ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನ: ಜ.8ರ ಚುನಾವಣೆ ಮುಂದಕ್ಕೆ
ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಹತ್ಯೆಯ ಬಳಿಕ ಪಾಕಿಸ್ತಾನದಲ್ಲಿ ತಲೆದೋರಿರುವ ಸಂಘರ್ಷಾತ್ಮಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನವರಿ 8ರಂದು ನಡೆಸಲು ಉದ್ದೇಶಿಸಲಾಗಿದ್ದ ಮಹಾ ಚುನಾವಣೆಗಳನ್ನು ಚುನಾವಣಾ ಆಯೋಗವು ಮುಂದೂಡಲು ನಿರ್ಧರಿಸಿದೆ.

ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳಿಗೆ ಹೊಸ ಚುನಾವಣಾ ದಿನಾಂಕಗಳನ್ನು ಆಯೋಗವು ಸೋಮವಾರ ಪ್ರಕಟಿಸಲಿದೆ ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅನೌಪಚಾರಿಕ ಸಭೆಯೊಂದರಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ರಾಷ್ಟ್ರದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದು, ಚುನಾವಣೆಗಳನ್ನು ಮುಂದೂಡುವುದೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದರು ಎಂದು ಅವರು ಹೇಳಿದ್ದಾರೆ.

ಸರಕಾರಿ ಮತ್ತು ಭದ್ರತಾ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಈ ಕುರಿತ ನಿರ್ಧಾರವನ್ನು ಅಧಿಕೃತವಾಗಿ ಸೋಮವಾರ ಘೋಷಿಸಲಾಗುತ್ತದೆ ಎಂದು ಅವರು ನುಡಿದರು.
ಮತ್ತಷ್ಟು
ಪಾಕ್ ಪರಿಸ್ಥಿತಿ: ರಾಷ್ಟ್ರಗಳೊಂದಿಗೆ ಅಮೆರಿಕ ಚರ್ಚೆ
ಭುಟ್ಟೋ ಕೊಂದದ್ದು ನಾವಲ್ಲ: ಉಗ್ರಗಾಮಿ ವಕ್ತಾರ
ಭುಟ್ಟೋ ಸಾವು ಗುಂಡೇಟಿನಿಂದಲೇ: ಪಿಪಿಪಿ ವಕ್ತಾರೆ
ಸ್ಫೋಟದಿಂದ ಸಿಡಿದ ಲೋಹದಿಂದಾಗಿ ಭುಟ್ಟೋ ಸಾವು?
ಭುಟ್ಟೋ ಹತ್ಯೆ: ಹೊತ್ತಿ ಉರಿಯುತ್ತಿರುವ ಪಾಕ್
ಲಾರ್ಖಾನದಲ್ಲಿ ಬೇನ್‌ಜಿರ್ ಅಂತ್ಯಕ್ರಿಯೇ