ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುನ್ನಿಗಳ ಹತ್ಯೆಗೆ ಖೈದಾ ನಾಯಕರ ಕರೆ
ಇರಾಕ್‌ನಲ್ಲಿ ತಾಲಿಬಾನ್ ಉಗ್ರರ ವಿರುದ್ಧ ಹೋರಾಟ ಮಾಡುತ್ತಿರುವ ಅಮೆರಿಕನ್ ಮಿಲಿಟರಿ ಪಡೆಗಳಿಗೆ ಸಹಾಯ ಸಲ್ಲಿಸುತ್ತಿರುವ ಇರಾಕ್ ಸುನ್ನಿ ಜನರನ್ನು ಕೊಂದು ಹಾಕುವಂತೆ ಅಲ್-ಖೈದಾ ನಾಯಕರು, ತಮ್ಮ ತಾಲಿಬಾನಿ ಉಗ್ರರಿಗೆ ಆದೇಶ ನೀಡಿದ್ದಾರೆ.

ಅಲ್-ಖೈದಾ ನಾಯಕ ಅಬು ಒಮರ್ ಅಲ್-ಬಗ್ದಾದಿ ಅವರು ಮಾತನಾಡಿರುವ 47 ನಿಮಿಷಗಳ ಆಡಿಯೊ ಟೇಪ್‌ವೊಂದನ್ನು ಅಲ್-ಖೈದಾ ಅಂತರ್ಜಾಲದಲ್ಲಿ ಬಿಡುಗಡೆ ಶುಕ್ರವಾರ ಮಾಡಲಾಗಿದ್ದು, ಈ ಧ್ವನಿ ಸುರಳಿಯಲ್ಲಿ ಅವರು ಸುನ್ನಿ ನಾಯಕ ಸ್ಪಷ್ಟ ಆದೇಶ ಮಾಡಿದ್ದಾರೆನ್ನಲಾಗಿದೆ.

"ಹಂಬಲ್ ಟುವರ್ಡ್ಸ್ ದಿ ಬಿಲಿವರ್ಸ್, ಪಾವರ್‌ಪುಲ್ ಟುವರ್ಡ್ಸ್ ದಿ ಡಿಸ್ ಬಿಲಿವರ್ಸ್" ಎನ್ನುವ ಧ್ವನಿ ಸುರಳಿಯಲ್ಲಿ, ಬಗ್ದಾದಿ ಅವರು ಅಮೆರಿಕನ್ ಸೇನೆಗೆ ಸಹಾಯ ಸಲ್ಲಿಸುತ್ತಿರುವ ಎಲ್ಲಾ ಸುನ್ನಿ ಮುಸ್ಲಿಂರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಗೈಯ್ಯುವಂತೆ ಸ್ಪಷ್ಟನೆ ನೀಡಿದ್ದು, ಮುಸ್ಲಿಂ ಜಗತ್ತಿನಲ್ಲಿ ಭಾರಿ ನಡುಕ ಹುಟ್ಟಿಸಿದೆ.

ಕಳೆದ ಹಲವಾರು ವರ್ಷಗಳಿಂದ ತಾಲಿಬಾನ್ ಉಗ್ರರ ಮತ್ತು ಅಮೆರಿಕನ್ ಸೈನ್ಯದ ಮಧ್ಯೆ ಇರಾಕ್‌ನಲ್ಲಿ ತೀವ್ರ ಕದನ ಏರ್ಪಡುತ್ತಿದ್ದು, ಅವಸಾನದ ಅಂಚಿನತ್ತ ತಳ್ಳಲ್ಪಡುತ್ತಿರುವ ತಾಲಿಬಾನ್, ಇದೀಗ ತಮ್ಮದೇ ಜನಾಂಗದ ವಿರುದ್ಧ ಗಾಯಗೊಂಡ ಹುಲಿಯಂತಾಗಿದೆ.
ಮತ್ತಷ್ಟು
ಥೈಲ್ಯಾಂಡ್‌ನಲ್ಲಿ ಮತದಾನ ಆರಂಭ
ಪ್ರಭಾಕರ್‌ನ ಗಾಯಾಳುವಾಗಿಲ್ಲ- ಎಲ್‌ಟಿಟಿಇ
ಪ್ರಧಾನಿ ನಿವಾಸದಲ್ಲಿ ಅಣು ಬಂಕರ್ ನಿರ್ಮಾಣ
ಬೆಲ್ಜಿಯಂ:14 ಅಲ್‌ಖೈದಾ ಉಗ್ರರ ಬಂಧನ
ಅಮೆರಿಕದ ವಿಶೇಷ ರಾಯಭಾರಿ ರಾಜೀನಾಮೆ
ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಇಂದಿರಾ ಸಮ್ಮತಿ?