ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಜ್ ಯಾತ್ರೆ:227 ಭಾರತೀಯರ ಸಾವು
ಈ ವರ್ಷದ ಹಜ್ ಯಾತ್ರೆಗೆಂದು ತೆರಳಿದ್ದ ಸುಮಾರು 221 ಭಾರತೀಯ ಯಾತ್ರಾರ್ಥಿಗಳು ಪ್ರಾಕೃತಿಕ ಕಾರಣಗಳಿಂದ ಸಾವನ್ನಪ್ಪಿದ್ದು, ಆರು ಜನರು ರಸ್ತೆ ಅಪಘಾತದಿಂದ ಮೃತಪಟ್ಟಿದ್ದಾರೆ.

ಭಾರತದ ವಿವಿಧ ನಗರಗಳಿಂದ ಸುಮಾರು 1.57 ಲಕ್ಷ ಯಾತ್ರಾರ್ಥಿಗಳನ್ನು ಹಜ್ ಯಾತ್ರೆಗೆ ಆಗಮಿಸಿದ್ದು,ಅದರಲ್ಲಿ ಕೆಲವರು ಭಾರತೀಯ ಹಜ್ ಕಮಿಟಿಯ ಮೂಲಕ ಆಗಮಿಸಿದ್ದರೆ ಉಳಿದವರು ವಿವಿಧ ಪ್ರಯಾಣ ಏಜೆಂಟ್‌ಗಳ ಮುಖಾಂತರ ಆಗಮಿಸಿದ್ದರು.

ಸುಮಾರು 20,000 ಯಾತ್ರಾರ್ಥಿಗಳು ಹಜ್ ಕಮಿಟಿಯ ಮೂಲಕ ಯಾತ್ರೆಗೆ ತೆರೆಳಿದ್ದಾರೆ ಎಂದು ಭಾರತೀಯ ಹಜ್ ನಿಯೋಗಿ ಸುಹೇಲ್ ಅಜಾಜ್ ಖಾನ್ ತಿಳಿಸಿದ್ದಾರೆ.

ಸುಮಾರು 86 ಭಾರತೀಯ ಯಾತ್ರಾರ್ಥಿಗಳು ಆಸ್ಪತ್ರೆಗಳಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ ಎಂದು ಅರಬ್ ವಾರ್ತೆಗಳು ಉಲ್ಲೇಖಿಸಿರುವುದಾಗಿ ಅವರು ಹೇಳಿದರು.

ಮೆಕ್ಕಾದ ಕೇಂದ್ರ ಹಜ್ ಕಮಿಟಿಯಿಂದ ಬಂದ ವರದಿಗಳ ಪ್ರಕಾರ ಹೆಚ್ಚಿನ ಯಾತ್ರಾರ್ಥಿಗಳು ಪ್ರಾಕೃತಿಕ ಕಾರಣಗಳಿಂದ ಮೃತಪಟ್ಟಿದ್ದಾರೆ

ಅಲ್ಲದೆ ಈ ಅವಧಿಯಲ್ಲಿ 778 ಟ್ರಾಫಿಕ್ ಅಪಘಾತಗಳು ಉಂಟಾಗಿವೆ. ಒಟ್ಟಾರೆ ಅಪಘಾತ, ಹಾಗೂ ವಿವಿಧ ರೀತಿಯ ಅನಾರೋಗ್ಯದ ಕಾರಣಗಳಿಂದ ಸುಮಾರು 11,700 ಮಂದಿಯನ್ನು ಆಸ್ಪತ್ರೆಗೆ ದಾಖಲಸಲಾಗಿದ್ದು, ಅದರಲ್ಲಿ 10,900 ಮಂದಿ ಬಿಡುಗಡೆಗೊಂಡಿದ್ದಾರೆ ಮತ್ತು 800ಕ್ಕೂ ಹೆಚ್ಚು ಯಾತ್ರಾರ್ಥಿಗಳು ಈಗಲೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.


ಮತ್ತಷ್ಟು
ಭುಟ್ಟೋ ಹತ್ಯೆ: ಹಂತಕರ ಸುಳಿವಿಗೆ 1 ಕೋಟಿ ಇನಾಮು
ವೈದ್ಯರಿಗೆ ಮೌನವಹಿಸಲು ಅಧಿಕಾರಿಗಳ ಸೂಚನೆ
ಶ್ರೀಲಂಕಾ ತಮಿಳು ಸಂಸದನಿಗೆ ಗುಂಡಿಕ್ಕಿ ಹತ್ಯೆ
ಭಯೋತ್ಪಾದಕರ ವಿರುದ್ಧ ಒತ್ತಡ: ಬುಷ್
ಚುನಾವಣೆಯನ್ನು ನಡೆಸಿ:ಮುಷರಫ್‌ಗೆ ಬ್ರೌನ್ ಕರೆ
"ಡೇವೂ" ಅವ್ಯವಹಾರ: ಮರಣದಂಡನೆ ರದ್ದು, ಶಿಕ್ಷೆ ಕಡಿತ