ನಗರದ ಪ್ರಮುಖ ಪ್ರದೇಶಗಳು ಒಳಗೊಂಡಂತೆ ಇತರ ರಾಜಕೀಯ ನಾಯಕರು ಹಾಗೂ ಧಾರ್ಮಿಕ ಮುಖಂಡರ ಮೇಲೆ ಉಗ್ರರು ದಾಳಿ ನಡೆಸುವ ಬೆದರಿಕೆಯ ಮಾಹಿತಿಯನ್ನು ಗುಪ್ತಚರ ಏಜೆನ್ಸಿಯು ಹೊರಹಾಕಿದ ನಂತರ, ದೇಶಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಇಸ್ಲಾಮಾಬಾದ್‌ನಲ್ಲಿ ಪ್ರಬಲ ಆತ್ಮಹತ್ಯಾ ಬಾಂಬ್ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಪಾಕ್‌ನ ಆಂತರಿಕ ಸಚಿವಾಲಯ ಪೊಲೀಸರಿಗೆ ಹಾಗೂ ನಗರದ ಆಡಳಿತ ವ್ಯವಸ್ಥಾಪನೆಗೆ ಎಚ್ಚರಿಕೆ ನೀಡಿದೆ ಎಂದು ಸರಕಾರ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉಗ್ರರು ರಾಜಕೀಯ ನಾಯಕರು ಹಾಗೂ ಧಾರ್ಮಿಕ ಮುಖಂಡರನ್ನು ಪ್ರಮುಖ ಗುರಿಯಾಗಿಸಿಕೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯವು ಮುನ್ನೆಚ್ಚರಿಕೆ ನೀಡಿದೆ.
ರಾಜಧಾನಿ ಇಸ್ಲಾಮಾಬಾದ್‌ನ ಸುತ್ತಮುತ್ತಲು ಭದ್ರತಾ ಸೇನಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಜೊತೆಗೆ ಜನವರಿ 8 ರಂದು ಚುನಾವಣೆ ಮುಕ್ತಾಯಗೊಳ್ಳುವವರೆಗೂ ಭದ್ರತಾ ಪಡೆಯ ಕಾವಲನ್ನು ಮುಂದುವರೆಸಲಾಗುವುದು ಎಂದು ಅಲ್ಲಿನ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.
ಪಾಕಿಸ್ತಾನ ರೇಂಜರ್ಸ್‌ನ ಅರೆಸೇನಾ ಪಡೆಯು ಮೂರು ತುಕಡಿಗಳು, ಪಂಜಾಬ್ ಕಾನ್‌ಸ್ಟೇಬಲೆನ್ಸಿಯ ಎಲೈಟ್ ಪಡೆ ಹಾಗೂ ನಗರ ಪೊಲೀಸರನ್ನು ರಾಜಧಾನಿ ಇಸ್ಲಾಮಾಬಾದ್‌ನ ಸೂಕ್ಷ್ಮ ಪ್ರದೇಶಗಳಲ್ಲಿ ನಿಜೋಯಿಸಲಾಗಿದೆ.
|