ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭುಟ್ಟೋ ಹತ್ಯೆ ತನಿಖೆಗೆ ಸ್ಕಾಟ್‌ಲ್ಯಾಂಡ್ ಸಹಾಯ
ಜನವರಿ ಎಂಟರಂದು ನಿಗದಿಯಾಗಿದ್ದ ಚುನಾವಣೆಯನ್ನು ಚುನಾವಣಾ ಆಯೋಗವು ಫೆಬ್ರವರಿ 18ಕ್ಕೆ ಮುಂದೂಡಲ್ಪಟ್ಟಿದ್ದರೂ, ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯ ತನಿಖೆಗೆ ಸ್ಕಾಟ್‌ಲ್ಯಾಂಡ್ ಯಾರ್ಡ್ ಸಹಾಯ ಮಾಡಲು ಒಪ್ಪಿರುವುದಾಗಿ ಪಾಕಿಸ್ತಾನ ಅಧ್ಯಕ್ಷ ಪರ್ವೆಜ್ ಮುಷರಫ್ ಹೇಳಿದ್ದಾರೆ.

ಭುಟ್ಟೋ ಅವರ ಹತ್ಯೆಯ ಸನ್ನಿವೇಶದಲ್ಲಿ, ಪಾಕಿಸ್ತಾನದಲ್ಲಿ ಚುನಾವಣೆಯನ್ನು ಜನವರಿ 8ರಂದು ನಡೆಸುವ ಬದಲು ಫೆಬ್ರವರಿ 18ರಂದು ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಕ್ವಾಜಿ ಮಹಮ್ಮದ್ ಫಾರೂಖ್ ಬುಧವಾರ ಇಸ್ಲಾಮಾಬಾದಿನಲ್ಲಿ ಸುದ್ದಿಗಾರರಿಗೆ ಹೇಳಿದರು.

ಡಿಸೆಂಬರ್ 27ರಂದು ನಡೆದ ಭುಟ್ಟೋ ಹತ್ಯೆಯ ಪರಿಣಾಮವಾಗಿ ಕಾನೂನು ವ್ಯವಸ್ಥೆಯು ಸರಿಯಾಗಿಲ್ಲದ ಕಾರಣ ಈಗ ಚುನಾವಣೆಯನ್ನು ನಡೆಸಲಾಗುವುದಿಲ್ಲ ಮತ್ತು ಮುಂದಿನ ವಾರದ ಕೊನೆಯಲ್ಲಿ ಮೊಹರಂ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದರು.

ಭುಟ್ಟೋ ಅವರ ಪಾಕಿಸ್ತಾನಿ ಪೀಪಲ್ ಪಾರ್ಟಿ ಚುನಾವಣೆ ಮುಂದೂಡಿಕೆಯನ್ನು ವಿರೋಧಿಸಿದೆ. ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಪಿಎಂಎಲ್-ಎನ್ ಪಕ್ಷವು ಕೂಡಾ ನಿಗದಿಯಂತೆ ಚುನಾವಣೆಯನ್ನು ನಡೆಸಲು ಒತ್ತಾಯಿಸಿದೆ.

ಏನೇ ಆದರೂಚುನಾವಣೆಯನ್ನು ಮುಂದೂಡುವಂತೆ ಆಗ್ರಹಿಸಿ ಪಿಎಂಎಲ್-ಕ್ಯೂ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಒತ್ತಾಯಿಸಿದೆ.

ಮತ್ತಷ್ಟು
ಪಾಕಿಸ್ತಾನದ ಸಂಸತ್ ಚುನಾವಣೆ ಮುಂದೂಡಿಕೆ
ಮಾನವನಗಿಂತಲೂ ಮೊದಲು ನಗುತ್ತಿದ್ದ ಪೂರ್ವಜ!
ಭುಟ್ಟೋಗೆ ಶಾಂತಿ ಮರಣೋತ್ತರ ಪ್ರಶಸ್ತಿ
ಕೊಲಂಬೋ ಸ್ಫೋಟ:4 ಸಾವು, 23 ಮಂದಿಗೆ ಗಾಯ
ಹಜ್ ಯಾತ್ರೆ:227 ಭಾರತೀಯರ ಸಾವು
ಭುಟ್ಟೋ ಹತ್ಯೆ: ಹಂತಕರ ಸುಳಿವಿಗೆ 1 ಕೋಟಿ ಇನಾಮು