ಸ್ಯಾನ್‌ಫ್ರಾನ್ಸಿಸ್ಕೊ ಮೃಗಾಲಯದಿಂದ ತಪ್ಪಿಸಿಕೊಂಡ ಹುಲಿಯೊಂದು ಪ್ರವಾಸಿಯೊಬ್ಬರ ಮೇಲೆ ಆಕ್ರಮಣ ಮಾಡಿ ಕೊಂದಿದ್ದಲ್ಲದೇ ಇಬ್ಬರನ್ನು ಗಾಯಗೊಳಿಸಿದ ಘಟನೆ ನಡೆದಿದೆ. ಈ ಘಟನೆ ನಡೆದ ಬಳಿಕ ಹುಲಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೃಗಾಲಯದ ಮಧ್ಯದಲ್ಲಿರುವ ಬೋನಿನಿಂದ ಹುಲಿ ಹೇಗೆ ತಪ್ಪಿಸಿಕೊಂಡಿತೆನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಆರಂಭದಲ್ಲಿ ಮೃಗಾಲಯದ ಕಾವಲುಗಾರರು ನಾಲ್ಕು ಹುಲಿಗಳು ತಪ್ಪಿಸಿಕೊಂಡಿವೆಯೆಂದು ಶಂಕಿಸಿದ್ದರು. ಆದರೆ ಉಳಿದ ಮೂರು ಹುಲಿಗಳು ತಮ್ಮ ಬೋನಿನಿಂದ ಹೊರಗೆ ಹೋಗಿರಲಿಲ್ಲ. ಮಂಗಳವಾರ ಸಂಜೆ ಮೃಗಾಲಯವನ್ನು ಮುಚ್ಚಿದ ಸ್ವಲ್ಪ ಸಮಯದ ಬಳಿಕ ಹೊಟೆಲೊಂದರಲ್ಲಿ ಹುಲಿಯು ದಾಳಿ ಮಾಡಿತೆಂದು ಹೇಳಲಾಗಿದೆ.
ಹುಲಿಯು ಇನ್ನೊಬ್ಬ ಪ್ರವಾಸಿಯ ಮೇಲೆ ಆಕ್ರಮಣ ಮಾಡುತ್ತಿದ್ದ ಸಂದರ್ಭದಲ್ಲೇ ಗುಂಡಿಕ್ಕಿ ಕೊಲ್ಲಲಾಯಿತೆಂದು ಅಗ್ನಿಶಾಮಕ ಇಲಾಖೆಯ ವಕ್ತಾರ ತಿಳಿಸಿದ್ದಾರೆ.
|