ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಲಿಬಾನ್ ತಂಡದಿಂದ ಪಾಕ್ ಸರಕಾರಕ್ಕೆ ಗಡುವು
ವಾಯುವ್ಯ ಸ್ವಾಟ್ ಕಣಿವೆಯಿಂದ ಎರಡು ದಿನಗಳೊಳಗೆ ಸೇನೆಯನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದಲ್ಲಿ ದೇಶದಾದ್ಯಂತ ದಾಳಿಯನ್ನು ನಡೆಸಲಾಗುವುದು ಎಂದು ಬೇನಜೀರ್ ಭುಟ್ಟೋ ಹಂತಕ ಎಂಬುದಾಗಿ ಪಾಕಿಸ್ತಾನ ಸರಕಾರದಿಂದ ದೂಷಣೆಗೊಳಪಟ್ಟ ತಾಲಿಬಾನ್ ತಂಡದ ಮುಖ್ಯಸ್ಥ ಬೈತುಲ್ಹಾ ಮೆಹ್ಸದ್ ಎಚ್ಚರಿಕೆ ನೀಡಿದ್ದಾರೆ.

ವಾಯುವ್ಯ ಗಡಿ ಪ್ರಾಂತ್ಯದಲ್ಲಿರುವ ತನ್ನ ಸೇನಾ ಕಾರ್ಯಾಚರಣೆಯನ್ನು ಸ್ತಗಿತಗೊಳಿಸಲು ಮತ್ತು ಆ ಪ್ರದೇಶದಿಂದ ರಕ್ಷಣಾ ಪಡೆಗಳನ್ನು ತೆರವುಗೊಳಿಸಲು ಮೆಹ್ಸದ್ ಮುಖ್ಯಸ್ಥನೊಂದಿಗೆ ಡಿಸೆಂಬರ್ ತಿಂಗಳಲ್ಲಿ ಸ್ಥಾಪಿಸಲ್ಪಟ್ಟ ತೆಹ್ರಿಕ್ ತಾಲಿಬಾನ್ ಇ ಪಾಕಿಸ್ತಾನ್, ಪಾಕಿಸ್ತಾನ ಸರಕಾರಕ್ಕೆ ಎರಡು ದಿನಗಳ ಗಡುವು ನೀಡಿದೆ.

ಒಂದು ವೇಳೆ ತಮ್ಮ ಆಗ್ರಹವನ್ನು ನಿರ್ಲಕ್ಷಿಸಿದ್ದಲ್ಲಿ ತನ್ನ ಕ್ರಮವನ್ನು ವಜಿರಿಸ್ತಾನ್‌ನಿಂದ ಕೊಹಿಸ್ತಾನ್‌ವರೆಗೆ ವಿಸ್ತರಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ಮೊದಲು ರಕ್ಷಣಾ ಪಡೆಗಳನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್‌ವರೆಗೆ ಗಡುವು ನೀಡಲಾಗಿತ್ತು ಆದರೆ ಇದರ ಕುರಿತಾಗಿ ಉಗ್ರಗಾಮಿಗಳು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಯಾಕೆಂದರೆ ಭುಟ್ಟೋ ಹತ್ಯೆಯಿಂದ ದೇಶವು ಶೋಕಾಚರಣೆಯಲ್ಲಿತ್ತು ಎಂದು ತಂಡದ ವಕ್ತಾರ ಮೌಲ್ವಿ ಮಹಮ್ಮದ್ ದಿನಪತ್ರಿಕೆಯೊಂದಕ್ಕೆ ಬುಧವಾರ ದೂರವಾಣಿ ಮೂಲಕ ಹೇಳಿದ್ದಾರೆ.

ಈಗ ನಾವು ಗಡುವನ್ನು ಎರಡು ದಿನಗಳಿಗೆ ವಿಸ್ತರಿಸಿದ್ದೇವೆ. ಮತ್ತು ರಕ್ಷಣಾ ಪಡೆಗಳನ್ನು ಮತ್ತು ಅವರ ಕಾರ್ಯಾಚರಣೆಗಳನ್ನು ಹಿಂತೆಗೆಯುವಂತೆ ಸರಕಾರಕ್ಕೆ ತಿಳಿಸಿದ್ದೇವೆ. ಒಂದು ವೇಳೆ ನಮ್ಮ ಬೇಡಿಕೆಯನ್ನು ಮನ್ನಿಸದಿದ್ದಲ್ಲಿ ನಾವು ಎಲ್ಲಾ ಕಡೆ ದಾಳಿ ಮಾಡಲಿದ್ದೇವೆ ಮತ್ತು ಇದು ಸರ್ವಾಧಿಕಾರ ಯುದ್ಧವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಮತ್ತಷ್ಟು
ಸ್ಕಾಟ್ಲೆಂಡ್ ಯಾರ್ಡ್ ಬೇಡ, ವಿಶ್ವಸಂಸ್ಥೆ ತನಿಖೆಯಾಗಲಿ: ಜರ್ದಾರಿ
ಮರಣದಂಡನೆಗೆ ಚುಚ್ಚುಮದ್ದು: ಚೀನಾ ಇಂಗಿತ
ಭುಟ್ಟೋ ಹತ್ಯೆ ತನಿಖೆಗೆ ಸ್ಕಾಟ್‌ಲ್ಯಾಂಡ್ ಸಹಾಯ
ಪಾಕಿಸ್ತಾನದ ಸಂಸತ್ ಚುನಾವಣೆ ಮುಂದೂಡಿಕೆ
ಮಾನವನಗಿಂತಲೂ ಮೊದಲು ನಗುತ್ತಿದ್ದ ಪೂರ್ವಜ!
ಭುಟ್ಟೋಗೆ ಶಾಂತಿ ಮರಣೋತ್ತರ ಪ್ರಶಸ್ತಿ