ಬೆನಜೀರ್ ಭುಟ್ಟೋ ಅವರ ಸಾವು ದೇಶದ ಪ್ರಜಾಪ್ರಭುತ್ವಕ್ಕೆ ಬದ್ಧವಾಗಿರಬೇಕು ಎಂದು ಹೇಳುವ ಮೂಲಕ ಬ್ರಿಟಿಶ್ ಪ್ರಧಾನಿ ಗೋರ್ಡನ್ ಬ್ರೌನ್ ಅವರು ಪೂರ್ವ ನಿಶ್ಚಿತದಂತೆ ಪಾಕಿಸ್ತಾನದಲ್ಲಿ ಚುನಾವಣೆಯನ್ನು ನಡೆಸುವಂತೆ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಕರೆ ನೀಡಿದ್ದಾರೆ,
ಭುಟ್ಟೋ ಅವರ ಸಾವಿನ ಪರಂಪರೆಯು ಪಾಕಿಸ್ತಾನದ ಪ್ರಜಾಪ್ರಭುತ್ವದೊಂದಿಗಿನ ಬದ್ಧತೆಯಾಗಿರಬೇಕು ಎಂದು ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಬ್ರೌನ್ ಹೇಳಿದ್ದಾರೆ,
ಪಾಕಿಸ್ತಾನದಲ್ಲಿನ ಭಯೋತ್ಪಾದನೆಯನ್ನು ನಿರ್ಮೂಲನ ಮಾಡಲು ಶತಪ್ರಯತ್ನ ನಡೆಸುವುದಾಗಿ ಪ್ರಮಾಣ ಮಾಡಿದ ಬ್ರೌನ್, ಪ್ರಜಾಪ್ರಭುತ್ವ ಪ್ರಕ್ರಿಯೆಯು ಮುಂದುವರಿಯುವುದಾಗಿ ಖಚಿತಪಡಿಸಿದರು.
ಅಂತರಾಷ್ಟ್ರೀಯ ಸಮುದಾಯವು ಒಗ್ಗಟ್ಟಿನಲ್ಲಿದ್ದು, ಹಿಂಸಾತ್ಮಕ ಮತ್ತು ವಿಧ್ವಂಸಕ ಕೃತ್ಯಗಳನ್ನು ನಿರ್ಮೂಲನೆ ಮಾಡುವ ದೃಢ ನಿಶ್ಚಯವನ್ನು ಹೊಂದಿದೆ ಎಂದು ಬ್ರೌನ್ ಹೇಳಿದರು.
ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ರೂಪರೇಖೆಯನ್ನು ಮುಷರಫ್ ಹೊಂದಿದ್ದು, ಅದೇ ದಾರಿಯಲ್ಲಿ ಮುಂದುವರಿಯುವಂತೆ ನಾನು ಮುಷರಫ್ ಅವರಿಗೆ ಪ್ರೋತ್ಸಾಹಿಸುತ್ತೇನೆ ಎಂದು ಬ್ರೌನ್ ಹೇಳಿದ್ದು, ಮುಷರಫ್ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ಪಾಕಿಸ್ತಾನದ ಜನರಿಗೆ ದೇಶದ ಸಂತಾಪವನ್ನು ತಿಳಿಸಿದ್ದಾರೆ.
|