ಅತ್ಯಂತ ಹೆಚ್ಚು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಚೀನಾ ದೇಶವು ಅಪರಾಧಿಗಳನ್ನು ಗುಂಡಿಕ್ಕಿ ಕೊಲ್ಲುವ ಬದಲು ಮಾರಕ ಚುಚ್ಚುಮದ್ದು ನೀಡಿ ಶಿಕ್ಷೆ ಜಾರಿ ಮಾಡುವ ಇಂಗಿತ ವ್ಯಕ್ತಪಡಿಸಿದೆ ಎಂದು ಸರಕಾರಿ ಮಾಧ್ಯಮ ಗುರುವಾರ ತಿಳಿಸಿವೆ.
ನ್ಯೂಯಾರ್ಕ್ ಮೂಲದ ಮಾನವ ಹಕ್ಕು ವೀಕ್ಷಣಾ ತಂಡದ ವರದಿಗಳ ಪ್ರಕಾರ, ಚೀನಾ ಪ್ರತಿವರ್ಷ ಸುಮಾರು 10,000 ಜನರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸುತ್ತದೆ. ಇತರ ವರದಿಗಳ ಪ್ರಕಾರ, ಚೀನಾದ ವಾರ್ಷಿಕ ಮರಣದಂಡನೆ ಪ್ರಮಾಣ 5,000ರಿಂದ 12,000.
ಮಾರಕ ಚುಚ್ಚುಮದ್ದನ್ನು ಅತ್ಯಂತ ಮಾನವೀಯ ಎಂದು ಪರಿಗಣಿಸಲಾಗಿದ್ದು, ಇದನ್ನು ಅಂತಿಮವಾಗಿ ಜನತಾ ನ್ಯಾಯಾಲಯಗಳಲ್ಲಿ ಉಪಯೋಗಿಸಲಾಗುತ್ತದೆ ಎಂದು ಸುಪ್ರೀಂ ಪೀಪಲ್ಸ್ ಕೋರ್ಟ್‌ನ ಉಪಾಧ್ಯಕ್ಷ ಜಯಾಂಗ್ ಕ್ಸಿಂಗ್‌ಚಾಂಗ್ ಅವರನ್ನು ಉಲ್ಲೇಖಿಸಿ ಚೀನಾ ಡೈಲಿ ವರದಿ ಮಾಡಿದೆ.
ಮರಣದಂಡನೆ ಶಿಕ್ಷೆಯ ಕುರಿತು ಜನರ ಆಕ್ರೋಶದ ಹೆಚ್ಚಿದ ಪರಿಣಾಮವಾಗಿ ಈ ಪದ್ಧತಿಯಲ್ಲಿ ಚೀನಾವು ನಿಧಾನವಾಗಿ ಸುಧಾರಣೆಯನ್ನು ಮಾಡುತ್ತಿದೆ.
1980ರ ಅವಧಿಯಲ್ಲಿ ಅಪರಾಧಿ ಜನಾಂದೋಲನದ ಪ್ರಯುಕ್ತ ಪ್ರಾಂತೀಯ ಹೈಕೋರ್ಟ್‌ಗಳಿಗೆ ನೀಡಿದ್ದ ಮರಣದಂಡನೆಯ ಅಂಗೀಕಾರವನ್ನು ಕಳೆದ ವರ್ಷ ಸುಪ್ರೀಮ್ ಪೀಪಲ್ಸ್ ಕೋರ್ಟ್ ಹಿಂದಕ್ಕೆ ಪಡೆದುಕೊಂಡಿತ್ತು.
|