ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2008ರ ಬಜೆಟ್ ನಿಧಿಗೆ ಬುಷ್ ಅಂಕಿತ
ವಿವಿಧ ಯೋಜನೆಗಳಿಗಾಗಿ ಪಾಕಿಸ್ತಾನಕ್ಕೆ ನೀಡುವ 250 ದಶಲಕ್ಷ ಡಾಲರ್ ಒಳಗೊಂಡಂತೆ 2008ನೇ ಸಾಲಿನ 550 ಶತಕೋಟಿ ಡಾಲರ್ ಮೌಲ್ಯದ ಬಜೆಟ್‌ ನಿಧಿಗೆ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅಂಕಿತ ಹಾಕಿದ್ದಾರೆ.

ನೂತನ ವರ್ಷವನ್ನು ಬರಮಾಡಿಕೊಳ್ಳಲು ಜನವರಿ 1, 2008 ರವರೆಗೆ ಕಾಲ ಕಳೆಯಲು ಕ್ರಾಫೋರ್ಡ್ ಟೆಕ್ಸಾಸ್‌ಗೆ ವಿಮಾನ ಪಡೆಯ ಮೂಲಕ ಹೋಗುವ ಪೂರ್ವದಲ್ಲಿಯೇ ಬುಷ್ ಅವರು ಅಂಕಿತ ಹಾಕಿದ್ದಾರೆ.

ಪಾಕಿಸ್ತಾನವು ಪ್ರಜಾಪ್ರಭುತ್ವ ಹಕ್ಕುಗಳನ್ನು ಮರಳಿಸ್ಥಾಪಿಸಿದೆ ಎದು ರಾಜ್ಯ ಕಾರ್ಯದರ್ಶಿ ಕಾಂಡೋಲಿಜಾ ರೈಸ್ ಅವರು ಕಾಪಿಟೊಲ್ ಹಿಲ್‌ಗೆ ವರದಿ ಒಪ್ಪಿಸಿದ ನಂತರ, ಅಮೆರಿಕದ ಕಾನೂನು ತಜ್ಞರು ಇಸ್ಲಾಮಾಬಾದ್‌ಗೆ ನೀಡುವ 300 ದಶಲಕ್ಷ ಡಾಲರ್ ನೆರವಿನ ಹಣದಲ್ಲಿ 50 ದಶಲಕ್ಷ ಡಾಲರ್ ಹಣವನ್ನು ಕಡಿತಗೊಳಿಸಿದ್ದರು.

ಕಾಂಗ್ರೆಸ್‌ನ ಹೆಚ್ಚುವರಿ ಮೀಸಲು ಹಣ ನಿಗದಿಪಡಿಸುವದರೊಂದಿಗೆ ಸತತವಾಗಿ ನಾವು ನಿರಾಶೆಯಾಗಿದ್ದೆವು. ಜೊತೆಗೆ ಈ ಬಜೆಟ್‌ನ್ನು ಸಮಬಲವಾಗಿರಿಸಿಕೊಳ್ಳಲು ತೆರಿಗೆಯಲ್ಲಿ ವಿನಾಯಿತಿ ಮಾಡುವ 2009ರ ನೂತನ ಬಜೆಟ್‌ಗೂ ಅಧ್ಯಕ್ಷ ಬುಷ್ ಅವರು ಅಂಕಿತ ಹಾಕುವ ನಿರೀಕ್ಷೆ ಇದೆ ಎಂದು ಶ್ವೇತಭವನದ ಮಾಧ್ಯಮದ ಉಪ ಕಾರ್ಯದರ್ಶಿ ಸ್ಕಾಟ್ ಸ್ಟಾಂಜೆಲ್ ಅವರು ಹೇಳಿದ್ದಾರೆ.
ಮತ್ತಷ್ಟು
ನವಾಜ್ ಷರೀಫ್ ಸಭೆಯಲ್ಲಿ ಗುಂಡಿನ ದಾಳಿ; ನಾಲ್ಕು ಸಾವು
ಭುಟ್ಟೋ ಸಭೆಯಲ್ಲಿ ಆತ್ಮಾಹುತಿ ದಾಳಿ ;20 ಮಂದಿ ಸಾವು
ಇಂಡೋನೇಷಿಯಾ; ಭೂಕುಸಿತಕ್ಕೆ 81 ಸಾವು
ಕಲಾಕೃತಿ ಚೋರರಿಂದ ಪ್ರತಿಮೆಗಳ ಬಗ್ಗೆ ಮಾಹಿತಿ
ಜನಾಂಗೀಯ ಹಿಂಸಾಚಾರಕ್ಕೆ 30 ಜನರ ಬಲಿ
ಪ್ರವಾಸಿಯನ್ನು ಕೊಂದ ಹುಲಿ ಗುಂಡಿಗೆ ಬಲಿ