ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ಚುನಾವಣೆ: ಹಿಲರಿಗೆ ಆರಂಭಿಕ ಆಘಾತ
ಅಮೆರಿಕದ ಪ್ರಥಮ ಮಹಿಳಾ ಅಧ್ಯಕ್ಷೆಯಾಗುವ ಹಾದಿಯಲ್ಲಿ ಹಿಲರಿ ಕ್ಲಿಂಟನ್‌ಗೆ ಮೊದಲ ತಡೆ ಎದುರಾಗಿದೆ. 2008ರಲ್ಲಿ ಶ್ವೇತಭವನದ ಗದ್ದುಗೆ ಏರುವ ಡೆಮಾಕ್ರಟಿಕ್ ಪಕ್ಷದ ನಾಮನಿರ್ದೇಶನದ ಆರಂಭಿಕ ಸ್ಪರ್ಧೆಯಲ್ಲಿ ಬಾರಕ್ ಒಬಾಮ ಅವರು ಇಯೋವಾ ಪ್ರಾಂತ್ಯದಲ್ಲಿ ಹಿಲರಿ ವಿರುದ್ಧ ಜಯ ಸಾಧಿಸಿದ್ದಾರೆ.

ರಿಪಬ್ಲಿಕನ್ ಬಣದಿಂದ, ಬ್ಯಾಪ್ಟಿಸ್ಟ್ ಬೋಧಕ, ರಾಜಕಾರಣಿ ಮೈಕ್ ಹಕಬೀ ಅವರು ಮೆಸಾಚುಸೆಟ್ಸ್‌ನ ಮಾಜಿ ಗವರ್ನರ್ ಮಿಟ್ ರಾಮ್ನಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಹಿಲರಿಗೆ ಸೆಡ್ಡು ಹೊಡೆದು, ಅಮೆರಿಕದ ಮೊದಲ ಕರಿಯ ಅಧ್ಯಕ್ಷ ಎಂದು ಇತಿಹಾಸ ಸೃಷ್ಟಿಸುವ ಯತ್ನದಲ್ಲಿರುವ 46ರ ಹರೆಯದ ಒಬಾಮ, ತಮ್ಮ ಸಮೀಪದ ಸ್ಪರ್ಧಿಗಳಾದ ನ್ಯೂಯಾರ್ಕ್ ಸೆನೆಟರ್, ಮಾಜಿ ಪ್ರಥಮ ಮಹಿಳೆ ಹಿಲರಿ ಕ್ಲಿಂಟನ್ ಹಾಗೂ ನಾರ್ತ್ ಕರೊಲಿನಾದ ಮಾಜಿ ಸೆನೆಟರ್ ಜಾನ್ ಎಡ್ವರ್ಡ್ಸ್ ಅವರನ್ನು ಸೋಲಿಸಿದರು. ಎರಡನೇ ಸ್ಥಾನಕ್ಕಾಗಿ ಹಿಲರಿ ಮತ್ತು ಎಡ್ವರ್ಡ್ಸ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಸೋಲಿನ ಬಳಿಕ ಹಿಲರಿ ಅವರು ಒಬಾಮ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಮಂಗಳವಾರ ನಡೆಯಲಿರುವ ನ್ಯೂಹ್ಯಾಂಪ್‌ಶೈರ್‌ನ ಚುನಾವಣೆಯಲ್ಲಿ ಜಯಗಳಿಸುವ ಆಶಾವಾದ ಹೊಂದಿರುವುದಾಗಿ ತಿಳಿಸಿದರು.

ಅಮೆರಿಕಾದ್ಯಂತ ನಡೆಯುವ ಚುನಾವಣಾ ಪ್ರಚಾರದ ಉಳಿದ ಭಾಗಕ್ಕೆ ನಾನು ಸಿದ್ಧವಾಗಿದ್ದೇನೆ. ಅವುಗಳಲ್ಲಿ ಮುನ್ನಡೆ ಸಾಧಿಸುವೆ ಎಂಬ ಭರವಸೆ ಇದೆ ಎಂದು ಅಯೋವಾದಲ್ಲಿ ಹಿಲರಿ ನುಡಿದರು.
ಮತ್ತಷ್ಟು
ತಾಲಿಬಾನ್ ತಂಡದಿಂದ ಪಾಕ್ ಸರಕಾರಕ್ಕೆ ಗಡುವು
ಸ್ಕಾಟ್ಲೆಂಡ್ ಯಾರ್ಡ್ ಬೇಡ, ವಿಶ್ವಸಂಸ್ಥೆ ತನಿಖೆಯಾಗಲಿ: ಜರ್ದಾರಿ
ಮರಣದಂಡನೆಗೆ ಚುಚ್ಚುಮದ್ದು: ಚೀನಾ ಇಂಗಿತ
ಭುಟ್ಟೋ ಹತ್ಯೆ ತನಿಖೆಗೆ ಸ್ಕಾಟ್‌ಲ್ಯಾಂಡ್ ಸಹಾಯ
ಪಾಕಿಸ್ತಾನದ ಸಂಸತ್ ಚುನಾವಣೆ ಮುಂದೂಡಿಕೆ
ಮಾನವನಗಿಂತಲೂ ಮೊದಲು ನಗುತ್ತಿದ್ದ ಪೂರ್ವಜ!