ಪ್ರತಿಪಕ್ಷದ ನಾಯಕಿ ಬೇನಜೀರ್ ಭುಟ್ಟೊ ಅವರ ಹತ್ಯೆ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಹಿಂಸಾಚಾರ ಮತ್ತು ಗೊಂದಲದ ಪರಿಸ್ಥಿತಿ ಉದ್ಭವಿಸಿದ್ದು, ಫೆಬ್ರವರಿ 18ರವರೆಗೆ ಇನ್ನೂ 6 ವಾರಗಳ ಕಾಲ ಸಂಸತ್ ಚುನಾವಣೆಯನ್ನು ವಿಳಂಬ ಮಾಡುವುದಾಗಿ ಪಾಕಿಸ್ತಾನ ಚುನಾವಣೆ ಅಧಿಕಾರಿಗಳು ಬುಧವಾರ ಪ್ರಕಟಿಸಿದರು.
ಜ.8ರಂದು ಪಾಕಿಸ್ತಾನದಲ್ಲಿ ಚುನಾವಣೆ ನಿಗದಿಯಾಗಿತ್ತು. ಆದರೆ ಅದೇ ದಿನ ಚುನಾವಣೆ ನಡೆಸುವುದು ಅಸಾಧ್ಯ ಎಂದು ಚುನಾವಣೆ ಆಯೋಗದ ಮುಖ್ಯಸ್ಥ ಕಾಜಿ ಮಹಮ್ಮದ್ ಫಾರೂಕ್ ತಿಳಿಸಿದರು. ಸಂಭವನೀಯ ಸೋಲನ್ನು ತಪ್ಪಿಸಿಕೊಳ್ಳಲು ಚುನಾವಣೆಯನ್ನು ಮುಂದೂಡುತ್ತಿದೆ ಎಂದು ಪ್ರತಿಪಕ್ಷಗಳು ಪಾಕಿಸ್ತಾನ ಸರ್ಕಾರವನ್ನು ಟೀಕಿಸಿವೆ.
ಬೇನಜೀರ್ ಭುಟ್ಟೊ ನಿಧನದ ಬಳಿಕ ತಲ್ಲಣಿಸಿದ ರಾಷ್ಟ್ರದಲ್ಲಿ ಚುನಾವಣೆಯನ್ನು ವಿಳಂಬ ಮಾಡುವುದರಿಂದ ಇನ್ನಷ್ಟು ಹಿಂಸಾಚಾರಕ್ಕೆ ಎಡೆಯಾಗುತ್ತದೆಂದು ಅವು ಶಂಕಿಸಿವೆ.ಏತನ್ಮಧ್ಯೆ, ಆಫ್ಘನ್ ಗಡಿಗೆ ಸಮೀಪದ ಹೊರವಲಯದಲ್ಲಿ ಅಲ್ ಖಾಯಿದಾ ಮತ್ತು ತಾಲಿಬಾನ್ ಉಗ್ರರ ಕಾರ್ಯಾಚರಣೆ ಸ್ಥಳದಲ್ಲಿ 25 ಶಂಕಿತ ಉಗ್ರರನ್ನು ಪಾಕಿಸ್ತಾನ ಪಡೆಗಳು ಹತ್ಯೆ ಮಾಡಿವೆ.
|