ನವಂಬರ್ ತಿಂಗಳಲ್ಲಿ ಸರಕಾರೇತರ ಹಿಂದು ಸಂಘಟನೆ ತಾರತಮ್ಯ ವಿರೋಧಿಸಿ ಆಯೋಜಿಸಿದ್ದ ಕಾನೂನುಬಾಹಿರ ಸಭೆಯಲ್ಲಿ ಪಾಲ್ಗೊಂಡು ಬಂಧನಕ್ಕೊಳಗಾದ 54 ಭಾರತೀಯರ ಜಂಟಿ ವಿಚಾರಣೆ ನಡೆಸುವುದಕ್ಕೆ ಮಲೇಷ್ಯಾ ನ್ಯಾಯಾಲಯ ಅನುಮತಿಸಿದೆ.
54 ಭಾರತೀಯರಲ್ಲಿನ 37 ಮಂದಿ ನ್ಯಾಯಾಲಯದ ಎದುರು ಹಾಜರಾಗಿದ್ದು, ಹಿಂಡ್ರಾಪ್‌ನಿಂದ ಆಯೋಜಿಸಲ್ಪಟ್ಟ ಕಾನೂನುಬಾಹಿರ ಸಭೆಯಲ್ಲಿ ಪಾಲ್ಗೊಂಡಿದ್ದರ ಮೇಲೆ ವಿಚಾರಣೆ ನಡೆಸುವಂತೆ ಕೇಳಿಕೊಂಡರು. ಉಳಿದ 17 ಮಂದಿಗೆ ನ್ಯಾಯಾಲಯ ದಿನಾಂಕದ ಕುರಿತು ತಿಳಿದಿರಲಿಲ್ಲ ಎಂದು ಆರೋಪಿಗಳ ಪರ ವಕೀಲ ಸಿವನಾಥನ್ ಹೇಳಿದ್ದಾರೆ.
ಸುಮಾರು 16 ಫಿರ್ಯಾದಿ ಸಾಕ್ಷಿಗಳು ಸಾಕ್ಷ್ಯ ನೀಡುವ ನಿರೀಕ್ಷೆ ಇದೆ ಎಂದು 9 ಸದಸ್ಯರ ಫಿರ್ಯಾದಿ ತಂಡದ ನೇತೃತ್ವ ವಹಿಸಿದ ಅಟಾರ್ನಿ-ಜನರಲ್ ಅಬ್ದುಲ್ ಗನಿ ಪಟೈಲ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಮುಂದಿನ ವಿಚಾರಣೆ ದಿನಾಂಕವನ್ನು ಮಾರ್ಚ್ 3ಕ್ಕೆ ನಿಗದಿ ಪಡಿಸಿರುವ ನ್ಯಾಯಾಲಯ, ಎಲ್ಲಾ 54 ಆರೋಪಿಗಳ ಸಾಮೂಹಿಕ ವಿಚಾರಣೆ ನಡೆಸಲು ಅನುಮೋದನೆ ನೀಡಿದೆ.
ಬುಡಕಟ್ಟು ಭಾರತೀಯರ ಮೇಲಿನ ತಾರತಮ್ಯದ ವಿರುದ್ಧ ಕಳೆದ ವರ್ಷ ನವೆಂಬರ್ 25ರಂದು ಹಿಂಡ್ರಾಫ್ ಭಾರಿ ಪ್ರತಿಭಟನೆಯನ್ನು ಆಯೋಜಿಸಿತ್ತು. ಸರಕಾರದಿಂದ ಕಾನೂನುಬಾಹಿರ ಎಂದು ಘೋಷಿಲ್ಪಟ್ಟಿದ್ದ ಈ ಸಭೆಯಲ್ಲಿ ಸಮುದಾಯದ ಸುಮಾರು 20,000 ಮಂದಿ ಪಾಲ್ಗೊಂಡಿದ್ದರು.
ಅಧಿಕಾರಿಗಳು ಅನೇಕ ಪ್ರತಿಭಟನಾಕಾರರನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು. ಆದರೆ ಈಗ ಹಿಂಡ್ರಾಫ್‌ನ 5 ಸದಸ್ಯರು ಮಾತ್ರ ಬಂಧನದಲ್ಲಿದ್ದಾರೆ. ಇವರನ್ನು ವಿವಾದಿತ ಆಂತರಿಕ ಭದ್ರತಾ ಕಾಯ್ದೆ (ಐಎಸ್ಎ) ಅಡಿ ಬಂಧಿಸಲಾಗಿತ್ತು.
|