ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್ ಹೊಣೆ: ಚುನಾವಣೆಗೆ ಪಿಎಂಎಲ್ ಬಹಿಷ್ಕಾರ
ಪ್ರತಿಪಕ್ಷ ನಾಯಕಿ ಬೇನಜೀರ್ ಭುಟ್ಟೋ ಹತ್ಯೆಗೆ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಕಾರಣ ಎಂದು ಆರೋಪಿಸಿರುವ ಮಾಜಿ ಪ್ರಧಾನಿ ನವಾಜ್ ಶರೀಫ್, ಜನವರಿ 8ರ ಮಹಾಚುನಾವಣೆಗಳನ್ನು ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷವು ಬಹಿಷ್ಕರಿಸಲಿದೆ ಎಂದು ಘೋಷಿಸಿದ್ದಾರೆ.

ಮುಷರಫ್ ಆಡಳಿತದಡಿ, ಅರಾಜಕತೆ, ಕೋಲಾಹಲ, ಭಯಾತಂಕಗಳು ಎಂದಿಗೂ ಅಂತ್ಯಕಾಣಲಾರವು. ಪಾಕಿಸ್ತಾನದಲ್ಲಿ ಶಾಂತಿ, ಒಗ್ಗಟ್ಟು ಅಸಾಧ್ಯ ಎಂದು ತಿಳಿಸಿರುವ ಅವರು, ಎಲ್ಲಾ ಸಮಸ್ಯೆಗಳಿಗೆ ಮುಷರಫ್ ಮೂಲ ಕಾರಣ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.

ಇಂಥ ಪರಿಸ್ಥಿತಿಯಲ್ಲಿ, ತಮ್ಮ ಪಕ್ಷವು ಚುನಾವಣೆಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಅಂತಾರಾಷ್ಟ್ರೀಯ ಸ್ವತಂತ್ರ ಸಮೀಕ್ಷಾ ವರದಿಗಳು ತಿಳಿಸಿರುವ ಹೊರತಾಗಿಯೂ ನಾವು ಚುನಾವಣೆ ಬಹಿಷ್ಕರಿಸಲಿದ್ದೇವೆ ಎಂದು ಶರೀಫ್ ನುಡಿದರು.

ಬೇನಜೀರ್ ನನಗೆ ಸಹೋದರಿಯಿದ್ದಂತೆ. ಆಕೆಯ ಹತ್ಯೆಯ ಪ್ರತೀಕಾರದ ನಿಮ್ಮ ಹೋರಾಟದಲ್ಲಿ ನಾನೂ ಭಾಗಿಯಾಗುತ್ತೇನೆ ಎಂದು ಬೇನಜೀರ್ ಅವರ ಪಿಪಿಪಿ ಕಾರ್ಯಕರ್ತರಿಗೆ ತಿಳಿಸಿದ ಅವರು, "ನೀವು ಅನಾಥರೆಂದು ಭಾವಿಸಬೇಡಿ. ಇದಕ್ಕೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳೋಣ" ಎಂದು ಸಾಂತ್ವನ ಹೇಳಿದ್ದರು.

ಪಾಕಿಸ್ತಾನ ರಕ್ಷಣೆಗೆ ಕಾಲ ಬಂದಿದೆ, ಅದನ್ನು ಬಾಧಿಸುತ್ತಿರುವ ಗಾಯಗಳನ್ನು ಶಮನ ಮಾಡಬೇಕಾಗಿದೆ ಎಂದು ತಿಳಿಸಿದ ಅವರು, ಭುಟ್ಟೋ ಹತ್ಯೆಯ ರಾಜಕೀಯ ದುರ್ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳನ್ನು ತಳ್ಳಿ ಹಾಕಿದರು.

ಭುಟ್ಟೋ ಹತ್ಯೆಯಿಂದ ಯಾರಿಗೂ ಯಾವುದೇ ಲಾಭವಾಗದು ಎಂದು ಬಿಬಿಸಿಗೆ ತಿಳಿಸಿರುವ ಅವರು, ತಮ್ಮ ಸ್ವಂತ ಭದ್ರತೆಗೆ ಕೋಟ್ಯಂತರ ರೂಪಾಯಿ ವ್ಯಯ ಮಾಡುವ ಮುಷರಫ್, ಭುಟ್ಟೋ ರಕ್ಷಣೆಗೆ ಸ್ವಲ್ಪವಾದರೂ ವ್ಯಯಿಸದಿರುವುದೇಕೆ ಎಂದು ಪ್ರಶ್ನಿಸಿದರು.
ಮತ್ತಷ್ಟು
ಭುಟ್ಟೋ ಕೊಂದದ್ದು ನಾವು: ಅಲ್ ಖಾಯಿದಾ
ಬೇನಜೀರ್ ಭುಟ್ಟೊ ನಡೆದು ಬಂದ ದಾರಿ
ಸೌಂದರ್ಯ, ಡಿಸೈನರ್ ಕನ್ನಡಕಕ್ಕೆ ಹೆಸರಾಗಿದ್ದ ಭುಟ್ಟೋ
ಉಗ್ರರ ಬೆದರಿಕೆ: ಪಾಕ್‌ನಲ್ಲಿ ತೀವ್ರ ಕಟ್ಟೆಚ್ಚರ
ಮುಷ್-ಕರ್ಜಾಯಿ ಮಹತ್ವದ ಮಾತುಕತೆ
2008ರ ಬಜೆಟ್ ನಿಧಿಗೆ ಬುಷ್ ಅಂಕಿತ