ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡೋನೇಷಿಯಾ; ಭೂಕುಸಿತಕ್ಕೆ 81 ಸಾವು
ಇಂಡೋನೇಶಿಯಾದ ಜಾವಾ ಪ್ರಾಂತ್ಯದಲ್ಲಿ ಉಂಟಾದ ಭೂಕುಸಿತದಿಂದಾಗಿ 81 ಜನರು ಮೃತರಾದ ದಾರುಣ ಘಟನೆ ವರದಿಯಾಗಿದೆ.

ಇಂಡೋನೇಷಿಯಾದ್ಯಂತ ಕಳೆದ ಎರಡು ದಿನಗಳಲ್ಲಿ 12 ಗಂಟೆಗಳ ಕಾಲ ನಿರಂತರ ಸುರಿದ ಮಳೆಯ ಅರ್ಭಟದಿಂದಾಗಿ ಹೆಚ್ಚಿನ ಪ್ರಮಾಣದ ಭೂಕುಸಿತ ಉಂಟಾಗಿದೆ.

ರಸ್ತೆಗಳು ಮಳೆಯಿಂದಾಗಿ ಕೊಚ್ಚಿ ಹೋಗಿದ್ದರಿಂದ ಘಟನಾ ಸ್ಥಳಗಳಿಗೆ, ಪರಿಹಾರ ಕಾರ್ಯಕ್ಕೆ ತಲುಪಲು ಪ್ರಯತ್ನಿಸುತ್ತಿರುವ ಪೊಲೀಸರು ಹಾಗೂ ಇನ್ನಿತರ ಸಿಬ್ಬಂದಿಗೆ ತೀವ್ರ ಅಡಚಣೆ ಉಂಟಾಗಿದೆ.

ಜಕಾರ್ತಾದಿಂದ 300 ಮೈಲುಗಳ ದೂರದಲ್ಲಿರುವ ಘಟನಾ ಸ್ಥಳಗಳಿಗೆ ತಲುಪಿ ಭೂಕುಸಿತದಲ್ಲಿ ಸಿಲುಕಿದ ಜನರನ್ನು ಹೊರತೆಗೆಯಲು ಭಾರಿ ಯಂತ್ರಗಳ ಅಗತ್ಯವಿದ್ದು, ರಸ್ತೆಗಳು ಕೆಟ್ಟುಹೋಗಿದ್ದರಿಂದ ತೀವ್ರ ತೊಂದರೆ ಎದುರಿಸಬೇಕಾಗಿದೆ.

ಇಂಡೋನೇಷಿಯಾದ ಅನೇಕ ಜಿಲ್ಲೆಗಳಲ್ಲಿ ಪರ್ವತಗಳಿಂದ ಆವೃತ್ತವಾದ ನದಿ ತೀರದ ಫಲವತ್ತಾದ ಪ್ರದೇಶದಲ್ಲಿ ಜನರು ವಾಸಿಸುತ್ತಿದ್ದು ಮಳೆಗಾಲದಲ್ಲಿ ಈ ಘಟನೆಗಳು ನಡೆಯುವುದು ಸರ್ವೇ ಸಾಮಾನ್ಯವಾಗಿದೆ.

ಮತ್ತಷ್ಟು
ಕಲಾಕೃತಿ ಚೋರರಿಂದ ಪ್ರತಿಮೆಗಳ ಬಗ್ಗೆ ಮಾಹಿತಿ
ಜನಾಂಗೀಯ ಹಿಂಸಾಚಾರಕ್ಕೆ 30 ಜನರ ಬಲಿ
ಪ್ರವಾಸಿಯನ್ನು ಕೊಂದ ಹುಲಿ ಗುಂಡಿಗೆ ಬಲಿ
ಮುಷರ್ರಫ್ ವೈಫಲ್ಯದ ಬಗ್ಗೆ ಭುಟ್ಟೊ ಶರೀಫ್ ಟೀಕೆ
ಸೆಲ್ಯೂಟ್ ಹೊಡೆದ ನಾಯಿ: ಮಾಲೀಕ ಜೈಲಿಗೆ
ಕಾಲ್ಸೇತುವೆ ಕುಸಿದು 15 ಸಾವು, 100 ಜನರ ಕಣ್ಮರೆ