ಬಾಂಗ್ಲಾದೇಶದ ಭದ್ರತಾ ಪಡೆಗಳು ಅನೇಕ ಮಂದಿ ಕಲಾಕೃತಿ ಚೋರರನ್ನು ಬಂಧಿಸುವ ಮೂಲಕ ವಿಮಾನನಿಲ್ದಾಣದಲ್ಲಿ ಕಳವಾದ ಎರಡು ಪ್ರಾಚೀನ ಕಾಲದ ವಿಷ್ಣು ಪ್ರತಿಮೆಗಳು ಇರುವ ಸ್ಥಳದ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ಯಾರಿಸ್‌ಗೆ ತೆರಳಬೇಕಿದ್ದ ಈ ಕಲಾಕೃತಿಗಳನ್ನು ಜಿಯಾ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಲ್ಲಿ ಕಳವು ಮಾಡಲಾಗಿತ್ತು.
ನಾವು ರಾತ್ರೋರಾತ್ರಿ ಅನೇಕ ಶಂಕಿತರನ್ನು ಬಂಧಿಸಿದ್ದು. ಸುಮಾರು 8ರಿಂದ 10 ಮಂದಿ ಕಲಾಕೃತಿಗಳನ್ನು ಕದ್ದಿರುವುದು ಖಚಿತವಾಗಿದೆ ಎಂದು ಅಪರಾಧ ವಿರೋಧಿ ಕ್ಷಿಪ್ರಕಾರ್ಯಪಡೆಯ(ಆರ್‌ಎಬಿ) ತುಕಡಿ ವಕ್ತಾರ ಲೆಫ್ಟಿನೆಂಟ್ ಅಬುಲ್ ಕಲಾಂ ಅಜಾದ್ ತಿಳಿಸಿದರು. ಈ ಕಲಾಕೃತಿಗಳನ್ನು ಕಸ ವಿಲೇವಾರಿ ಕೇಂದ್ರಗಳಲ್ಲಿ ಆರ್ಎಬಿ ಪಡೆಗಳು ಶೋಧಿಸುತ್ತಿವೆ.
ವ್ಯಾಪಕ ಶೋಧಗಳ ಹಿನ್ನೆಲೆಯಲ್ಲಿ ತಾವು ಕಲಾಕೃತಿಗಳನ್ನು ನಾಶಪಡಿಸಿರುವುದಾಗಿ ಶಂಕಿತರು ತಿಳಿಸಿದ್ದರು. ಚೋರರ ತಪ್ಪೊಪ್ಪಿಗೆ ಹೇಳಿಕೆಗಳನ್ನು ದಾಖಲು ಮಾಡುತ್ತಿರುವುದಾಗಿ ವಕ್ತಾರ ತಿಳಿಸಿದರು. ಪ್ಯಾರಿಸ್‌ನ ಗಿಮೆಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲು ವಿಮಾನದ ಮೂಲಕ ಈ ಪ್ರತಿಮೆಗಳು ತೆರಳುವ ಮುಂಚೆಯೇ ಎರಡು ವಿಷ್ಣು ಪ್ರತಿಮೆಗಳು ಕಾಣೆಯಾಗಿದ್ದವು.
|