿಲ್ದಾಣ, ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳು, ಮಾರುಕಟ್ಟೆ ಶಾಪಿಂಗ್‌ಮಾಲ್‌ಗಳಲ್ಲಿ ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುರೋಪಿಯನ್ ಸಂಯುಕ್ತ ಶೃಂಗಸಭೆಯಲ್ಲಿ ಒದಗಿಸಿದಂತೆ ಭಾರಿ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಆಂತರಿಕ ಸಚಿವ ರು ತಿಳಿಸಿದ್ದಾರೆ.
|