ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾರ್ಖಾನದಲ್ಲಿ ಬೇನ್‌ಜಿರ್ ಅಂತ್ಯಕ್ರಿಯೇ
ಪಾಕಿಸ್ತಾನದ ಮಾಜಿ ಪ್ರಧಾನಿ ಬೇನ್‌ಜಿರ್ ಭುಟ್ಟೋ ಅವರ ಅಂತ್ಯಕ್ರಿಯೇ ಸ್ವಕ್ಷೇತ್ರವಾದ ಸಿಂಧ್‌ನ ಲಾರ್ಖಾನಾದಲ್ಲಿ ತಂದೆಯ ಸಮಾಧಿಯ ಬಳಿ ನಡೆಯಲಿದೆ. ಬೇನ್‌ಜಿರ್ ಹತ್ಯೆಗೆ ನಾವುಗಳು ಜವಾಬ್ದಾರರು ಎಂದು ಅಲ್‌ಖೈದಾ ಹೊಣೆಯನ್ನು ಹೊತ್ತುಕೊಂಡಿದೆ.

ಅಲ್‌ಖೈದಾ ವಕ್ತಾರ ಮುಸ್ತಫಾ ಅಬು ಅಲ್ ಯಾಝಿದ್ ಅವರು ಮಾಧ್ಯಮಗಳಿಗೆ ದೂರವಾಣಿ ಮೂಲಕ ಮಾತನಾಡಿ ಮಾಜಿ ಪ್ರಧಾನಿ ಬೇನ್‌ಜಿರ್ ಅವರ ಹತ್ಯೆಗೆ ನಾವು ಜವಾಬ್ದಾರರು ಎಂದು ತಿಳಿಸಿದ್ದಾರೆ.

ಸಿಂಧ ಪ್ರಾಂತ್ಯದ ಲಾರ್ಖಾನಾಗೆ ಬೇನ್‌ಜಿರ್ ಮೃತದೇಹವನ್ನು ತರಲಾಗಿದ್ದು ತಂದೆ ಭುಟ್ಟೋ ಅವರ ಸಮಾಧಿಯ ಹತ್ತಿರ ಬೇನ್‌ಜಿರ್ ಅಂತ್ಯಕ್ರಿಯೇ ನೇರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಾಜಿ ಪ್ರಧಾನಿ ಬೇನ್‌ಜಿರ್ ಅವರ ಪತಿ ಆಸಿಫ್ ಅಲಿ ಜರ್ದಾರಿ ಹಾಗೂ ಮೂರು ಮಕ್ಕಳು ದುಬೈನಿಂದ ಅಂತ್ಯಕ್ರಿಯೇ ಮಾಡಲು ಆಗಮಿಸಿದ್ದಾರೆ. ಪಾಕಿಸ್ತಾನ ಪೀಪಲ್ಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಹಾಗೂ ನಾಯಕರು ಅಂತ್ಯಕ್ರಿಯೇ ನೇರವೇರುವ ಸ್ಥಳದಲ್ಲಿ ಸೇರಿದ್ದಾರೆ.


ಜುಲ್ಫಿಕರ್ ಅಲಿ ಭುಟ್ಟೋ ಅವರ ಗರಹಿ ಖುದಾ ಭಕ್ಷ ಸಮಾಧಿಯ ಬಳಿ ಬೇನ್‌ಜಿರ್ ಅಂತ್ಯಕ್ರಿಯೇ ನೇರವೇರಿಸಲಾಗುವುದು ಎಂದು ಪಕ್ಷದ ವಕ್ತಾರ ಫರ್ಹಾತುಲ್ಲಾ ಬಾಬರ್ ಹೇಳಿದ್ದಾರೆ.

ಬೇನ್‌ಜಿರ್ ಮೃತದೇಹವನ್ನು ಸೇನೆಯ ವಾಯುದಳದ ಸಿ-130 ಏರ್‌ಕ್ರಾಫ್ಟ್‌ನಲ್ಲಿ ಇಸ್ಲಾಮಾಬಾದ್‌ನಿಂದ ಸಿಂಧ್ ಪ್ರಾಂತ್ಯದ ಲಾರ್ಖಾನಾಗೆ ತರಲಾಗಿದೆ.
ಮತ್ತಷ್ಟು
ಭಯೋತ್ಪಾದಕರ ವಿರುದ್ದ ಸಮರ-ಮುಷರಫ್
ಮುಷರಫ್ ಹೊಣೆ: ಚುನಾವಣೆಗೆ ಪಿಎಂಎಲ್ ಬಹಿಷ್ಕಾರ
ಭುಟ್ಟೋ ಕೊಂದದ್ದು ನಾವು: ಅಲ್ ಖಾಯಿದಾ
ಬೇನಜೀರ್ ಭುಟ್ಟೊ ನಡೆದು ಬಂದ ದಾರಿ
ಸೌಂದರ್ಯ, ಡಿಸೈನರ್ ಕನ್ನಡಕಕ್ಕೆ ಹೆಸರಾಗಿದ್ದ ಭುಟ್ಟೋ
ಉಗ್ರರ ಬೆದರಿಕೆ: ಪಾಕ್‌ನಲ್ಲಿ ತೀವ್ರ ಕಟ್ಟೆಚ್ಚರ