ಲಕ್ಷಾಂತರ ಕ್ರಿಶ್ಚಿಯನ್ ಯಾತ್ರಾರ್ಥಿಗಳು ಏಸುವಿನ ಜನ್ಮಸ್ಥಳವಾದ ಬೆತ್ಲಹೆಮ್‌ಗೆ ಭೇಟಿ ನೀಡುವುದರೊಂದಿಗೆ ಹಲವು ವರ್ಷಗಳ ನಂತರ ನಗರದಲ್ಲಿ ವಿಜೃಂಭಣೆಯ ಕ್ರಿಸ್‌ಮಸ್ ಆಚರಿಸಲಾಯಿತು.
ಇಸ್ರೆಲ್ ಮತ್ತು ಪ್ಯಾಲಿಸ್ತೇನಿಗಳ ಮಧ್ಯ 2000ರಲ್ಲಿ ಆರಂಭವಾದ ಘರ್ಷಣೆಯಿಂದಾಗಿ ಬೈಬ್ಲಿಕಲ್ ಪಟ್ಟಣದ ಮಂಗರ್ ಚೌಕ್‌ನಲ್ಲಿ ಕೇವಲ ಸ್ಥಳಿಯರು ಮಾತ್ರ ಕ್ರಿಸ್‌ಮಸ್ ಆಚರಿಸುವಂತಾಗಿತ್ತು. ಆದರೆ ಜಗತ್ತಿನಾದ್ಯಂತ ಇರುವ ಕ್ರಿಶ್ಚಿಯನ್ ಭಕ್ತರು ಪ್ರಾಂತೀಯ ಭಿನ್ನಾಭಿಪ್ರಾಯಗಳನ್ನು ಮರೆತು ಕ್ರಿಸ್‌ಮಸ್ ಹಬ್ಬದಲ್ಲಿ ಸಡಗರ ಆಚರಿಸಲು ಬೆತ್ಲಹೆಮ್‌ಗೆ ಆಗಮಿಸಿರುವುದರಿಂದ ಹಬ್ಬದ ಆಚರಣೆಗೆ ಮೆರಗು ತಂದಿದೆ.
ಏಸುಕ್ರಿಸ್ತನ ಜನ್ಮಸ್ಥಳವಾದ ಬೆತ್ಲಹೆಮ್‌ಗೆ ಪ್ರಥಮ ಬಾರಿಗೆ ಭೇಟಿ ನೀಡುತ್ತಿರುವುದು ರೋಮಾಂಚನ ತಂದಿದೆ. ಇಸ್ರೆಲ್ ಮತ್ತು ಪ್ಯಾಲಿಸ್ತೇನಿಯರ ನಡುವೆ ಶಾಂತಿಮಾತುಕತೆ ನಡೆಯುತ್ತಿರುವುದರಿಂದ ಜೆರುಸಲೇಂನಿಂದ ಬೆತ್ಲಹೆಮ್‌ಗೆ ನಿರ್ಭಯವಾಗಿ ಪ್ರಯಾಣಿಸಬಹುದು ಎಂದು ಬ್ರೆಜಿಲ್ ದೇಶದ ಟಿಯಾಗೊ ಮಾರ್ಟಿನ್ ಸಂತಸ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ಕಳೆದ ತಿಂಗಳು ನಡೆದ ಇಸ್ರೆಲ್ ಮತ್ತು ಪ್ಯಾಲಿಸ್ತೇನಿಯರ ಮಧ್ಯೆ ಶಾಂತಿಮಾತುಕತೆ ಕ್ರಿಶ್ಚಿಯನ್ ಸಮುದಾಯಕ್ಕೆ ಸಂತಸದ ಸಂಗತಿಯಾಗಿದೆ. ಕ್ರಿಶ್ಚಿಯನ್ ನಗರವಾದ ಬೆತ್ಲಹೆಮ್ ನನಗೆ ಶಾಂತತೆಯ ಅನುಭವ ನೀಡುತ್ತಿದ್ದು, ಅನ್ನಾಪೊಲಿಸ್‌ಗಿಂತ ವೆಸ್ಟ್‌ಬ್ಯಾಂಕ್‌ಗೆ ತೆರಳುವುದು ಉತ್ತಮವಾಗಿರುತ್ತದೆ ಎಂದು ಟಿಯಾಗೊ ಮಾರ್ಟಿನ್ ಹೇಳಿದ್ದಾರೆ.
ದೇಶದಲ್ಲಿ ಕಡಿಮೆಯಾದ ಹಿಂಸಾಚಾರದಿಂದಾಗಿ 65 ಸಾವಿರ ಪ್ರವಾಸಿಗಳು ಏಸು ಕ್ರಿಸ್ತನ ಸಾಂಪ್ರಾದಾಯಕ ಜನ್ಮಸ್ಥಳವನ್ನು ಸಂದರ್ಶಿಸಲು ಸಾಧ್ಯವಾಗಿದೆ. 2005ರಲ್ಲಿ ಭೇಟಿ ನೀಡಿದ ಯಾತ್ರಿಕರಲ್ಲಿ ನಾಲ್ಕುಪಟ್ಟು ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಬೆತ್ಲಹೆಮ್ ಮೇಯರ್ ವಿಕ್ಟರ್ ಬಟರ್ಸೆಹ್ ಅಭಿಪ್ರಾಯಪಟ್ಟಿದ್ದಾರೆ.
|