ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಲ್ಸೇತುವೆ ಕುಸಿದು 15 ಸಾವು, 100 ಜನರ ಕಣ್ಮರೆ
ಉಕ್ಕಿನ ಕಾಲ್ಸೇತುವೆಯೊಂದು ಮಂಗಳವಾರ ನೇಪಾಳದಲ್ಲಿ ಕುಸಿದುಬಿದ್ದು, ಕನಿಷ್ಠ 15 ಜನರು ಸತ್ತಿದ್ದು, 100ಕ್ಕೂ ಹೆಚ್ಚು ಮಂದಿ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಮೇಳವೊಂದಕ್ಕೆ ತೆರಳುತ್ತಿದ್ದ ನೂರಾರು ಜನರ ಭಾರ ತಾಳದೇ ಉಕ್ಕಿನ ಸೇತುವೆ ಕುಸಿದು ಅನೇಕ ಮಂದಿ ಹಿಮಚ್ಛಾದಿತ ಹಿಮಾಲಯದ ನದಿಗೆ ಬಿದ್ದು ಕಣ್ಮರೆಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೋಧನೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಪಡೆಗಳು ಧಾವಿಸಿವೆ. ಆದರೆ ರಾತ್ರಿಯ ವೇಳೆ ಶೋಧ ಕಾರ್ಯ ನಿಲ್ಲಿಸಲಾಯಿತೆಂದು ತಿಳಿದುಬಂದಿದೆ. ವೇಗವಾಗಿ ಹರಿಯುವ ನದಿಯಲ್ಲಿ ಬದುಕುಳಿದವರ ಪತ್ತೆ ಮಾಡುವುದು ಅಸಂಭವ ಎಂದು ಸರ್ಕಾರದ ಹಿರಿಯ ಅಧಿಕಾರಿ ಅನಿಲ್ ಪಾಂಡೆ ತಿಳಿಸಿದರು

ಸುಮಾರು 500 ಜನರು ಗ್ರಾಮದ ಜಾತ್ರೆಯಲ್ಲಿ ಪಾಲ್ಗೊಳ್ಳಲು ಭೇರಿ ನದಿಗೆ ಅಡ್ಡಲಾಗಿ ಹಾಕಿದ್ದ ಸೇತುವೆಯನ್ನು ದಾಟುವಾಗ ಈ ದುರ್ಘಟನೆ ಸಂಭವಿಸಿದೆ. ಸೇತುವೆಯ ಕೇಬಲ್‌ಗಳು ಜನರ ಅಧಿಕ ಭಾರ ತಾಳದೇ ಕಳಚಿಕೊಂಡಿತೆಂದು ಹೇಳಲಾಗಿದೆ.

ನದಿಯಲ್ಲಿ ಭಾರೀ ಸೆಳೆತವಿದ್ದು, ಈಜುವುದು ಕಷ್ಟವಾಗಿರುವುದರಿಂದ ಅನೇಕ ಮಂದಿ ಸತ್ತಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಬುಧವಾರ ನಸುಕಿನಲ್ಲಿ ಶೋಧವನ್ನು ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಮಾಧ್ಯಮದ ಭಯದಿಂದ ತೀರ್ಪು ವಿಳಂಬ: ಶೋಭರಾಜ್
ಭಯೋತ್ಪಾದಕ ದಾಳಿ ನಿಲ್ಲಿಸಲು ಪ್ರಚಂಡಾ ಸಲಹೆ
ಉಗ್ರರ, ಸೇನಾಪಡೆಗಳ ಘರ್ಷಣೆ:14 ಸಾವು
ಪಾಕ್ ಚುನಾವಣೆಯಲ್ಲಿ 253 ವಕೀಲರ ಸ್ಪರ್ಧೆ
ಬೆತ್ಲಹೆಮ್‌ನಲ್ಲಿ ವಿಜೃಂಭಣೆಯ ಕ್ರಿಸ್‌ಮಸ್
ಪಾಕ್ ; ಚುನಾವಣಾ ಬಹಿಷ್ಕಾರಎಪಿಡಿಎಂ ನಿರ್ಧಾರ