ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆ ಸ್ಪರ್ಧೆಗೆ ಶರೀಫ್ ಅನರ್ಹತೆ
ಅಪಹರಣದ ಪ್ರಕರಣದಲ್ಲಿ ತಪ್ಪಿತಸ್ಥರಾದ ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಯಂ ಅನರ್ಹತೆ ಹೊಂದಿದ್ದಾರೆ ಎಂದು ಪಾಕಿಸ್ತಾನದ ಅಟಾರ್ನಿ ಜನರಲ್ ಮಲಿಕ್ ಕಯೂಮ್ ತಿಳಿಸಿದ್ದಾರೆ. ಶರೀಫ್ ಮತ್ತು ಅವರ ಸೋದರ, ಪಂಜಾಬಿನ ಮಾಜಿ ಮುಖ್ಯಮಂತ್ರಿ ಶಾಬಾಜ್ ಶರೀಫ್ ಅವರಿಬ್ಬರನ್ನೂ ಜ. 8ರ ಚುನಾವಣೆಯಿಂದ ಸ್ಪರ್ಧಿಸುವುದಿಂದ ಅನರ್ಹಗೊಳಿಸಲಾಗಿದೆ.

"ಭಯೋತ್ಪಾದನೆ ಮತ್ತು ಅಪಹರಣ ಪ್ರಕರಣದಲ್ಲಿ ತಪ್ಪಿತಸ್ಥರಾದ ಶರೀಫ್ ಅವರ ನಾಮಪತ್ರವನ್ನು ಚುನಾವಣೆ ಅಧಿಕಾರಿಗಳು ತಿರಸ್ಕರಿಸಿದ್ದು, ಶಾಬಾಜ್ 1998ರಲ್ಲಿ ಐವರು ಯುವಕರ ಹತ್ಯೆಯಲ್ಲಿ ಪರೋಕ್ಷವಾಗಿ ಭಾಗಿಯಾದ ಆರೋಪದ ಮೇಲೆ ಚುನಾವಣೆಯಲ್ಲಿ ಅವರ ಸ್ಪರ್ಧೆಯನ್ನು ನಿಷೇಧಿಸಲಾಗಿದೆ. ಶಾಬಾಜ್ ತಪ್ಪಿತಸ್ಥರಾಗಿರದಿದ್ದರೂ ಅವರ ವಿರುದ್ಧ ಕೆಲವು ಪ್ರಕರಣಗಳಿವೆ ಎಂದು ಖಯ್ಯೂಂ ಹೇಳಿದ್ದಾರೆ.

ಶರೀಫ್ ಸೋದರರು ತಮ್ಮ ನಾಮಪತ್ರ ತಿರಸ್ಕರಿಸಿರುವ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಮುಖ್ಯಚುನಾವಣೆ ಆಯುಕ್ತರನ್ನು ಎರಡು ಬಾರಿ ಭೇಟಿ ಮಾಡಿದ್ದರು. ಆದರೆ ಮುಖ್ಯ ಚುನಾವಣೆ ಆಯುಕ್ತರು ಚುನಾವಣೆ ನ್ಯಾಯಮಂಡಳಿಗೆ ಮನವಿ ಸಲ್ಲಿಸುವಂತೆ ತಿಳಿಸಿದ್ದರು.

ಆದರೆ ನ್ಯಾಯಮಂಡಳಿಯನ್ನು ಸಂಪರ್ಕಿಸಲು ಸೋದರರು ನಿರಾಕರಿಸಿ, ಮುಷರ್ರಫ್ ಅವರ ತುರ್ತುಪರಿಸ್ಥಿತಿ ದೃಢೀಕರಿಸಿದ ನ್ಯಾಯಾಧೀಶರ ಯಾವುದೇ ವೇದಿಕೆಗೆ ತಾವು ಮನವಿ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು
ಕುರ್ದಿ ನೆಲೆಗಳ ಮೇಲೆ ಟರ್ಕಿ ಬಾಂಬ್ ದಾಳಿ
ನೂರ್‌ಜಹಾನ್ ಐದನೇ ವರ್ಷದ ಪುಣ್ಯತಿಥಿ
ಮುಕ್ತವಾಗಿ ಓಡಾಡುವ ಡೈನಾಸರ್‌ಗಳ ಪಾರ್ಕ್
ಸುನ್ನಿಗಳ ಹತ್ಯೆಗೆ ಖೈದಾ ನಾಯಕರ ಕರೆ
ಥೈಲ್ಯಾಂಡ್‌ನಲ್ಲಿ ಮತದಾನ ಆರಂಭ
ಪ್ರಭಾಕರ್‌ನ ಗಾಯಾಳುವಾಗಿಲ್ಲ- ಎಲ್‌ಟಿಟಿಇ