ನಾಗರಿಕರ ಹಾಗೂ ರಾಜಕಾರಣಿಗಳ ಮೇಲೆ ನಡೆಸುತ್ತಿರುವ ಭಯೋತ್ಪಾದನೆ ದಾಳಿಗಳನ್ನು ತಮಿಳು ಉಗ್ರರ ನಾಯಕ ವೆಲ್ಲುಪಿಳ್ಳೈ ಪ್ರಭಾಕರನ್ ನಿಲ್ಲಿಸಬೇಕು ಎಂದು ನೇಪಾಳದ ಮಾವೋವಾದಿಗಳ ಮುಖಂಡ ಪ್ರಚಂಡ ಸಲಹೆ ನೀಡಿದ್ದಾರೆ.
ಆತ್ಮಹತ್ಯಾ ಬಾಂಬ್ ಭಯೋತ್ಪಾದನೆ ದಾಳಿಗಳನ್ನು ನಾಗರಿಕರ ಹಾಗೂ ರಾಜಕಾರಣಿಗಳ ಮೇಲೆ ನಡೆಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಉಗ್ರಗಾಮಿಯಿಂದ ಪರಿವರ್ತನೆಗೊಂಡು, ರಾಜಕಾರಣದ ಪ್ರಮುಖವಾಹಿನಿ ಸೇರಿದ ಮಾವೋವಾದಿಗಳ ಮುಖಂಡ ಪ್ರಚಂಡ ಹೇಳಿದ್ದಾರೆ
ಶ್ರೀಲಂಕಾದ ಆರೋಗ್ಯ ಸಚಿವ ನಿಮಲ್ ಸಿರಿಪಲಾ ಸಿಲ್ವಾ ಅವರೊಂದಿಗೆ ನಡೆದ ಸಭೆಯಲ್ಲಿ ಏಷಿಯಾ ಮತ್ತು ದಕ್ಷಿಣ ಏಷಿಯಾ ರಾಷ್ಟ್ರಗಳು ತಮಿಳು ಉಗ್ರರ ಭಯೋತ್ಪಾದನೆಯ ಕಪಿಮುಷ್ಟಿಯಿಂದ ಹೊರತರಲು ಶ್ರಮಿಸಬೇಕು ಎಂದು ಸಲಹೆ ನೀಡಿದ್ದಾರೆ. ಕಳೆದ ಒಂದು ದಶಕದಲ್ಲಿ ಮಾವೋವಾದಿಗಳ ಹಿಂಸಾಚಾರಕ್ಕೆ 13 ಸಾವಿರ ಮಂದಿ ಬಲಿಯಾಗಿದ್ದಾರೆ.
ನೇಪಾಳ ಪ್ರವಾಸದಲ್ಲಿರುವ ಡಿ. ಸಿಲ್ವಾ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲಾ ಹಾಗೂ ಹಿರಿಯ ನಾಯಕರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಭಯೋತ್ಪಾದಕ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸಿದರು ಎಂದು ನೇಪಾಳದ ಸಚಿವಾಲಯ ತಿಳಿಸಿದೆ.
|