ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೂರ್‌ಜಹಾನ್ ಐದನೇ ವರ್ಷದ ಪುಣ್ಯತಿಥಿ
ಮಧುರ ಗಾನದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದ ಮೆಲೋಡಿ ಕ್ವೀನ್ ನೂರ್ ಜಹಾನ್ ಅವರ ಐದನೇ ವರ್ಷದ ಪುಣ್ಯತಿಥಿ ಭಾನುವಾರ ಜರುಗಿತು. ನೂರ್ ಜಹಾನ್ ಅವರ ಸಿನೆಮಾ ಮತ್ತು ಸಂಗೀತದ ವೃತ್ತಿಜೀವನ ನಾಲ್ಕು ದಶಕಗಳ ಕಾಲ ವಿಸ್ತರಿಸಿದೆ.

ಸುಮಾರು 26 ಚಿತ್ರಗಳಲ್ಲಿ ಮುಖ್ಯಪಾತ್ರಗಳು ಮತ್ತು 1000 ಚಿತ್ರಗಳಿಗೆ ಹಿನ್ನೆಲೆಗಾಯನ ನೀಡಿರುವ ನೂರ್‌ಜಹಾನ್ ಅವರು ಗತಿಸಿ ಐದು ವರ್ಷಗಳು ಕಳೆದ ಬಳಿಕವೂ ಪಾಕಿಸ್ತಾನದ ಜನರ ನಡುವೆ ಜನಪ್ರಿಯರಾಗಿ ಉಳಿದಿದ್ದಾರೆ. ಅವರು ಈಗ ಜನರ ಕಣ್ಣಿಂದ ಮರೆಯಾಗಿರಬಹುದು.

ಆದರೆ ಅವರ ಮಧುರ ಗಾಯನವು ಜನರನ್ನು ಇನ್ನೂ ಮೋಡಿ ಮಾಡುತ್ತಿದ್ದು, ಅವರ ಮಹಾನ್ ಪ್ರತಿಭೆಗೆ ಸಾಕ್ಷಿಯಾಗಿ ನಿಂತಿದೆ ಎಂದು ನೂರ್ ಜಹಾನ್ ಅಭಿಮಾನಿಯೊಬ್ಬರಾದ ಮುಹಮ್ಮದ್ ಇಕ್ಬಾಲ್ ಹೇಳಿದ್ದಾರೆ. ಮಿರ್ಜಾ ಗಾಲಿಬ್, ಪಟೇ ಖಾನ್, ಮೀರಾಬಾಯ್, ಬಡೀಮಾ, ಹಮ್ಜೋಲಿ, ಜುಗ್ನು, ಖಾಂಡಾನ್ ಅವರ ಪ್ರಖ್ಯಾತ ಚಿತ್ರಗಳು.
ಮತ್ತಷ್ಟು
ಮುಕ್ತವಾಗಿ ಓಡಾಡುವ ಡೈನಾಸರ್‌ಗಳ ಪಾರ್ಕ್
ಸುನ್ನಿಗಳ ಹತ್ಯೆಗೆ ಖೈದಾ ನಾಯಕರ ಕರೆ
ಥೈಲ್ಯಾಂಡ್‌ನಲ್ಲಿ ಮತದಾನ ಆರಂಭ
ಪ್ರಭಾಕರ್‌ನ ಗಾಯಾಳುವಾಗಿಲ್ಲ- ಎಲ್‌ಟಿಟಿಇ
ಪ್ರಧಾನಿ ನಿವಾಸದಲ್ಲಿ ಅಣು ಬಂಕರ್ ನಿರ್ಮಾಣ
ಬೆಲ್ಜಿಯಂ:14 ಅಲ್‌ಖೈದಾ ಉಗ್ರರ ಬಂಧನ