ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರ್ರಫ್ ವೈಫಲ್ಯದ ಬಗ್ಗೆ ಭುಟ್ಟೊ ಶರೀಫ್ ಟೀಕೆ
PTI
ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಅವರು ಭಯೋತ್ಪಾದಕತೆಯನ್ನು ಮತ್ತು ಆರ್ಥಿಕ ಸಮಸ್ಯೆಗಳನ್ನು ನಿಭಾಯಿಸಲು ವಿಫಲರಾಗಿದ್ದಾರೆ ಎಂದು ಪ್ರತಿಪಕ್ಷದ ನಾಯಕರಾದ ನವಾಜ್ ಶರೀಫ್ ಮತ್ತು ಬೇನಜೀರ್ ಭುಟ್ಟೊ ಮುಷರ್ರಫ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿ ಪ್ರತ್ಯೇಕ ಚುನಾವಣೆ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮುಷರ್ರಫ್ ಅವರನ್ನು ಬೆಂಬಲಿಸುವ ಪಿಎಂಎಲ್-ಕ್ಯೂ ಪಕ್ಷಕ್ಕೆ ಅನುಕೂಲವಾಗುವಂತೆ ಸರ್ಕಾರ ಚುನಾವಣೆ ಅಕ್ರಮದಲ್ಲಿ ಭಾಗಿಯಾಗಬಹುದೆಂದು ಅವರು ಶಂಕಿಸಿದ್ದಾರೆ.

ರಾಜಕೀಯವಾಗಿ ನಿರ್ಣಾಯಕವಾದ ಪಂಜಾಬ್ ಪ್ರಾಂತ್ಯದಲ್ಲಿ ತಮ್ಮ ಪಾಕಿಸ್ತಾನ ಪೀಪಲ್ಸ್ ಪಕ್ಷದ ಪರವಾಗಿ ಪ್ರಚಾರ ಹಮ್ಮಿಕೊಂಡಿರುವ ಭುಟ್ಟೊ, ಆಫ್ಘಾನಿಸ್ತಾನದ ಗಡಿಯಲ್ಲಿ ಬೇರುಬಿಟ್ಟ ಭಯೋತ್ಪಾದಕತೆ ರಾಷ್ಟ್ರದ ಇತರೆ ಭಾಗಗಳಿಗೆ ಹರಡುವುದನ್ನು ತಡೆಯಲು ಮುಷರ್ರಫ್ ವಿಫಲರಾಗಿದ್ದಾರೆಂದು ಆಪಾದಿಸಿದರು. ಪಿಪಿಪಿ ಅಧಿಕಾರದ ಗದ್ದುಗೆ ಏರಿದಲ್ಲಿ ಉಗ್ರಗಾಮಿ ಗುಂಪುಗಳ ಮೇಲೆ ಪ್ರಹಾರ ಮಾಡುವುದಾಗಿ ಅವರು ನುಡಿದರು.

ನಾವು ಹೊಸ ಸೇನಾ ಮುಖ್ಯಸ್ಥರನ್ನು ಪಡೆಯಲು ಸಾದ್ಯವಾಗಿದ್ದು, ಜನತೆಗೆ ಸಂದ ಜಯ ಎಂದು ಅವರು ನುಡಿದರು. ರೋಟಿ, ಕಪಡಾ ಔರ್ ಮಕಾನ್ ಪಿಪಿಪಿ ಘೋಷಣೆಯ ಬಗ್ಗೆ ಗಮನಸೆಳೆಯುತ್ತಾ, ತಮ್ಮ ಪಕ್ಷವು ಶಿಕ್ಷಣ, ಆರೋಗ್ಯಸೇವೆ ಮತ್ತು ಉದ್ಯೋಗದಂತ ಪ್ರಮುಖ ಕ್ಷೇತ್ರಗಳಲ್ಲಿ ಜನರಿಗೆ ಉತ್ತಮಅವಕಾಶ ಕಲ್ಪಿಸುತ್ತದೆಂದು ಅವರು ನುಡಿದರು.
ಮತ್ತಷ್ಟು
ಸೆಲ್ಯೂಟ್ ಹೊಡೆದ ನಾಯಿ: ಮಾಲೀಕ ಜೈಲಿಗೆ
ಕಾಲ್ಸೇತುವೆ ಕುಸಿದು 15 ಸಾವು, 100 ಜನರ ಕಣ್ಮರೆ
ಮಾಧ್ಯಮದ ಭಯದಿಂದ ತೀರ್ಪು ವಿಳಂಬ: ಶೋಭರಾಜ್
ಭಯೋತ್ಪಾದಕ ದಾಳಿ ನಿಲ್ಲಿಸಲು ಪ್ರಚಂಡಾ ಸಲಹೆ
ಉಗ್ರರ, ಸೇನಾಪಡೆಗಳ ಘರ್ಷಣೆ:14 ಸಾವು
ಪಾಕ್ ಚುನಾವಣೆಯಲ್ಲಿ 253 ವಕೀಲರ ಸ್ಪರ್ಧೆ