ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
"ಡೇವೂ" ಅವ್ಯವಹಾರ: ಮರಣದಂಡನೆ ರದ್ದು, ಶಿಕ್ಷೆ ಕಡಿತ
ಇತಿಹಾಸದಲ್ಲಿ ಅತಿ ದೊಡ್ಡ ದಿವಾಳಿತನಕ್ಕೆ ಕಾರಣವಾದ ಭಾರಿ ಪ್ರಮಾಣದ ವಂಚನೆ ಎಸಗಿದ ಆರೋಪದಲ್ಲಿ ಮರಣದಂಡನೆ ಹಾಗೂ ಕಠಿಣ ಶಿಕ್ಷೆ ಎದುರಿಸುತ್ತಿದ್ದ ಡೇವೂ ಕಂಪನಿ ಉದ್ಯೋಗಿಗಳಿಗೆ ಕ್ಷಮಾದಾನ ನೀಡಿರುವ ದಕ್ಷಿಣ ಕೊರಿಯಾ ಅಧ್ಯಕ್ಷರು, ಕಂಪನಿ ಸ್ಥಾಪಕರ ಶಿಕ್ಷೆಯನ್ನೂ ರದ್ದುಗೊಳಿಸಿ, ಶಿಕ್ಷಿತರಿಗೆ ಹೊಸ ವರ್ಷದ ಕೊಡುಗೆ ನೀಡಿದ್ದಾರೆ.

ಡೇವೂ ಸ್ಥಾಪಕ ಕಿಮ್ ವೂ ಚೂಂಗ್ (71) ಹಾಗೂ ಶಿಕ್ಷಿತರಾದ ಉದ್ಯಮ ಮುಖಂಡರೂ ಸೇರಿದಂತೆ 74 ಮಂದಿಗೆ ದ.ಕೊರಿಯಾ ಅಧ್ಯಕ್ಷರು ಕ್ಷಮಾದಾನ ನೀಡಿದ್ದಾರೆ ಎಂದು ನ್ಯಾಯಾಂಗ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮರಣ ದಂಡನೆ ನಿಷೇಧಿಸುವ ಶಾಸನ ಜಾರಿಗೊಳಿಸುವ ಬಗ್ಗೆ ಯೋಚನೆ ಮಾಡುತ್ತಿರುವ ದ.ಕೊರಿಯಾ, ಕೊನೆಯ ಬಾರಿಗೆ ಮರಣ ದಂಡನೆ ವಿಧಿಸಿದ್ದು 1997ರ ಡಿಸೆಂಬರ್ 30ರಂದು. ಅಂದು 23 ಮಂದಿಯನ್ನು ಗಲ್ಲಿಗೇರಿಸಲಾಗಿತ್ತು. ಸದ್ಯಕ್ಕೆ ಆ ದೇಶದಲ್ಲಿ 58 ಮಂದಿ ಮರಣ ದಂಡನೆ ಎದುರಿಸುತ್ತಿದ್ದಾರೆ.

ಒಂದು ಕಾಲದಲ್ಲಿ ದೇಶದ ಎರಡನೇ ಅತಿದೊಡ್ಡ ವಾಣಿಜ್ಯ ಸಂಸ್ಥೆಯನ್ನು ನಡೆಸುತ್ತಿದ್ದ ಡೇವೂ ಸ್ಥಾಪಕ ಕಿಮ್ ಅವರನ್ನು, ಬಿಲಿಯಾಂತರ ಡಾಲರ್ ಅವ್ಯವಹಾರ ನಡೆಸಿದ ಆರೋಪದಲ್ಲಿ 2006ರಲ್ಲಿ ದೋಷಿ ಎಂದು ತೀರ್ಮಾನಿಸಿ, 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆ ಬಳಿಕ ಅನಾರೋಗ್ಯದ ಕಾರಣದಿಂದ ಶಿಕ್ಷೆ ಕಡಿತಗೊಳಿಸಲಾಗಿತ್ತು ಮತ್ತು ಅದನ್ನು ತಡೆ ಹಿಡಿಯಲಾಗಿತ್ತು.

