ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಧ್ಯಮದ ಭಯದಿಂದ ತೀರ್ಪು ವಿಳಂಬ: ಶೋಭರಾಜ್
ಮಾಧ್ಯಮದ ಟೀಕಾಸ್ತ್ರದ ಭಯದಿಂದ ನೇಪಾಳದ ಸುಪ್ರೀಂಕೋರ್ಟ್ ತೀರ್ಪು ನೀಡಲು ವಿಳಂಬ ಮಾಡುತ್ತಿದೆ ಎಂದು ಕುಖ್ಯಾತ ಅಂತಾರಾಷ್ಟ್ರೀಯ ಕ್ರಿಮಿನಲ್ ಚಾರ್ಲ್ಸ್ ಶೋಭರಾಜ್ ಬುಧವಾರ ಆರೋಪಿಸಿದ್ದಾನೆ. ಸುಮಾರು 3 ದಶಕಗಳ ಹಿಂದೆ ಅಮೆರಿಕದ ಮಹಿಳೆಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಪ್ರಸಕ್ತ ಅವನು ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

ಬಿಕಿನ ಹಂತಕ ಎಂದೇ ಕುಖ್ಯಾತನಾದ 63 ವರ್ಷ ವಯಸ್ಸಿನ ಶೋಭರಾಜ್ ತಮ್ಮ ವಿರುದ್ಧ ನಕಲಿ ಪಾಸ್‌ಪೋರ್ಟ್ ಪ್ರಕರಣವನ್ನು ಪುನಾರಂಭಿಸುವ ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪಿನ ವಿರುದ್ಧ ಆಘಾತ ವ್ಯಕ್ತಪಡಿಸಿದ್ದಾನೆ. ಭಾರತ ಮತ್ತು ವಿಯೆಟ್ನಾಂ ಮಿಶ್ರಣದ ಫ್ರೆಂಚ್ ರಾಷ್ಟ್ರೀಯ ಶೋಭರಾಜ್ ತನಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಕಠ್ಮಂಡು ಜಿಲ್ಲಾ ಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದ.

ಅಮೆರಿಕದ ಮಹಿಳೆ ಕಾನೀ ಬ್ರಾಂಜಿಕ್ ಅವರನ್ನು 1975ರಲ್ಲಿ ಹತ್ಯೆ ಮಾಡಿದ ಆರೋಪದ ಮೇಲೆ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬ್ರಾಂಜಿಕ್ ಹತ್ಯೆಯ ಜತೆಗೆ ಕೆನಡಾದ ಜತೆಗಾತಿ ಲಾರೆಂಟ್ ಆರ್ಮಾಂಡ್ ಕ್ಯಾರಿರೆ ಅವರನ್ನು ಶೋಭರಾಜ್ ಹತ್ಯೆ ಮಾಡಿದ್ದಾನೆಂದು ಪೊಲೀಸರು ಆಪಾದಿಸಿದ್ದರು. ಆದರೆ ಬ್ರಾಂಜಿಕ್ ಅವರ ಹತ್ಯೆಗೆ ಸಂಬಂಧಪಟ್ಟಂತೆ ಮಾತ್ರ ಕೆಳಕೋರ್ಟ್ ಶಿಕ್ಷೆ ವಿಧಿಸಿತ್ತು.

ವಿವಿಧ ಮಾಧ್ಯಮ ಸಂಸ್ಥೆಗಳಿಗೆ ತಾನು ಕಳಿಸಿದ ಈಮೇಲ್ ಹೇಳಿಕೆಯಲ್ಲಿ ತಾನು ಅಮಾಯಕ ಮತ್ತು ನೇಪಾಳದಲ್ಲಿ ಅನ್ಯಾಯಕ್ಕೆ ಬಲಿಪಶುವಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ನೇಪಾಳದ ನ್ಯಾಯಾಂಗವು ಮಾಧ್ಯಮದ ಒಂದು ವರ್ಗದ ಭಯದಿಂದ ತೀರ್ಪನ್ನು ನೀಡಲು ವಿಳಂಬಮಾಡುತ್ತಿದೆ ಎಂದು ಶೋಭರಾಜ್ ದೂರಿದ್ದಾನೆ.
ಮತ್ತಷ್ಟು
ಭಯೋತ್ಪಾದಕ ದಾಳಿ ನಿಲ್ಲಿಸಲು ಪ್ರಚಂಡಾ ಸಲಹೆ
ಉಗ್ರರ, ಸೇನಾಪಡೆಗಳ ಘರ್ಷಣೆ:14 ಸಾವು
ಪಾಕ್ ಚುನಾವಣೆಯಲ್ಲಿ 253 ವಕೀಲರ ಸ್ಪರ್ಧೆ
ಬೆತ್ಲಹೆಮ್‌ನಲ್ಲಿ ವಿಜೃಂಭಣೆಯ ಕ್ರಿಸ್‌ಮಸ್
ಪಾಕ್ ; ಚುನಾವಣಾ ಬಹಿಷ್ಕಾರಎಪಿಡಿಎಂ ನಿರ್ಧಾರ
ಕ್ರಿಸಮಸ್‌ ಹಬ್ಬಕ್ಕೆ ಪೋಪ್ ಶುಭಾಶಯ