ಶ್ರೀಲಂಕಾದ ಉತ್ತರದಲ್ಲಿರುವ ಪ್ರದೇಶದಲ್ಲಿ ಉಗ್ರರ ವಿರುದ್ದ ನಡೆದ ಸೇನಾ ಕಾರ್ಯಾಚರಣೆಯಲ್ಲಿ 14 ಮಂದಿ ತಮಿಳು ಉಗ್ರರು ಮೃತರಾಗಿದ್ದು,ಉಗ್ರರ ವಶವಾಗಿದ್ದ ಥಾಂಪಣೆ ಪ್ರದೇಶವನ್ನು ಮರುವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸೇನಾಮೂಲಗಳು ತಿಳಿಸಿವೆ
ವಾಯುನಿಯಾದ ಕಂದಪೆರುಮಾಕುಲಮಾ, ಪೊಕ್ಕರವಾಣಿ ಮತ್ತು ನವತಕುಲಮಾ ಪ್ರದೇಶಗಳಲ್ಲಿ ಸೇನೆ ಹಾಗೂ ಉಗ್ರರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಪ್ರಾಂತೀಯ ನಾಯಕರು ಸೇರಿದಂತೆ 10 ಮಂದಿ ಉಗ್ರರು ಮೃತರಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ
ಮನ್ನಾರ್ ಪ್ರಾಂತದ ಅಡಂಪನ್ ಪ್ರದೇಶದಲ್ಲಿ ಸೇನಾಪಡೆಗಳು ಉಗ್ರರು ನಿರ್ಮಿಸಿದ ಬಂಕರ್ ಮೇಲೆ ದಾಳಿ ಮಾಡಿ ಇಬ್ಬರು ಗೆರಿಲ್ಲಾಗಳನ್ನು ಹತ್ಯೆ ಮಾಡಿದ್ದಾರೆ.
ತಮಿಳು ಉಗ್ರರ ಬೆಂಬಲಿತ ತಮಿಳುನೆಟ್ ವೆಬ್‌ಸೈಟ್ ಮನ್ನಾರ್‌ನಲ್ಲಿ ಸೇನಾಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಒಬ್ಬ ಸೈನಿಕ ಮೃತನಾಗಿ 28 ಮಂದಿ ಗಾಯಗೊಂಡಿದ್ದಾರೆ. ಉಗ್ರರು ಗಾಯಗಳಾದ ವರದಿಗಳು ಬಂದಿಲ್ಲವೆಂದು ವರದಿ ಮಾಡಿದೆ.
ಶ್ರೀಲಂಕಾದ ಉತ್ತರ ಭಾಗದಲ್ಲಿರುವ ವಾಯುನಿಯಾ ಹಾಗೂ ಮನ್ನಾರ್‌ನಲ್ಲಿರುವ ಉಗ್ರರ ಹಿಡಿತದಲ್ಲಿದ್ದ ಥಾಂಪನೆ ಪ್ರದೇಶವನ್ನು ಸೇನಾಪಡೆಗಳು ಮರುವಶಕ್ಕೆ ತೆಗೆದುಕೊಂಡಿವೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ.
|