ಒಂದು ಪುಟ್ಟ ಜವುಳಿ ಉದ್ಯಮವಾಗಿದ್ದ ಡೇವೂ ಕಂಪನಿಯನ್ನು ಕಿಮ್ ಅವರು ದೇಶದ ಎರಡನೇ ಅತಿದೊಡ್ಡ ವಾಣಿಜ್ಯ ಒಕ್ಕೂಟವಾಗಿ ಬೆಳೆಸಿದ್ದರು. ಒಂದು ಕಾಲದಲ್ಲಿ ಈ ಕಂಪನಿಯು 110 ದೇಶಗಳಲ್ಲಿ 3.20 ಲಕ್ಷ ಉದ್ಯೋಗಿಗಳಿಗೆ ಆಶ್ರಯ ನೀಡಿತ್ತು.

ಒಂದು ಕಾಲದಲ್ಲಿ ಹೀರೋ ಎದೇ ಪರಿಗಣಿಸಲ್ಪಟ್ಟಿದ್ದ ಕಿಮ್ ಅವರು, ಡೇವೂ ಕಂಪನಿಯು 70 ಶತಕೋಟಿಗೂ ಹೆಚ್ಚು ಡಾಲರ್ ಸಾಲದಲ್ಲಿ ಸಿಲುಕಿ, ಕಂಪನಿಯೇ ಮುಚ್ಚಿದ ಸಂದರ್ಭ 1999ರಲ್ಲಿ ದಕ್ಷಿಣ ಕೊರಿಯಾದಿಂದ ಪರಾರಿಯಾಗಿದ್ದರು. 2005ರಲ್ಲಿ ವಿಯೆಟ್ನಾಂನಿಂದ ಪುನಃ ದ.ಕೊರಿಯಾಗೆ ವಾಪಸಾಗಿದ್ದ ಅವರು, ಹಳೆಯ ಘಟನೆ ಮರೆತು ಸಂಧಾನಕ್ಕೆ ಸಿದ್ಧವಿರುವುದಾಗಿ ಘೋಷಿಸಿದ್ದರು. ಆಗ ಅವರನ್ನು ಬಂಧಿಸಲಾಗಿತ್ತು.

1999ರಲ್ಲಿ ದಕ್ಷಿಣ ಕೊರಿಯಾ ಸರಕಾರವು ಡೇವೂ ಕಂಪನಿಯ ಸಾಲವನ್ನು ತನ್ನ ಹೆಗಲಿಗೆ ತೆಗೆದುಕೊಂಡಿತ್ತು. ಇದರಿಂದ ದೇಶದ ತೆರಿಗೆದಾರರ ಮೇಲೆ ಭಾರೀ ಪ್ರಮಾಣದ ಹೊಡೆತವೂ ಬಿದ್ದಿತ್ತು.

ಈ ವಾಣಿಜ್ಯ ಒಕ್ಕೂಟವು ಹಲವಾರು ಪ್ರತ್ಯೇಕ ಉದ್ಯಮಗಳಾಗಿ ಒಡೆದುಹೋಗಿದೆ. ಅವುಗಳಲ್ಲಿ ಹಡಗು ನಿರ್ಮಾಣ, ಕಾರು ನಿರ್ಮಾಣ ಮತ್ತು ಸಿವಿಲ್ ಎಂಜಿನಿಯರಿಂಗ್ ಉದ್ಯಮಗಳೂ ಸೇರಿವೆ.
ಮತ್ತಷ್ಟು
ಇನ್ನಾರು ಮಾಸಗಳಲ್ಲಿ ಎಲ್‌ಟಿಟಿಇ ನಿರ್ನಾಮ
ಪಿಪಿಪಿ ನಾಯಕನಾಗಿ ಬಿಲಾವಲ್ ಆಯ್ಕೆ
ಪಾಕಿಸ್ತಾನ: ಜ.8ರ ಚುನಾವಣೆ ಮುಂದಕ್ಕೆ
ಪಾಕ್ ಪರಿಸ್ಥಿತಿ: ರಾಷ್ಟ್ರಗಳೊಂದಿಗೆ ಅಮೆರಿಕ ಚರ್ಚೆ
ಭುಟ್ಟೋ ಕೊಂದದ್ದು ನಾವಲ್ಲ: ಉಗ್ರಗಾಮಿ ವಕ್ತಾರ
ಭುಟ್ಟೋ ಸಾವು ಗುಂಡೇಟಿನಿಂದಲೇ: ಪಿಪಿಪಿ ವಕ್ತಾರೆ