ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾ ತಮಿಳು ಸಂಸದನಿಗೆ ಗುಂಡಿಕ್ಕಿ ಹತ್ಯೆ
ರಾಜಧಾನಿಯ ಹಿಂದು ದೇವಸ್ಥಾನದಲ್ಲಿ ಹೊಸ ವರ್ಷದ ಸೇವೆಗೆ ಹಾಜರಾದ ಶ್ರೀಲಂಕಾದ ತಮಿಳು ಸಂಸದನನ್ನು ಅಜ್ಞಾತ ಬಂದೂಕುಧಾರಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಎಂದು ಆಸ್ಪತ್ರೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಯುಎನ್‌ಪಿ ಪಕ್ಷದ ಟಿ. ಮಹೇಶ್ವರನ್ ಅವರಿಗೆ ಶಿವ ಮಂದಿರದ ಒಳಗೆ ಗುಂಡಿಕ್ಕಿದ ಬಳಿಕ ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಗೆ ಸೇರಿಸಿದ ಸ್ವಲ್ಪ ಹೊತ್ತಿನಲ್ಲೇ ಅವರು ಅಸುನೀಗಿದರು ಎಂದು ಆಸ್ಪತ್ರೆಯ ವಕ್ತಾರೆ ಪುಷ್ಪಾ ಸೊಯ್ಸಾ ಹೇಳಿದ್ದಾರೆ.

ಅವರಿಗೆ ತಲೆ ಮತ್ತಿತರ ಕಡೆ ಗುಂಡೇಟಿನ ಗಾಯಗಳಾಗಿವೆ ಎಂದು ವಕ್ತಾರೆ ಹೇಳಿದರು. ಗಾಯಗೊಂಡ ಇನ್ನೂ 10 ಜನರನ್ನು ಚಿಕಿತ್ಸೆಗೆ ಕರೆತರಲಾಗಿದೆ. ಜಾಫ್ನಾದಲ್ಲಿ ಸತತ ಘರ್ಷಣೆಗಳಿಂದ ಕೂಡಿದ ಉತ್ತರ ಜಿಲ್ಲೆಯನ್ನು ಪ್ರತಿನಿಧಿಸುವ ಮಹೇಶ್ವರನ್ ಎಲ್‌ಟಿಟಿಇ ವಿರುದ್ಧ ಸರ್ಕಾರದ ಮಿಲಿಟರಿ ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಎರಡು ವರ್ಷಗಳ ಕೆಳಗೆ ಇದೇ ರೀತಿಯ ದಾಳಿಯಿಂದ ಅವರು ಪಾರಾಗಿದ್ದರು.

ಬಂದೂಕುದಾರಿಯು ದೇವಸ್ಥಾನದಲ್ಲಿ ಭಕ್ತರ ಜತೆ ಸೇರಿಕೊಂಡು ಪಿಸ್ತೂಲನ್ನು ತೆಗೆದು ಸಮೀಪದಿಂದ ಮಹೇಶ್ವರನ್ ಮೇಲೆ ಗುಂಡುಹಾರಿಸಿದನೆಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು
ಭಯೋತ್ಪಾದಕರ ವಿರುದ್ಧ ಒತ್ತಡ: ಬುಷ್
ಚುನಾವಣೆಯನ್ನು ನಡೆಸಿ:ಮುಷರಫ್‌ಗೆ ಬ್ರೌನ್ ಕರೆ
"ಡೇವೂ" ಅವ್ಯವಹಾರ: ಮರಣದಂಡನೆ ರದ್ದು, ಶಿಕ್ಷೆ ಕಡಿತ
ಇನ್ನಾರು ಮಾಸಗಳಲ್ಲಿ ಎಲ್‌ಟಿಟಿಇ ನಿರ್ನಾಮ
ಪಿಪಿಪಿ ನಾಯಕನಾಗಿ ಬಿಲಾವಲ್ ಆಯ್ಕೆ
ಪಾಕಿಸ್ತಾನ: ಜ.8ರ ಚುನಾವಣೆ ಮುಂದಕ್ಕೆ