ಮುಂಬರುವ ಜನೆವರಿ 8ರಂದು ನಡೆಯಲಿರುವ ರಾಷ್ಟ್ರೀಯ ಹಾಗೂ ಪ್ರಾಂತೀಯ ಚುನಾವಣೆಯಲ್ಲಿ ಸುಮಾರು 253 ವಕೀಲರು ಸ್ಪರ್ಧಿಸಿದ್ದಾರೆ. 253 ವಕೀಲರಲ್ಲಿ 112 ವಕೀಲರು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು, 141 ವಕೀಲರು ವಿವಿಧ ಪಕ್ಷಗಳ ನೀಡಿದ ಟಿಕೆಟ್ ಮೇಲೆ ಸ್ಪರ್ಧಿಸುತ್ತಿದ್ದಾರೆ
79 ವಕೀಲರು ರಾಷ್ಟ್ರೀಯ ಸಂಸತ್‌ಗೆ ಸ್ಪರ್ಧಿಸಿದ್ದು, 174 ಮಂದಿ ವಕೀಲರು ಪ್ರಾಂತೀಯ ಅಸೆಂಬ್ಲಿಗೆ ಸ್ಪರ್ಧಿಸಿದ್ದಾರೆ
ವೈದ್ಯಕೀಯ ಕ್ಷೇತ್ರದಲ್ಲಿರುವ 253 ಮಂದಿ ವೈದ್ಯರು ಚುನಾವಣೆಗೆ ಸ್ಪರ್ಧಿಸಿದ್ದು, ಅದರಲ್ಲಿ 98 ಮಂದಿ ರಾಷ್ಟ್ರೀಯ ಸಂಸತ್‌ಗೆ ಹಾಗೂ 155 ಮಂದಿ ಪ್ರಾಂತೀಯ ಚುನಾವಣೆಗೆ ಸ್ಪರ್ಧಿಸಿದ್ದಾರೆ.
75 ಮಂದಿ ನಿವೃತ್ತ ಸೇನಾಧಿಕಾರಿಗಳು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಅದರಲ್ಲಿ 28 ಮಂದಿ ರಾಷ್ಟ್ರೀಯಸಂಸತ್‌ಗೆ ಹಾಗೂ 47 ಮಂದಿ ಪ್ರಾಂತೀಯ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಚುನಾವಣಾ ಆಯೋಗ ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದು, 139 ಮಂದಿ ವೈದ್ಯರು ವಿವಿಧ ರಾಜಕೀಯ ಪಕ್ಷಗಳು ನೀಡಿದ ಟಿಕೆಟ್ ಮುಖಾಂತರ ಚುನಾವಣೆಗೆ ಸ್ಪರ್ಧಿಸುತ್ತಿದ್ದು,114 ಮಂದಿ ಸ್ವತಂತ್ರರಾಗಿ ಸ್ಪರ್ಧಿಸುತ್ತಿದ್ದಾರೆ ಎಂದು ಪ್ರಕಟಿಸಿದೆ.
ಮಾಜಿ ಪ್ರಧಾನಿ ಬೆನ್‌ಜಿರ್ ಭುಟ್ಟೋ ನೇತ್ರತ್ವದ ಪಾಕಿಸ್ತಾನ್ ಪೀಪಲ್ಸ್ ಪಕ್ಷ 63 ವೈದ್ಯರಿಗೆ ಟಿಕೆಟ್ ನೀಡಿದ್ದು, ಆದರಲ್ಲಿ 26 ಮಂದಿ ವೈದ್ಯರು ರಾಷ್ಟ್ರೀಯ ಸಂಸತ್‌ಗೆ ಹಾಗೂ 37 ಮಂದಿ ಪ್ರಾಂತೀಯ ಅಸೆಂಬ್ಲಿಗೆ ಸ್ಪರ್ಧಿಸುತ್ತಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
|