ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭುಟ್ಟೊ ಹತ್ಯೆ: ಸ್ಕಾಟ್ಲೆಂಡ್ ಯಾರ್ಡ್ ತನಿಖೆ ಆರಂಭ
ಡಿಸೆಂಬರ್ 27ರಂದು ಗುಂಡೇಟಿಗೆ ಬಲಿಯಾದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆಯ ತನಿಖೆ ನಡೆಸಲು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಪಾಕಿಸ್ತಾನಕ್ಕೆ ಆಗಮಿಸಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ.

ವಿಶ್ವದಲ್ಲಿಯೇ ನಂಬರ್ ಒನ್ ತನಿಖಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸ್ ಸಂಸ್ಥೆ ಇದಾಗಿದ್ದು, ತನಿಖೆಯನ್ನು ಸಂಪೂರ್ಣಗೊಳಿಸಿ, ಆರೋಪಿಗಳನ್ನು ಶೀಘ್ರವೇ ಪತ್ತೆ ಮಾಡುವ ವಿಶ್ವಾಸ ನಮಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರ ಐದು ಸದಸ್ಯರ ವಿಶೇಷ ತಂಡ ಈ ತನಿಖೆಯನ್ನು ಕೈಗೆತ್ತಿಕೊಳ್ಳಲಿದ್ದು, ಇದಕ್ಕಾಗಿ ಪಾಕಿಸ್ತಾನ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಭೃಷ್ಟಾಚಾರ ನಿಗ್ರಹ ದಳದಿಂದ ಮಹತ್ವದ ಮಾಹಿತಿ ಕಲೆ ಹಾಕುತ್ತಿದೆ ಎಂದು ಪಾಕಿಸ್ತಾನದ ಉನ್ನತ ಮೂಲಗಳು ವರದಿ ಮಾಡಿವೆ.

ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ನೇತೃತ್ವದಲ್ಲಿ ಶುಕ್ರವಾರ ಸಂಜೆ ಉನ್ನತ ಮಟ್ಟದ ಸಭೆಯೊಂದು ನಡೆದಿದ್ದು. ತನಿಖೆಗಾಗಿ ಆಗಮಿಸಿರುವ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರಿಗೆ ಪೂರ್ಣ ಪ್ರಮಾಣದ ಸಹಕಾರ ನೀಡಲು ಸಭೆ ನಿರ್ಧರಿಸಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ, ಪಾಕಿಸ್ತಾನದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು, ಪತ್ರಕರ್ತರಿಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಮತ್ತಷ್ಟು
ಭುಟ್ಟೋ ಹತ್ಯೆ: ಸ್ಕಾಟ್ಲೆಂಡ್ ಯಾರ್ಡ್ ತಂಡ ಪಾಕಿಸ್ತಾನಕ್ಕೆ
ಮಲೇಷ್ಯಾ: ಭಾರತೀಯ ಸಾಮೂಹಿಕ ವಿಚಾರಣೆಗೆ ಅನುಮತಿ
ಪರಮಾಣು ಬಿಕ್ಕಟ್ಟು: ಅಮೆರಿಕಕ್ಕೆ ದ.ಕೊರಿಯಾ ಸಹಕಾರ
ಮಾಹಿತಿ ನಿರ್ಲಕ್ಷಿಸಿದ ಭುಟ್ಟೋ: ಮುಷರಫ್ ಹೇಳಿಕೆ
ಅಮೆರಿಕ ಚುನಾವಣೆ: ಹಿಲರಿಗೆ ಆರಂಭಿಕ ಆಘಾತ
ತಾಲಿಬಾನ್ ತಂಡದಿಂದ ಪಾಕ್ ಸರಕಾರಕ್ಕೆ ಗಡುವು