ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನಾರು ಮಾಸಗಳಲ್ಲಿ ಎಲ್‌ಟಿಟಿಇ ನಿರ್ನಾಮ
ದಶಕಗಳ ಕಾಲ ಶ್ರೀಲಂಕಾವನ್ನು ಕಾಡಿದ ಜಗತ್ತಿನ ಶಕ್ತಿಶಾಲಿ ಉಗ್ರಗಾಮಿ ಸಂಘಟನೆಗಳಲ್ಲಿ ಒಂದಾದ ಶ್ರೀಲಂಕಾದ ಎಲ್‌ಟಿಟಿಇ ಪಡೆಯನ್ನು ಇನ್ನಾರು ಮಾಸಗಳಲ್ಲೇ ನಿರ್ನಾಮ ಮಾಡುವುದಾಗಿ ಶ್ರೀಲಂಕಾ ಸೇನಾ ಮುಖ್ಯಸ್ಥ ಶರತ್ ಪೊನ್ಸೇಕಾ ತಿಳಿಸಿದ್ದಾರೆ.

ಎಲ್‌ಟಿಟಿಇ ಉಗ್ರರ ಬಿಗಿ ಹಿಡಿತವಿರುವ ಉತ್ತರ ವನ್ನಾ ಪ್ರದೇಶಕ್ಕೆ ಬೇಟಿ ನೀಡಿ ಸೇನಾ ಕಾರ್ಯಾಚರಣೆಯ ಕಾರ್ಯ ಪರಿಶೀಲಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದು ಎಲ್‌ಟಿಟಿಇ ಸಂಘಟನೆಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದಿದ್ದಾರೆ.

ಇನ್ನಾರು ತಿಂಗಳುಗಳ ನಂತರ ಎಲ್‌ಟಿಟಿಇ ಸಂಘಟನೆಯು ಇರುವುದಿಲ್ಲ ಮತ್ತು ಅದರ ಮುಖ್ಯಸ್ಥನು ಕೂಡಾ ಬದುಕಿರುವುದಿಲ್ಲ ಎನ್ನುವ ಹೇಳಿಕೆ ನೀಡುವ ಮೂಲಕ, ಲಂಕನ್ ಸೇನೆ ಈ ಪ್ರದೇಶದ ಮೇಲೆ ಸಾಧಿಸಿದ ಪ್ರಾಬಲ್ಯವನ್ನು ಒತ್ತಿ ಹೇಳಿದರು.

ಕಳೆದ ಆರು ತಿಂಗಳುಗಳುಗಳಿಂದ ಲಂಕಾದಲ್ಲಿ ತಮಿಳು ಉಗ್ರರು ಮತ್ತು ಸೇನಾಪಡೆ ಮಧ್ಯೆ ಭಾರಿ ಪ್ರಮಾಣದಲ್ಲಿ ಕದನಗಳು ಜರುಗಿದ್ದು, ಲಂಕನ್ ಸೇನೆ ಉಗ್ರರ ಪಡೆಯನ್ನು ಹಂತ ಹಂತವಾಗಿ ಹತ್ತಿಕ್ಕುವಲ್ಲಿ ಸಫಲವಾಗಿದೆ.

"ಎಲ್‌ಟಿಟಿಇ ಪಡೆಯಲ್ಲಿ ಇದೀಗ ಕೇವಲ 3 ಸಾವಿರ ಉಗ್ರರು ಮಾತ್ರ ಇದ್ದಾರೆ. ನಮ್ಮ ದಾಳಿಯಿಂದಾಗಿ ಅವರೆಲ್ಲರು ತಮ್ಮ ಪ್ರಾಣ ಉಳಿಸಿಕೊಳ್ಳುವುದು ತುಂಬಾ ದುಸ್ತರವಾಗಿದೆ ಮತ್ತು ಈ ಸಂಘಟನೆಯ ಪರಮೋಚ್ಛ ನಾಯಕ ವೆಲುಪಿಳ್ಳೆ ಪ್ರಭಾಕರನ್ ಅವರ ಮೇಲೆ ವಾಯು ದಾಳಿ ನಡೆಸಲು ವಾಯುಸೇನೆ ಸಿದ್ಧತೆಗಳನ್ನು ನಡೆಸಿದ್ದರಿಂದ ಅವರು ಇನ್ನಾರು ತಿಂಗಳಲ್ಲಿ ನಿರ್ನಾಮವಾಗಲಿದ್ದಾರೆ" ಎಂದು ಸೇನಾಧ್ಯಕ್ಷರು ಹೇಳಿದರು.
ಮತ್ತಷ್ಟು
ಪಿಪಿಪಿ ನಾಯಕನಾಗಿ ಬಿಲಾವಲ್ ಆಯ್ಕೆ
ಪಾಕಿಸ್ತಾನ: ಜ.8ರ ಚುನಾವಣೆ ಮುಂದಕ್ಕೆ
ಪಾಕ್ ಪರಿಸ್ಥಿತಿ: ರಾಷ್ಟ್ರಗಳೊಂದಿಗೆ ಅಮೆರಿಕ ಚರ್ಚೆ
ಭುಟ್ಟೋ ಕೊಂದದ್ದು ನಾವಲ್ಲ: ಉಗ್ರಗಾಮಿ ವಕ್ತಾರ
ಭುಟ್ಟೋ ಸಾವು ಗುಂಡೇಟಿನಿಂದಲೇ: ಪಿಪಿಪಿ ವಕ್ತಾರೆ
ಸ್ಫೋಟದಿಂದ ಸಿಡಿದ ಲೋಹದಿಂದಾಗಿ ಭುಟ್ಟೋ ಸಾವು?