ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊಲಂಬೋ ಸ್ಫೋಟ:4 ಸಾವು, 23 ಮಂದಿಗೆ ಗಾಯ
ಸೇನಾ ಸಿಬ್ಬಂದಿಗಳನ್ನು ಕೊಂಡೊಯ್ಯುತ್ತಿದ್ದ ಬಸ್ಸನ್ನು ಗುರಿಯಾಗಿಸಿಕೊಂಡು ಕೊಲಂಬೋದ ಹೃದಯ ಭಾಗದಲ್ಲಿ ಬುಧವಾರ ಮುಂಜಾನೆ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಸೇನಾ ಸಿಬ್ಬಂದಿಗಳು ಸೇರಿದಂತೆ ಕನಿಷ್ಟ ನಾಲ್ಕು ಮಂದಿ ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿದ್ದಾರೆಎಂದು ರಕ್ಷಣಾ ಮತ್ತು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸ್ಫೋಟಗೊಂಡ ಸ್ಥಳದಿಂದ ಸುಮಾರು 25 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ ಮೂರು ಜನರು ತೀವ್ರವಾದ ಗಾಯದಿಂದಾಗಿ ಮೃತಪಟ್ಟಿದ್ದಾರೆ ಎಂದು ಕೊಲಂಬೋ ರಾಷ್ಟ್ರೀಯ ಆಸ್ಪತ್ರೆಯ ಅಪಘಾತ ಸೇವಾ ವಿಭಾಗದ ವೈದ್ಯ ಡಾ. ಹೆಕ್ಟರ್ ವೀರಸಿಂಗ್ ಹೇಳಿದ್ದಾರೆ.ಅಲ್ಲದೆ ಗಂಭೀರ ಸ್ಥಿತಿಯಲ್ಲಿರುವವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಹೆಕ್ಟರ್ ಹೇಳಿದ್ದಾರೆ.

ಗಾಯಗೊಂಡವರಲ್ಲಿ ಕೆಲವರು ಸೇನಾ ಸೈನಿಕರಾಗಿದ್ದು, ಉಳಿದವರು ನಾಗರಿಕರಾಗಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು ಹತ್ತು ಸೇನಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀಲಂಕಾ ಸೈನ್ಯದ ಪ್ರಧಾನ ಕಾರ್ಯಾಲಯದಿಂದ 100 ಮೀಟರ್ ದೂರದಲ್ಲಿರುವ ಜನನಿಬಿಡ ಪ್ರದೇಶ ಸ್ಲೇವ್ ಐಲ್ಯಾಂಡ್ ಪ್ರದೇಶದಲ್ಲಿ ಈ ಸ್ಫೋಟ ನಡೆದಿದ್ದು, ಸ್ಫೋಟ ನಡೆದ ಸ್ಥಳವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಬಿಗಿಭದ್ರತೆಯನ್ನು ನೀಡಲಾಗಿದೆ.

ಕಳೆದ ಮುಂಜಾನೆ ಜನನಿಬಿಡ ಹಿಂದೂ ದೇವಾಲಯವೊಂದರಲ್ಲಿ ಶ್ರೀಲಂಕಾ ವಿರೋಧ ಪಕ್ಷದ ಸಂಸತ್ ಸದಸ್ಯ ಟಿ.ಮಹೇಶ್ವರನ್ ಮತ್ತು ಅವರೊಂದಿಗಿದ್ದ ರಕ್ಷಣಾ ಸಿಬ್ಬಂದಿಗಳ ಮೇಲೆ ಅವರನ್ನು ಅನಾಮಿಕ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಬೆನ್ನಲ್ಲೇ ಈ ಸ್ಫೋಟವು ಸಂಭವಿಸಿದೆ.

ಇದಕ್ಕೆ ಪ್ರತಿಯಾಗಿ ಸಂಸದರ ರಕ್ಷಣಾ ಅಧಿಕಾರಿಗಳಿಂದ ಪ್ರತಿದಾಳಿ ನಡೆಸಿದ ಸಂದರ್ಭದಲ್ಲಿ ಗಾಯಗೊಂಡಿದ್ದ ತಮಿಳು ಗನ್‌ಮ್ಯಾನ್‌ನ್ನು ಬಂಧಿಸಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಹಜ್ ಯಾತ್ರೆ:227 ಭಾರತೀಯರ ಸಾವು
ಭುಟ್ಟೋ ಹತ್ಯೆ: ಹಂತಕರ ಸುಳಿವಿಗೆ 1 ಕೋಟಿ ಇನಾಮು
ವೈದ್ಯರಿಗೆ ಮೌನವಹಿಸಲು ಅಧಿಕಾರಿಗಳ ಸೂಚನೆ
ಶ್ರೀಲಂಕಾ ತಮಿಳು ಸಂಸದನಿಗೆ ಗುಂಡಿಕ್ಕಿ ಹತ್ಯೆ
ಭಯೋತ್ಪಾದಕರ ವಿರುದ್ಧ ಒತ್ತಡ: ಬುಷ್
ಚುನಾವಣೆಯನ್ನು ನಡೆಸಿ:ಮುಷರಫ್‌ಗೆ ಬ್ರೌನ್ ಕರೆ