ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭುಟ್ಟೋಗೆ ಶಾಂತಿ ಮರಣೋತ್ತರ ಪ್ರಶಸ್ತಿ
ಹತ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೆನಜೀರ್ ಭುಟ್ಟೋ ಅವರಿಗೆ ಐರ್ಲಂಡಿನ 2007ರ ಟಿಪ್ಪರರಿ ಶಾಂತಿ ಮರಣೋತ್ತರ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ತನ್ನ ಮನಮುಟ್ಟುವ ಭಾಷಣ ಮತ್ತು ರಾಜಕೀಯ ಪ್ರಚಾರಗಳ ಮೂಲಕ ಭುಟ್ಟೋ ತನ್ನ ಎಲ್ಲಾ ಅಧಿಕಾರ ಕಾಳಗದ ವಿರುದ್ಧ ಹೋರಾಡಿದ್ದಾರೆ ಎಂದು ಟಿಪ್ಪರರಿ ಶಾಂತಿ ಅಧಿವೇಶನವು ಉಲ್ಲೇಖಿಸಿದ್ದನ್ನು ನಿಯತಕಾಲಿಕವೊಂದು ವರದಿ ಮಾಡಿದೆ.

ಪ್ರಜಾಪ್ರಭುತ್ವ ಮತ್ತು ಸಾಮರಸ್ಯಕ್ಕಾಗಿ ಕಾರ್ಯನಿರ್ವಹಿಸಿದ್ದ ಭುಟ್ಟೋ ತನ್ನ ಧೈರ್ಯದ ಮೂಲಕ ಎಲ್ಲರಿಂದಲೂ ಗುರುತಿಸಲ್ಪಟ್ಟಿದ್ದರು ಎಂದು ಹೇಳಿಕೆಗಳು ತಿಳಿಸಿವೆ.

ಭುಟ್ಟೋಗೆ ನೀಡುವ ಶಾಂತಿ ಮರಣೋತ್ತರ ಪ್ರಶಸ್ತಿಯು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಮರಸ್ಯವನ್ನು ನಿರ್ಮಿಸಲು ಪ್ರಯತ್ನಿಸುವವರಿಗೆಲ್ಲಾ ಪ್ರಚೋದನೆಯನ್ನು ನೀಡಲಿದೆ ಎಂಬುದಾಗಿ ತಿಳಿಸಿದೆ.

ಪಾಕಿಸ್ತಾನದಲ್ಲಿ ಶಾಂತಿ ಮತ್ತು ಪ್ರಜಾಪ್ರಭುತ್ವ ಸ್ಥಾಪಿಸಲು ಕಷ್ಟಕರ ಹಾದಿಯಲ್ಲಿ ಸಾಗಿದ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಲು ತನ್ನ ರಾಲಿಯಲ್ಲಿ ಅಂತಿಮವಾಗಿ ತನ್ನನ್ನೇ ತ್ಯಾಗಮಾಡಿದ ಭುಟ್ಟೋಗೆ ಕೃತಜ್ಞತೆ ನೀಡುವ ಸಲುವಾಗಿ ಇದನ್ನು ನೀಡಲಾಗಿದೆ ಎಂದು ಅಧಿವೇಶನವು ತಿಳಿಸಿದೆ.

ಮುಂಬರುವ ಚುನಾವಣೆಯಲ್ಲಿ ತನ್ನ ಪಕ್ಷವನ್ನು ಮುನ್ನಡೆಸಲು ಗಡೀಪಾರಿನಿಂದ ತಾಯ್ನಾಡಿಗೆ ಮರಳಿದ್ದ ಮಾಜಿ ಪ್ರಧಾನಿ ಭುಟ್ಟೋ, ಅತ್ಯಂತ ಧೈರ್ಯವಂತೆ ಮತ್ತು ಪರಾಕ್ರಮಿ ಮಹಿಳೆಯಾಗಿದ್ದಾರೆ.

ತನ್ನ ಹಿಂತಿರುಗುವಿಕೆಯಲ್ಲಿ ಅಪಾಯವಿದೆ ಎಂದು ತಿಳಿದಿದ್ದರೂ ಭುಟ್ಟೋ ಪಾಕಿಸ್ತಾನಕ್ಕೆ ಹಿಂತಿರುಗಿದ್ದರು ಯಾಕೆಂದರೆ ಪಾಕಿಸ್ತಾನದ ಜನತೆಗೆ ತನ್ನ ಅಗತ್ಯವಿದೆ ಎಂದು ಅವರು ಎಣಿಸಿದ್ದರು.

ಐರ್ಲಂಡ್ ಮತ್ತು ವಿದೇಶಗಳಲ್ಲಿ ಶಾಂತಿ ಮತ್ತು ಸಹಕಾರದ ಆದರ್ಶಕ್ಕೆ ಬೆಂಬಲ ನೀಡುವವರಿಗೆ ಮನ್ನಣೆಯನ್ನು ನೀಡುವ ಸಲುವಾಗಿ 1984ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು.
ಮತ್ತಷ್ಟು
ಕೊಲಂಬೋ ಸ್ಫೋಟ:4 ಸಾವು, 23 ಮಂದಿಗೆ ಗಾಯ
ಹಜ್ ಯಾತ್ರೆ:227 ಭಾರತೀಯರ ಸಾವು
ಭುಟ್ಟೋ ಹತ್ಯೆ: ಹಂತಕರ ಸುಳಿವಿಗೆ 1 ಕೋಟಿ ಇನಾಮು
ವೈದ್ಯರಿಗೆ ಮೌನವಹಿಸಲು ಅಧಿಕಾರಿಗಳ ಸೂಚನೆ
ಶ್ರೀಲಂಕಾ ತಮಿಳು ಸಂಸದನಿಗೆ ಗುಂಡಿಕ್ಕಿ ಹತ್ಯೆ
ಭಯೋತ್ಪಾದಕರ ವಿರುದ್ಧ ಒತ್ತಡ: ಬುಷ್