ಪರಮಾಣು ಅಥವಾ ರಸಾಯನ ದಾಳಿ ನಡೆಯಬಹುದೆಂಬ ಶಂಕೆಯ ಹಿನ್ನಲೆಯಲ್ಲಿ, ಮುಂಜಾಗ್ರತಾ ರಕ್ಷಣೆಗಾಗಿ, ಇಸ್ರೇಲ್ ಪ್ರಧಾನಿ ಇಹುದ್ ಒಲ್ಮರ್ಟ್ ಅವರ ಮನೆಯ ಸುತ್ತ ಅಣು ಬಂಕರ್ ನಿರ್ಮಿಸಲು ಇಸ್ರೇಲ್ ನಿರ್ಧರಿಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ದಪ್ಪದಾಗಿ ಎತ್ತರದ ಗೊಡೆಗಳನ್ನು ಮತ್ತು ರಸಾಯನ ಪದಾರ್ಥಗಳಿಂದ ರಕ್ಷಿಸುವ ವಿಶೇಷ ಗ್ಲಾಸುಗಳಿಂದ ಪರಿಶುದ್ಧ ಗಾಳಿ ಬರುವಂತೆ ಜರುಸಲೆಂನಲ್ಲಿರುವ ಪ್ರಧಾನಿ ಒಲ್ಮರ್ಟ್ ಅವರ ಅಧಿಕೃತ ಗೃಹಕಚೇರಿಗೆ ಬಂಕರ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಯೆದಿಯೊಥ್ ಅಹರ್ನೋತ್ ಪತ್ರಿಕೆ ವರದಿ ಮಾಡಿದೆ.
ಮಾಧ್ಯಮದ ಈ ವರದಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು, ಈ ವರದಿಯಲ್ಲಿ ಯಾವುದೇ ಹುರುಳಿಲ್ಲ ಮತ್ತು ಹಾದಿ ತಪ್ಪಿಸುವಂತಹುದಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಅವರ ಗೃಹ ಕಚೇರಿಯ ಸುತ್ತ ಯಾವುದೇ ಅಣು ಬಂಕರ್ ನಿರ್ಮಾಣವಾಗುತ್ತಿಲ್ಲ ಅಥವಾ ವಿಷೇಶ ಬಂಕರ್ ನಿರ್ಮಾಣವಾಗುತ್ತಿಲ್ಲ. ಈ ವರದಿ ಸತ್ಯಕ್ಕೆ ದೂರವಾದುದಾಗಿದೆ ಎಂದವರು ಸ್ಪಷ್ಟನೆ ನೀಡಿದ್ದಾರೆ.
ಪ್ಯಾಲಿಸ್ತೇನ್ ಮತ್ತು ಇಸ್ರೇಲಿಗಳ ಮಧ್ಯೆ ತೀವ್ರ ಕದನವಾಗುತ್ತಿದ್ದು, ಕಲೆದ ಹಲವು ತಿಂಗಳುಗಳ ಹಿಂದೆ ಇಸ್ರೇಲ್ ಪ್ರಧಾನಿ ಅವರ ಅಧಿಕೃತ ನಿವಾಸಗಳ ಬಳಿ ರಾಕೆಟ್ ದಾಳಿಗಳು ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.
|