15 ತಿಂಗಳುಗಳ ನಂತರ ಮತ್ತೆ ಪ್ರಜಾಪ್ರಭುತ್ವ ಆಡಳಿತವನ್ನು ಕಾಣಲು ಸಜ್ಜಾಗಿರುವ ಜಗತ್ತಿನ ವಿಲಾಸಿ ದೇಶವೆಂದೆ ಖ್ಯಾತಿಯಾಗಿರುವ ಥೈಲ್ಯಾಂಡ್‌ನಲ್ಲಿ ಸಾರ್ವತ್ರಿಕ ಚುನಾವಣೆಯ ಮತದಾನ ಆರಂಭಗೊಂಡಿದೆ.
ಸಂಸತ್ತಿನ ಕೆಳಮನೆಯಲ್ಲಿರುವ ಒಟ್ಟು 480 ಸದಸ್ಯ ಸ್ಥಾನಗಳಿಗೆ, ಒಟ್ಟು 39 ವಿವಿಧ ರಾಜಕೀಯ ಪಕ್ಷಗಳ 5 ಸಾವಿರ ಅಭ್ಯರ್ಥಿಗಳು ತಮ್ಮ ಭವಿಷ್ಯವನ್ನು ಒರೆಗಲ್ಲಿಗೆ ಹಚ್ಚಿದ್ದು, ಮತದಾನ ಬಿರುಸಿನಿಂದ ಸಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಥೈಲ್ಯಾಂಡ್‌ನ ಒಟ್ಟು 45 ದಶಲಕ್ಷ ಜನತೆ ಸಂವಿಧಾನದ ತಮ್ಮ ಪರಮೋಚ್ಛ ಹಕ್ಕನ್ನು ಚಲಾಯಿಸಲಿದ್ದು, ಚುನಾವಣೆ ಹಿನ್ನಲೆಯಲ್ಲಿ, ದೇಶಾದ್ಯಂತ ವ್ಯಾಪಕ ಬೀಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಥೈಲ್ಯಾಂಡ್ ಪೊಲೀಸರು ತಿಳಿಸಿದ್ದಾರೆ.
ಕಳೆದ 15 ತಿಂಗಳುಗಳ ಹಿಂದೆ ಪ್ರಧಾನಿಯಾಗಿದ್ದ ಥಾಕ್ಸಿನ್ ಅವರು ವ್ಯಾಪಕ ಭೃಷ್ಟಾಚಾರದ ಆರೋಪದ ಮೇಲೆ ವಿರೋಧ ಪಕ್ಷಗಳು ಅವರನ್ನು ಕೆಳಗಿಳಿಸಿದ ನಂತರ ಥೈಲ್ಯಾಂಡ್‌ನಲ್ಲಿ ಮಿಲಿಟರಿ ಸರಕಾರ ಅಸ್ತಿತ್ವಕ್ಕೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
|