ಜನರ ನಡುವೆ ಮುಕ್ತವಾಗಿ ತಿರುಗಾಡುವ ಡೈನಾಸರ್‌ಗಳಿಂದ ಕೂಡಿದ ಜುರಾಸಿಕ್ ಪಾರ್ಕ್ ಸೃಷ್ಟಿಗೆ ನೈಸರ್ಗಿಕ ಇತಿಹಾಸ ಮ್ಯೂಸಿಯಂ ಸಹಿ ಹಾಕಿದೆಯೆಂದು ವರದಿಯಾಗಿದೆ. ಈ ಜೀವಿಗಳು ಪ್ರವಾಸಿಗಳ ಕ್ರಿಯೆಗಳಿಗೆ ಮತ್ತು ಅವರ ಬಟ್ಟೆಗಳ ಬಣ್ಣಗಳಿಗೆ ಕೂಡ ಸ್ಪಂದಿಸುತ್ತವೆಂದು ಹೇಳಲಾಗಿದೆ.
ಡೈನಾಸರ್ ಯುಗದ ಜೀವಂತ ಡೈನಾಸರ್‌ಗಳನ್ನು ಹೋಲುವ ಈ ಯೋಜನೆಯಲ್ಲಿ ಉನ್ನತ ತಂತ್ರಜ್ಞಾನದ ಆನಿಮ್ಯಾಟ್ರೋನಿಕ್ ಡೈನಾಸರ್ ಸೇರಿದಂತೆ ಮಾರಕ ರೈನಾಸರಸ್ ರೆಕ್ಸ್ ಉದ್ಯಾನವನದಲ್ಲಿ ಅಡ್ಡಾಡುವುದನ್ನು ಕಾಣಬಹುದು.
ರೆಸ್ಟ್‌ಲೆಸ್ ಪ್ಲ್ಯಾನಟ್ ಎಂದು ಹೆಸರಾದ ರೋಬೋಟ್ ಡೈನಾಸರ್‌ಗಳಿಂದ ಕೂಡಿದ ಈ ಪಾರ್ಕ್ 2010ರಲ್ಲಿ ದುಬೈನಲ್ಲಿ ಆರಂಭವಾಗಲಿದೆ. ಇನ್ನಿತರ ಜೀವಿಗಳಾದ ಟೆರೊಡ್ಯಾಕ್ಟೈಲ್ಸ್ ಮತ್ತು ಡಿಪ್ಲೋಡೋಕಸ್ ಕೂಡ ಪಾರ್ಕ್‌ನಲ್ಲಿ ಮುಕ್ತವಾಗಿ ಸಂಚರಿಸಲಿವೆ. ಥೀಮ್ ಪಾರ್ಕ್ ಮತ್ತು ಮ್ಯೂಸಿಯಂನ ಮಿಶ್ರಣವನ್ನು ನಾವು ಸೃಷ್ಟಿಸಲು ಬಯಸಿದ್ದು, ಜುರಾಸಿಕ್ ಯುಗದ ಜೀವಿಗಳ ಅನುಭವವನ್ನು ಜನರಿಗೆ ನೀಡುತ್ತೇವೆ ಎಂದು ನಿರ್ದೇಶಕ ಆಡ್ರಿ ಒ ಕಾನೆಲ್ ತಿಳಿಸಿದರು.
ಈ ಪಾರ್ಕ್ 10 ಫುಟ್‌ಬಾಲ್ ಮೈದಾನಗಳಷ್ಟು ದೊಡ್ಡದಿದ್ದು, ಎರಡು ಹವಾಮಾನ ನಿಯಂತ್ರಿತ ಕಟ್ಟಡಗಳು, ಹುಲ್ಲುಗಾವಲು ಮತ್ತು ಅರಣ್ಯಪ್ರದೇಶವಿದ್ದು. ವಿವಿಧ ಕಾಲಾವಧಿಗಳಿಗೆ ವಿಭಜನೆಯಾಗಿವೆ. ವಿಶ್ವದ ಪ್ರಮುಖ ಪ್ರವಾಸಿ ಸ್ಥಳವಾಗಿ ಮಾರ್ಪಡುವ ತೈಲ ಸಮೃದ್ಧ ದುಬೈನ ಮಹಾನ್ ಯೋಜನೆ ಇದಾಗಿದೆಯೆಂದು ಹೇಳಲಾಗಿದೆ.
|