ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಕಾಟ್ಲೆಂಡ್ ಯಾರ್ಡ್ ಬೇಡ, ವಿಶ್ವಸಂಸ್ಥೆ ತನಿಖೆಯಾಗಲಿ: ಜರ್ದಾರಿ
ಬೇನಜೀರ್ ಭುಟ್ಟೋ ಅವರ ಹತ್ಯೆಯ ಕುರಿತಾಗಿ ಸ್ಕಾಟ್ಲೆಂಡ್ ಯಾರ್ಡ್ ತನಿಖೆಯನ್ನು ಭುಟ್ಟೋ ಪತಿ, ಪಾಕಿಸ್ತಾನ ಪೀಪಲ್ ಪಾರ್ಟಿ ಉಪಾಧ್ಯಕ್ಷ ಆಸಿಫ್ ಅಲಿ ಜರ್ದಾರಿ ತಿರಸ್ಕರಿಸಿದ್ದು, ವಿಶ್ವಸಂಸ್ಥೆ ಪ್ರಾಯೋಜಿತ ಆಯೋಗವೇ ಈ ಘಟನೆಯ ತನಿಖೆ ನಡೆಸಬೇಕೆಂದು ಪುನರುಚ್ಚರಿಸಿದ್ದಾರೆ.

ನೌದಿರೋದಲ್ಲಿ ಬುಧವಾರ ಪಕ್ಷದ ಕೇಂದ್ರ ಕಾರ್ಯನಿರ್ವಾಹಕ ಸಮಿತಿ ಮತ್ತು ಒಕ್ಕೂಟ ಮಂಡಳಿಯ ಜಂಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಚುನಾವಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಿಸಿರುವುದನ್ನು ಖಂಡಿಸಿದರು. ಮರುನಿಗದಿಗೊಂಡ ಚುನಾವಣೆಯಲ್ಲಿ ಪಿಪಿಪಿ ಪಕ್ಷವು ಸಂಪೂರ್ಣವಾಗಿ ಭಾಗವಹಿಸುತ್ತದೆ ಮತ್ತು ಆಡಳಿತಗಾರರಿಗೆ ಪಲಾಯನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಹಾಲಿ ಉಸ್ತುವಾರಿ ಸರಕಾರವು ಅನನುಭವಿಗಳಿಂದ ಕೂಡಿದ ಗುಂಪು, ಅವರಿಗೆ ಸರಕಾರ ನಡೆಸುವ ಅನುಭವವೇ ಇಲ್ಲ ಎಂದು ಟೀಕಿಸಿದ ಜರ್ದಾರಿ, ಮುಕ್ತ, ಪಾರದರ್ಶಕ ಚುನಾವಣೆ ನಡೆಸುವಂತಾಗಲು ಈ ಸರಕಾರ ರಾಜೀನಾಮೆ ನೀಡಿ, ಅನುಭವಿ ಉಸ್ತುವಾರಿ ಸರಕಾರವೊಂದಕ್ಕೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ.

ಹುಟ್ಟಾ ನಾಯಕನಲ್ಲ: ಬಿಲಾವಲ್

ಈ ಮಧ್ಯೆ, ತಾನು ಹುಟ್ಟಾ ನಾಯಕನಲ್ಲ ಎಂದು ಭುಟ್ಟೋ ಅವರ ಪುತ್ರ ಬಿಲಾವಲ್ ಭುಟ್ಟೋ ಹೇಳಿದ್ದು, ತನ್ನ ಜೀವದ ಮೇಲಿರುವ ತೀವ್ರ ಅಪಾಯಗಳಿಗೆ ಲಕ್ಷ್ಯ ಕೊಡದೆ ತನ್ನ ಕರ್ತವ್ಯ ನೆರವೇರಿಸಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.

ನಾನು ಹುಟ್ಟು ನಾಯಕನಲ್ಲ. ಅಲ್ಲದೆ ನಾನು ರಾಜಕಾರಣಿ ಕೂಡಾ ಅಲ್ಲ. ನನಗೆ ಮುಂದಾಳುತ್ವ ವಹಿಸುವ ಕಾಲ ಬಂದೇ ಬರುತ್ತದೆ. ಎಂದು ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್ "ಫೇಸ್‌ಬುಕ್"ನಲ್ಲಿ ಬಂದ ನೂರಾರು ಸಂತಾಪ ಸಂದೇಶಗಳಿಗೆ ಉತ್ತರಿಸುತ್ತಾ ಪಿಪಿಪಿ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ 19 ವರ್ಷದ ಬಿಲಾವಲ್ ಹೇಳಿದ್ದಾರೆ.
ಮತ್ತಷ್ಟು
ಮರಣದಂಡನೆಗೆ ಚುಚ್ಚುಮದ್ದು: ಚೀನಾ ಇಂಗಿತ
ಭುಟ್ಟೋ ಹತ್ಯೆ ತನಿಖೆಗೆ ಸ್ಕಾಟ್‌ಲ್ಯಾಂಡ್ ಸಹಾಯ
ಪಾಕಿಸ್ತಾನದ ಸಂಸತ್ ಚುನಾವಣೆ ಮುಂದೂಡಿಕೆ
ಮಾನವನಗಿಂತಲೂ ಮೊದಲು ನಗುತ್ತಿದ್ದ ಪೂರ್ವಜ!
ಭುಟ್ಟೋಗೆ ಶಾಂತಿ ಮರಣೋತ್ತರ ಪ್ರಶಸ್ತಿ
ಕೊಲಂಬೋ ಸ್ಫೋಟ:4 ಸಾವು, 23 ಮಂದಿಗೆ ಗಾಯ