ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾನವನಗಿಂತಲೂ ಮೊದಲು ನಗುತ್ತಿದ್ದ ಪೂರ್ವಜ!
ಚಲನಚಿತ್ರವೊಂದರ ವಿಲನ್ ಪಾತ್ರವು ಆ ಒಂದು ವಿಶಿಷ್ಟ ನಗೆಯಿಲ್ಲದೆ ಪರಿಪೂರ್ಣವಾಗುವುದೇ ಇಲ್ಲ. ಆದರೆ ಇಂಥ ನಗುವಿನ ವಿಕಾಸ ಹೇಗಾಯಿತು ಎಂಬ ಬಗ್ಗೆ ಏನಾದರೂ ಯೋಚಿಸಿದ್ದೀರಾ?

ಈ ಕುರಿತು ನಡೆಸಿದ ಅಧ್ಯಯನವೊಂದನ್ನು ನಂಬಬಹುದಾದರೆ, ಈ ಪ್ರಕ್ರಿಯೆ ಆರಂಭವಾಗಿದ್ದು ನಮ್ಮ ಪೂರ್ವಜರಿಂದ ನಾವು ಬೇರ್ಪಟ್ಟ ಅವಧಿಯಿಂದ. ಅರ್ಥವಾಗಲಿಲ್ಲವೇ? ನಮ್ಮ ಸಮೀಪದ ಪೂರ್ವಜರಾದ ಮಂಗಮಾನವ (ಏಪ್)ರಿಂದ.

ಅಂತಾರಾಷ್ಟ್ರೀಯ ಸಂಶೋಧಕರ ತಂಡವೊಂದು ಈ ಕುರಿತು ಅಧ್ಯಯನ ನಡೆಸಿ, ನಗುವಿನ ಉಗಮವಾಗಿದ್ದು ಮಾನವರಿಂದ ಅಲ್ಲ, ಮಂಗಮಾನವರಿಂದ. ಒರಂಗುಟಾನ್ ವರ್ಗದ ಈ ಮಂಗಮಾನವರಲ್ಲಿ ನಗುವಿನ ಮುಖ್ಯ ನಾಡಿಯಾದ ಭಾವನೆಗಳನ್ನು ಗ್ರಹಿಸುವ ಮತ್ತು ಮಿಮಿಕ್ರಿ ಮಾಡುವ ಶಕ್ತಿ ಇತ್ತು ಎಂದವರು ತಿಳಿಸಿರುವುದಾಗಿ ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

ಪೋರ್ಟ್ಸ್‌ಮೌತ್ ವಿವಿಯ ಮುಖ್ಯ ಸಂಶೋಧಕ ಡಾ.ಮರೀನಾ ಡೇವಿಲಾ ರಾಸ್ ಅವರ ಪ್ರಕಾರ, ಮಾನವರಲ್ಲಿರುವ ತ್ವರಿತ ಅನೈಚ್ಛಿಕ ಮೌಖಿಕ ಅನುಕರಣೆಗೆ ಸಂಬಂಧಿಸಿದ ಧನಾತ್ಮಕ ಭಾವನೆ ಮತ್ತು ಭಾವನೆಗಳ ಗ್ರಹಿಸುವ ಸಾಮರ್ಥ್ಯದ ಮೂಲ ಬೇರುಗಳು ಮಾನವನ ವಿಕಾಸಕ್ಕಿಂತ ಮುಂಚಿತವಾಗಿಯೇ ಇದ್ದವು ಎಂಬುದು ಸ್ಪಷ್ಟವಾಗಿದೆ.

25 ಒರಂಗುಟಾನ್‌ಗಳ ಗುಂಪು ಮೌಖಿಕ ಅಭಿವ್ಯಕ್ತಿಯನ್ನು ಯಾವ ರೀತಿಯಾಗಿ ಗ್ರಹಿಸಿಕೊಂಡು ನಕಲು ಮಾಡುತ್ತಿವೆ ಎಂಬುದನ್ನು ವಿಶ್ಲೇಷಿಸಿ ವಿಶ್ವಾದ್ಯಂತವಿರುವ ನಾಲ್ಕು ಪ್ರೈಮೇಟ್ ಕೇಂದ್ರಗಳಲ್ಲಿ ಈ ಅಧ್ಯಯನ ನೆರವೇರಿಸಲಾಗಿತ್ತು. ಅವುಗಳಲ್ಲೊಂದು ಒರಂಗುಟಾನ್, ಮಾನವನ ನಗುವಿಗೆ ಸಮಾನವಾಗಿ ಬಾಯಿ ಅಗಲಿಸಿದಾಗ, ಸಂಶೋಧಕರು ಇತರ ಒರಂಗುಟಾನ್‌ಗಳ ಪ್ರತಿಕ್ರಿಯೆಯನ್ನು ಪರಿಶೀಲಿಸಿದರು.

ಅರ್ಧ ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ ಆ ಒರಂಗುಂಟಾನ್‌ನ ಸಹಭಾಗಿ ಕೂಡ ಅದೇ ರೀತಿ ಭಾವನೆಯನ್ನು ತನ್ನ ಮುಖದಲ್ಲಿ ವ್ಯಕ್ತಪಡಿಸಿತು. ಇಲ್ಲಿ ಮಿಮಿಕ್ರಿ ಅಥವಾ ಅನುಕರಣೆ ಎಂಬುದು ಅನೈಚ್ಛಿಕ ಪ್ರದರ್ಶನವಾಗಿತ್ತು ಎಂದು ಡಾ.ರಾಸ್ ಹೇಳಿದ್ದಾರೆ.

ಭಾವನೆಗಳ ಗ್ರಹಣ ಶಕ್ತಿಯ ಬಗ್ಗೆ ಮತ್ತು ಗುಂಪಾಗಿ ವಾಸಿಸುವ ಪ್ರಾಣಿಗಳಲ್ಲಿ ಅವುಗಳ ಮಹತ್ವದ ಬಗ್ಗೆ ಈ ಸಂಶೋಧನೆ ಹೊಸ ಬೆಳಕು ಚೆಲ್ಲಿದೆ. ಧನಾತ್ಮಕ ಭಾವನೆಯ ಮತ್ತು ಹರಡುವ ನಗೆಯ ಗ್ರಹಣ ಸಾಮರ್ಥ್ಯವು ಮಾನವನಿಗಿಂತಲೂ ಮೊದಲು ಇತ್ತು ಎಂಬುದನ್ನು ಇದು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ ಡಾ.ರಾಸ್.
ಮತ್ತಷ್ಟು
ಭುಟ್ಟೋಗೆ ಶಾಂತಿ ಮರಣೋತ್ತರ ಪ್ರಶಸ್ತಿ
ಕೊಲಂಬೋ ಸ್ಫೋಟ:4 ಸಾವು, 23 ಮಂದಿಗೆ ಗಾಯ
ಹಜ್ ಯಾತ್ರೆ:227 ಭಾರತೀಯರ ಸಾವು
ಭುಟ್ಟೋ ಹತ್ಯೆ: ಹಂತಕರ ಸುಳಿವಿಗೆ 1 ಕೋಟಿ ಇನಾಮು
ವೈದ್ಯರಿಗೆ ಮೌನವಹಿಸಲು ಅಧಿಕಾರಿಗಳ ಸೂಚನೆ
ಶ್ರೀಲಂಕಾ ತಮಿಳು ಸಂಸದನಿಗೆ ಗುಂಡಿಕ್ಕಿ ಹತ್ಯೆ