ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನವಾಜ್ ಷರೀಫ್ ಸಭೆಯಲ್ಲಿ ಗುಂಡಿನ ದಾಳಿ; ನಾಲ್ಕು ಸಾವು
ನವಾಜ್ ಫರೀಫ್ ಪ್ರಚಾರ ಸಭೆಯಲ್ಲಿ ಸರಕಾರದ ಪರ ಬೆಂಬಲಿಗರ ಹಾಗೂ ನವಾಜ್ ಷರೀಫ್ ಬೆಂಬಲಿಗರ ನಡುವೆ ಉಂಟಾದ ಘರ್ಷಣೆಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ.

ಮಾಜಿ ಪ್ರಧಾನಿ ನವಾಜ್ ಷರೀಫ್ ಇಸ್ಲಾಮಾಬಾದ್‌ ನಗರದಿಂದ 15 ಕಿ.ಮಿ.ದೂರದಲ್ಲಿರುವ ವಿಮಾನನಿಲ್ದಾಣದ ಬಳಿ ಆಯೋಜಿಸಿದ ಪ್ರಚಾರ ಸಭೆಯಲ್ಲಿ ಸರಕಾರ ಬೆಂಬಲಿತ ಜನರು ಸಭೆಯಲ್ಲಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದಾಗ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ಪಕ್ಷದ ವಕ್ತಾರ ಸಾದಿಕ್ ಉಲ್ ಫಾರೂಖ್ ತಿಳಿಸಿದ್ದಾರೆ.

ನವಾಜ್ ಷರೀಫ್ ಘಟನೆಯಲ್ಲಿ ಪಾರಾಗಿದ್ದು ಕೆಲ ಮಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.ಗಾಯಾಳುಗಳು ಪಾಕಿಸ್ತಾನ ಷರೀಫ್ ನೇತ್ರತ್ವದ ಮುಸ್ಲಿಂ ಲೀಗ್ ಪಕ್ಷಕ್ಕೆ ಸೇರಿದವರಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಈ ಘಟನೆಯನ್ನು ಪಾಕಿಸ್ತಾನ ಮುಸ್ಲಿಂ ಲೀಗ್ (ಕ್ಯೂ) ವಕ್ತಾರರು ಖಂಡಿಸಿದ್ದು, ದಾಳಿಗೆ ಕಾರಣರಾದವರನ್ನು ಉಗ್ರವಾಗಿ ಶಿಕ್ಷಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.

ಘಟನೆಯಲ್ಲಿ ನಾಲ್ಕು ಮಂದಿ ಪಕ್ಷದ ಕಾರ್ಯಕರ್ತರು ಮೃತರಾಗಿದ್ದು ಮೂವರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಹುಸೇನ್ ತಿಳಿಸಿದ್ದು, ಆರೋಪಿಗಳ ಪತ್ತೆಗೆಜಾಲ ಬೀಸಲಾಗಿದೆ ಎಂದು ಹೇಳಿದ್ದಾರೆ.



ಮತ್ತಷ್ಟು
ಭುಟ್ಟೋ ಸಭೆಯಲ್ಲಿ ಆತ್ಮಾಹುತಿ ದಾಳಿ ;20 ಮಂದಿ ಸಾವು
ಇಂಡೋನೇಷಿಯಾ; ಭೂಕುಸಿತಕ್ಕೆ 81 ಸಾವು
ಕಲಾಕೃತಿ ಚೋರರಿಂದ ಪ್ರತಿಮೆಗಳ ಬಗ್ಗೆ ಮಾಹಿತಿ
ಜನಾಂಗೀಯ ಹಿಂಸಾಚಾರಕ್ಕೆ 30 ಜನರ ಬಲಿ
ಪ್ರವಾಸಿಯನ್ನು ಕೊಂದ ಹುಲಿ ಗುಂಡಿಗೆ ಬಲಿ
ಮುಷರ್ರಫ್ ವೈಫಲ್ಯದ ಬಗ್ಗೆ ಭುಟ್ಟೊ ಶರೀಫ್ ಟೀಕೆ