ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭುಟ್ಟೋ ಹತ್ಯೆ: ಹೊತ್ತಿ ಉರಿಯುತ್ತಿರುವ ಪಾಕ್
ಪಾಕ್ ಮಾಜಿ ಪ್ರಧಾನಮಂತ್ರಿ ಬೆನಜೀರ್ ಭುಟ್ಟೋ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ರಾಜಧಾನಿಯಲ್ಲಿ ಹಿಂಸಾಚಾರವು ನೃತ್ಯತಾಂಡವವಾಡುತ್ತಿದೆ.

ದಿ.ಭುಟ್ಟೋ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಕಾರ್ಯಕರ್ತರು ಹಾಗೂ ಬೆಂಬಲಿಗರು ನಗರದ ಪ್ರತಿಯೊಂದು ಪ್ರದೇಶಗಳಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದು, ವಾಹನಗಳನ್ನು ಸುಟ್ಟು ಹಾಕುತ್ತಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶ ಮಾಡುತ್ತಿದ್ದಾರೆ.

ಪಾಕ್ ಅಧ್ಯಕ್ಷ ಪರ್ವೇಜ್ ಮುಷರ್ರಫ್ ವಿರುದ್ಧ ಪಿಪಿಪಿಯ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಿದ್ದು, ವಿರೋಧ ಪಕ್ಷಗಳ ಬೆಂಬಲಿಗರೊಂದಿಗೆ ನಡೆದ ಕದನದಲ್ಲಿ ಸುಮಾರು 20 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಾಜಿ ಪ್ರಧಾನಿ ಭುಟ್ಟೋ ಅವರ ಹತ್ಯೆಯಿಂದಾಗಿ ದೇಶವು ಮೂರು ದಿನಗಳ ಶೋಕಾಚರಣೆಯನ್ನು ಆಚರಿಸುತ್ತಿದೆ. ಜೊತೆಗೆ ದೇಶದ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಕರಾಚಿಯಲ್ಲಿರುವ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ದೇಶದಲ್ಲಿ ಉಂಟಾಗಿರುವ ಈ ಆಘಾತದಿಂದ ಯಾವುದಾದರೂ ಪರಿಣಾಮ ಬೀರಬಹುದೆಂಬ ಕಾರಣದಿಂದ ಮೂರು ದಿನಗಳ ಕಾಲ ಎಲ್ಲ ಸರಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳನ್ನು, ಬ್ಯಾಂಕ್‌ಗಳನ್ನು, ವಾಣಿಜ್ಯ ಕೇಂದ್ರಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಆಂತರಿಕ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಶ್ಮೋರ್, ಹೊಯ್‌ಬಾಟ್ ಹಾಗೂ ಖಂದತ್‌ನಲ್ಲಿರುವ ಮೂರು ರೈಲ್ವೆ ನಿಲ್ದಾಣಗಳನ್ನು ಪ್ರತಿಭಟನಾಕಾರರು ಸಂಪೂರ್ಣವಾಗಿ ಸುಟ್ಟುಹಾಕಿದ್ದಾರೆ. ಸುಮಾರು 15 ಬ್ಯಾಂಕ್‌ಗಳ ಮೇಲೆ ದಾಳಿ ನಡೆಸಿರುವ ಅವರು, ಖಂಡತ್‌ನಲ್ಲಿರುವ ಬ್ಯಾಂಕ್‌ನ್ನು ಸುಟ್ಟುಹಾಕಿದ್ದಾರೆ ಎನ್ನಲಾಗಿದೆ.

ಜೈಲುಗಳಲ್ಲಿರುವ ಕೈದಿಗಳು ಸಹ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಯತ್ನಿಸುತ್ತಿದ್ದು, ಅಲ್ಲಿನ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಗಂಬಾರ್ಖಾನ್ ಪೊಲೀಸ್ ಠಾಣೆಯೂ ಇವರ ಪ್ರತಿಭಟನೆಗೆ ಬಲಿಯಾಗಿದೆ ಎಂದು ವರದಿಯಾಗಿದೆ.

ಬಲೂಚಿಸ್ತಾನದ ಪ್ರಾಂತ್ಯದಲ್ಲಿನ ಚೂಹಾರ್ ಜಮಾಲಿಯಲ್ಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ನಡೆಸಿದ ಗುಂಡಿನ ದಾಳಿಗೆ ಸುಮಾರು ಮೂವರು ಬಲಿಯಾಗಿದ್ದಾರೆ. ಸಿಂಧ್ ಪ್ರಾಂತ್ಯದಿಂದಲೇ 13 ಮಂದಿ ಸೇರಿದಂತೆ ದೇಶದ ಇತರ ಭಾಗಗಳಲ್ಲಿ 17 ಮಂದಿ ಮೃತಪಟ್ಟಿರುವ ಕುರಿತು ವರದಿಗಳು ಬಂದಿವೆ.


ಮತ್ತಷ್ಟು
ಲಾರ್ಖಾನದಲ್ಲಿ ಬೇನ್‌ಜಿರ್ ಅಂತ್ಯಕ್ರಿಯೇ
ಭಯೋತ್ಪಾದಕರ ವಿರುದ್ದ ಸಮರ-ಮುಷರಫ್
ಮುಷರಫ್ ಹೊಣೆ: ಚುನಾವಣೆಗೆ ಪಿಎಂಎಲ್ ಬಹಿಷ್ಕಾರ
ಭುಟ್ಟೋ ಕೊಂದದ್ದು ನಾವು: ಅಲ್ ಖಾಯಿದಾ
ಬೇನಜೀರ್ ಭುಟ್ಟೊ ನಡೆದು ಬಂದ ದಾರಿ
ಸೌಂದರ್ಯ, ಡಿಸೈನರ್ ಕನ್ನಡಕಕ್ಕೆ ಹೆಸರಾಗಿದ್ದ ಭುಟ್ಟೋ