ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಫೋಟದಿಂದ ಸಿಡಿದ ಲೋಹದಿಂದಾಗಿ ಭುಟ್ಟೋ ಸಾವು?
ಚುನಾವಣಾ ಸಭೆ ಬಳಿಕ ಉಗ್ರರ ದಾಳಿಯಲ್ಲಿ ಮೃತಪಟ್ಟ ಪಾಕ್ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರು ಗುಂಡೇಟು ಅಥವಾ ಬಾಂಬ್ ಸ್ಫೋಟದ ಗಾಯಗಳಿಂದಾಗಿ ಸತ್ತಿಲ್ಲವೇ ಎಂಬ ಸಂಗತಿ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ.

ಬೇನಜೀರ್ ಅವರಿಗೆ ಚಿಕಿತ್ಸೆ ನೀಡಿ ಬದುಕಿಸಲು ಯತ್ನಿಸಿದ್ದ ರಾವಲ್ಪಿಂಡಿ ಆಸ್ಪತ್ರೆಯ ವೈದ್ಯರು ಹೇಳುವ ಪ್ರಕಾರ, ಭುಟ್ಟೋ ದೇಹದಲ್ಲಿ ಗುಂಡಿನ ಗಾಯಗಳು ಇರಲಿಲ್ಲ. ಸ್ಫೋಟದ ತೀವ್ರತೆಯಿಂದ ಎಸೆಯಲ್ಪಟ್ಟ ಲೋಹದ ತುಣುಕು ಅವರ ದೇಹ ಪ್ರವೇಶಿಸಿದ್ದರಿಂದ ಸಾವನ್ನಪ್ಪಿದ್ದಾರೆ.

ಆದರೆ ಸರಕಾರದ ಪ್ರಕಾರ, ಭುಟ್ಟೋ ಅವರು ಸಾಗುತ್ತಿದ್ದ ವಾಹನದ ಬಿಸಿಲುತಡೆ ಲಿವರ್‌ನಿಂದ ಗಾಯಗೊಂಡು ಸತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆಂತರಿಕ ಸಚಿವಾಲಯದ ವಕ್ತಾರ ಜಾವೇದ್ ಚೀಮ ಹೇಳಿದ್ದರು.

ಬೇನಜೀರ್ ಅವರು ಹೊರಗಡೆ ಇಣುಕಿದರಾದರೂ, ಆತ್ಮಾಹುತಿ ದಾಳಿಕೋರ ನಡೆಸಿದ ಸ್ಫೋಟದಿಂದಾಗಿ ಆಘಾತಗೊಂಡಿದ್ದು, ಹಿಂದಕ್ಕೆ ಬಿದ್ದರು. ಇದರಿಂದಾಗಿ ಲಿವರ್ ತಗುಲಿ ಅವರ ತಲೆಗೆ ಗಾಯವಾಯಿತು ಎಂದು ಜಾವೇದ್ ಹೇಳಿದ್ದಾರೆ.

ಈ ಮಧ್ಯೆ, ಸರ್ಕಾರದ ಈ ವಾದವನ್ನು ತಳ್ಳಿಹಾಕಿರುವ ಭುಟ್ಟೋ ಅವರ ಸಹವರ್ತಿಯೊಬ್ಬರು, ಸರ್ಕಾರದ ಈ ವಿವರವನ್ನು ಸುಳ್ಳಿನ ಕಂತೆ ಎಂದು ತಳ್ಳಿಹಾಕಿದ್ದಾರೆ. "ಇದು ಆಧಾರ ರಹಿತ, ಸುಳ್ಳಿನ ಕಂತೆ" ಎಂದು ಹೇಳಿರುವ ಭುಟ್ಟೋ ಅವರ ವಕೀಲ ಹಾಗೂ ಪಿಪಿಪಿಯ ಹಿರಿಯ ಅಧಿಕಾರಿ ಫಾರೂಖ್ ನಾಯ್ಕ್, ಎರಡು ಗುಂಡುಗಳು ಅವರಿಗೆ ತಗುಲಿದೆ. ಒಂದು ಅವರ ಕಿಬ್ಬೊಟ್ಟೆ ತಗುಲಿದ್ದರೆ, ಇನ್ನೊಂದು ಅವರ ತಲೆಗೆ ತಗುಲಿದೆ, ಇದು ಗಂಭೀರ ಭದ್ರತಾ ಲೋಪ ಎಂದು ಆರೋಪಿಸಿದ್ದಾರೆ.
ಮತ್ತಷ್ಟು
ಭುಟ್ಟೋ ಹತ್ಯೆ: ಹೊತ್ತಿ ಉರಿಯುತ್ತಿರುವ ಪಾಕ್
ಲಾರ್ಖಾನದಲ್ಲಿ ಬೇನ್‌ಜಿರ್ ಅಂತ್ಯಕ್ರಿಯೇ
ಭಯೋತ್ಪಾದಕರ ವಿರುದ್ದ ಸಮರ-ಮುಷರಫ್
ಮುಷರಫ್ ಹೊಣೆ: ಚುನಾವಣೆಗೆ ಪಿಎಂಎಲ್ ಬಹಿಷ್ಕಾರ
ಭುಟ್ಟೋ ಕೊಂದದ್ದು ನಾವು: ಅಲ್ ಖಾಯಿದಾ
ಬೇನಜೀರ್ ಭುಟ್ಟೊ ನಡೆದು ಬಂದ ದಾರಿ